AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತ್ನಿ ಕತ್ತು ಸೀಳಿದ್ದು ಅದೊಂದು ವಿಷಯಕ್ಕೆ: ಪೊಲೀಸರೆದುರು ಅಸಲಿ ಸತ್ಯ ಬಾಯ್ಬಿಟ್ಟ ಪತಿ

ಅದು ಮದುವೆಯಾದ ಎಂಟೇ ವರ್ಷದಲ್ಲಿ ಹಾದಿ ತಪ್ಪಿದ್ದ ಸಂಸಾರ..ಅಲ್ಲಿ ಬೆಳ್ಳಂಬೆಳಿಗ್ಗೆ ಕೆಲಸಕ್ಕೆ ಹೊರಡೋ ವೇಳೆ ಪತ್ನಿಯ ರಕ್ತದೋಕುಳಿಯೇ ಹರಿದಿತ್ತು..ಮಡದಿಯನ್ನ ಹತ್ಯೆಗೈದಿದ್ದ ರಕ್ಕಸ ಪತಿ, ಅದೊಂದು ವಿಷಯ ಪೊಲೀಸರೆದುರು ಬಾಯ್ಬಿಟ್ಟ..

ಪತ್ನಿ ಕತ್ತು ಸೀಳಿದ್ದು ಅದೊಂದು ವಿಷಯಕ್ಕೆ:  ಪೊಲೀಸರೆದುರು ಅಸಲಿ ಸತ್ಯ ಬಾಯ್ಬಿಟ್ಟ ಪತಿ
ಪತ್ನಿಯನ್ನು ಹತ್ಯೆಗೈದ ಪತಿ
TV9 Web
| Edited By: |

Updated on: Oct 19, 2022 | 8:40 PM

Share

ರಾಯಚೂರು: ರಾಯಚೂರು ತಾಲ್ಲೂಕಿನ ಏಗನೂರು ಅನ್ನೊ ಗ್ರಾಮದಲ್ಲಿ ಪತ್ನಿಯನ್ನು ಹತ್ಯೆ ಮಾಡಿದ್ದ ಪತಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಆದ್ರೆ, ಕೊಲೆ ಏಕೆ ಮಾಡಿದ್ದು ಎಂದು ಪೊಲೀಸರು ವಿಚಾರಣೆ ನಡೆಸುವ ವೇಳೆ ಸತ್ಯಾಂಶವನ್ನು ಬಾಯ್ಬಿಟ್ಟಿದ್ದಾನೆ.

ಪತ್ನಿ ಹತ್ಯೆಗೈದು ತಲೆಮರೆಸಿಕೊಂಡಿದ್ದ ಆರೋಪಿ ಪತಿ ​ಶಶಿಕುಮಾರನನ್ನ ರಾಯಚೂರು ಗ್ರಾಮೀಣ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಇಡೀ ಊರಿಗೆ ಊರೇ ಬೆಚ್ಚಿ ಬಿದ್ದಿದ್ದ ಕೇಸ್​​ನ ವಿಚಾರಣೆ ನಡೆಸಿದ್ದ ಪೊಲೀಸರು ಶಾಕ್ ಆಗಿದ್ರು..ಏಗನೂರು ಗ್ರಾಮಸ್ಥರಿಗೂ ಹತ್ಯೆಗೆ ಕಾರಣ ಏನು ಅನ್ನೋದು ಗೊತ್ತಿರ್ಲಿಲ್ಲ. ಆದ್ರೆ ಆರೋಪಿ ಶಶಿಕುಮಾರ್ ಪೊಲೀಸರೆದುರು ಅಸಲಿ ಸತ್ಯ ಬಾಯ್ಬಿಟ್ಟಿದ್ದಾನೆ.

Crime News: ಪ್ರೀತ್ಸೆ ಪ್ರೀತ್ಸೆ ಅಂತ ಹಿಂದೆ ಬಿದ್ದು ಮದುವೆಯಾಗಿ ಪತ್ನಿಯನ್ನು ಕೊಂದೇ ಬಿಟ್ಟ

ಆರೋಪಿ ಶಶಿಕುಮಾರ್ ಹಾಗೂ ಪಲ್ಲವಿ ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ರು..ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಪತ್ನಿ ಮೊದಲು ಇದೇ ಏಗನೂರು ಗ್ರಾಮದಲ್ಲಿ ಅಂಗನವಾಡಿಯಲ್ಲಿ ಅಡುಗೆ ಸಹಾಯಕಿಯಾಗಿ ಸ್ವಲ್ಪ ದಿನ ಕೆಲಸ ಮಾಡಿದ್ರು..ಬಳಿಕ ಆಕೆಗೆ ಇದೇ ರಾಯಚೂರು ತಾಲ್ಲೂಕಿನ ಸಂಕನೂರು ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಶಿಕ್ಷಕಿಯಾಗಿ ಪ್ರಮೋಷನ್ ಆಗಿತ್ತು.

ಇದಾದ ಬಳಿಕ ಆಕೆ ವ್ಯಕ್ತಿಯೊಬ್ಬನ ಜೊತೆ ಅನೈತ್ತಿಕ ಸಂಬಂಧ ಹೊಂದಿದ್ಲಂತೆ. ಫೋನ್ ನಲ್ಲಿ ಗಂಟೆಗಟ್ಟಲೇ ಮಾತನಾಡೋದು, ಎಲ್ಲೆಂದರಲ್ಲಿ ಓಡಾಡೊದು ಮಾಡುತ್ತಿದ್ಲಂತೆ. ಅಷ್ಟೇ ಅಲ್ಲ, ಆಕೆ ಬೇರೊಬ್ಬನ ಜೊತೆ ಇರೋದನ್ನ ಖುದ್ದು ಆರೋಪಿ ಪತಿ ಶಶಿಕುಮಾರ್ ನೋಡಿದ್ದನಂತೆ. ಆದ್ರೂ ಆತ ದೃತಿಗೆಡದೇ ಪತ್ನಿಗೆ ತಿಳಿಹೇಳಿದ್ದ..ಇದಾದ ಬಳಿಕವೂ ಆಕೆ ತನ್ನ ಚಾಳಿ ಮುಂದುವರೆಸಿದ್ಲಂತೆ.

ಇದಾದ ನಂತರ ಶಶಿಕುಮಾರ್ ಕುಡಿದು ಪತ್ನಿಗೆ ಕಿರುಕುಳ ಕೊಡಲು ಶುರುಮಾಡಿದ್ದ..ಇದೇ ಕಾರಣಕ್ಕೆ ಆಕೆ ಹತ್ಯೆಯಾಗಿರೊ ಹಿಂದಿನ ದಿನ ಮಹಿಳಾ ಠಾಣೆಗೆ ಹೋಗಿದ್ದಳು. ಆಗ ಪೊಲೀಸರು ಶಶಿಕುಮಾರ್​ಗೆ ಕರೆ ಮಾಡಿ, ವಾರ್ನ್​ ಸಹ ಮಾಡಿದ್ರು.. ಆದ್ರೆ ಅದೇ ಆಕೆ ಮತ್ತೆ ಆ ವ್ಯಕ್ತಿ ಜೊತೆ ಇದ್ದದ್ದನ್ನ ಪತಿ ಶಶಿಕುಮಾರ್​ ನೋಡಿದ್ದನಂತೆ. ಅದೇ ಕೋಪಕ್ಕೆ ಮಾರನೇ ದಿನ ಪತ್ನಿ ಕೈಗೆ ಸಿಕ್ಕಾಗ ಕೊಡಲಿಯಿಂದ ಹತ್ಯೆಗೈದಿದ್ದಿನಿ ಅಂತ ಪೊಲೀಸರೆದುರು ಬಾಯ್ಬಿಟ್ಟಿದ್ದಾನೆ.

ಪ್ರಕರಣದ ಹಿನ್ನೆಲೆಯಲ್ಲಿ

ಅದು ಅಕ್ಟೋಬರ್ 17ರ ಬೆಳಗಿನ ಜಾವ ರಾಯಚೂರು ತಾಲ್ಲೂಕಿನ ಏಗನೂರು ಅನ್ನೊ ಗ್ರಾಮದಲ್ಲಿ ಅದೊಂದು ದುರ್ಘಟನೆ ನಡೆದುಹೋಗಿತ್ತು. ಪಲ್ಲವಿ ಹಾಗೂ ಶಶಿಕುಮಾರ್ ಅನ್ನೊ ದಂಪತಿಯ ಮನೆಯಲ್ಲಿ ರಕ್ತದೋಕುಳಿಯೇ ಹರಿದಿತ್ತು .ಅಂಗನವಾಡಿ ಶಿಕ್ಷಕಿಯಾಗಿದ್ದ ಪಲ್ಲವಿ ಅಂದು ಬೆಳಿಗ್ಗೆ ಎದ್ದು, ಮನೆಗೆಲಸ ಮಾಡಿ ಕೆಲಸಕ್ಕೆ ಹೋಗೊಕೆ ಮುಂದಾಗಿದ್ಲು..ಅದರಂತೆ ಆಕೆ ಮನೆಗೆಲಸ ಮಾಡುತ್ತಿದ್ಲು. ಪಲ್ಲವಿ ಮನೆ ಒರೆಸುತ್ತಿದ್ದ ವೇಳೆ ಹಿಂಬಂದಿಯಲ್ಲಿ ಕೊಡಲಿ ಹಿಡಿದು ನಿಂತಿದ್ದ ಪತಿ ಶಶಿಕುಮಾರ್, ನೋಡನೋಡುತ್ತಲೇ ಪತ್ನಿ ಕತ್ತನ್ನ ಸೀಳಿಬಿಟ್ಟಿದ್ದ.

ಕೊಡಲಿಯಿಂದ ಪತ್ನಿ ಪಲ್ಲವಿಯ ಕತ್ತಿಗೆ ಆರು ಏಟು ಹೊಡೆದಿದ್ದ. ಆ ಕೊಡಲಿ ಏಟಿಗೆ ಪಲ್ಲವಿ ಸ್ಥಳದಲ್ಲೇ ಉಸಿರುಚೆಲ್ಲಿದ್ಲು. ಇತ್ತ ಮನೆಯೊಳಗೆ ಮಕ್ಕಳ ಕಿರುಚಾಟ ಜೋರಾಗಿತ್ತು. ಪತ್ನಿ ಪಲ್ಲವಿ ಹತ್ಯೆ ನಡೆಸಿದ ರಕ್ಕಸ ಪತಿ ಶಶಿಕುಮಾರ್, ಮನೆಹೊರಗಡೆ ನಿಂತು ಪಲ್ಲವಿ ಕಥೆ ಮುಗಿಸಿದ್ದಿನಿ ಅಂತ ಜೋರಾಗಿ ಕಿರುಚಿದ್ದ..ನಂತರ ಅಲ್ಲಿಂದ ಎಸ್ಕೇಪ್ ಆಗಿದ್ದ.

ಸದ್ಯ ರಾಯಚೂರು ಗ್ರಾಮೀಣ ಪೊಲೀಸರು ಆರೋಪಿ ಶಶಿಕುಮಾರ್​​ನನ್ನ ಬಂಧಿಸಿ ಜೈಲಿಗಟ್ಟಿದ್ದಾರೆ..ಇತ್ತ ಹೆತ್ತ ಮಗಳನ್ನ ಕಳೆದುಕೊಂಡಿರೊ ಕುಟುಂಬಸ್ಥರು ಕಣ್ಣೀರಲ್ಲಿ ಕೈತೊಳೆಯುತ್ತಿದ್ರೆ, ಆ ಮಕ್ಕಳು ತಂದೆ-ತಾಯಿ ಇಲ್ಲದೇ ಈಗ ಅಕ್ಷರಶಃ ಅನಾಥವಾಗಿವೆ.

(ವರದಿ: ಭೀಮೇಶ್ ಪೂಜಾರ್,ಟಿವಿ9 ರಾಯಚೂರು)