AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Madhya Pradesh: ಮಗುವಿನ ದೇಹ ಸಾಗಿಸಲು ಆ್ಯಂಬುಲೆನ್ಸ್ ನೀಡದ ಆಸ್ಪತ್ರೆ, ಬೈಕ್​ನ ಬಾಕ್ಸ್​ನಲ್ಲಿ ಮೃತದೇಹವಿರಿಸಿಕೊಂಡು ಬಂದ ದಂಪತಿ

ಸಾವನ್ನಪ್ಪಿರುವ ಮಗುವಿನ ದೇಹವನ್ನು ಬೈಕ್‌ನ ಸೈಡ್ ಬಾಕ್ಸ್​ನಲ್ಲಿರಿಸಿ ತಂದಿರುವ ಘಟನೆ ಮಧ್ಯಪ್ರದೇಶದ ಸಿಂಗ್ರೌಲಿನಲ್ಲಿ ನಡೆದಿದೆ. ಆಸ್ಪತ್ರೆಯಲ್ಲಿ ಆಂಬ್ಯುಲೆನ್ಸ್ ನೀಡಲು ನಿರಾಕರಿಸಿದ ಕಾರಣ ಈ ದಂಪತಿಗಳು ಮಗುವಿನ ದೇಹವನ್ನು ಬೈಕ್‌ನ ಸೈಡ್ ಬಾಕ್ಸ್‌ ಹಾಕಿಕೊಂಡು ಜಿಲ್ಲಾಧಿಕಾರಿ ಕಚೇರಿಗೆ ಸಹಾಯ ಮಾಡುವಂತೆ ಮನವಿ ಮಾಡಲು ಬಂದಿದ್ದಾರೆ.

Madhya Pradesh: ಮಗುವಿನ ದೇಹ ಸಾಗಿಸಲು ಆ್ಯಂಬುಲೆನ್ಸ್ ನೀಡದ ಆಸ್ಪತ್ರೆ, ಬೈಕ್​ನ ಬಾಕ್ಸ್​ನಲ್ಲಿ ಮೃತದೇಹವಿರಿಸಿಕೊಂಡು ಬಂದ ದಂಪತಿ
Madhya Pradesh medical negligence
TV9 Web
| Edited By: |

Updated on:Oct 19, 2022 | 4:49 PM

Share

ಸಿಂಗ್ರೌಲಿ: ಮಧ್ಯಪ್ರದೇಶದಲ್ಲೊಂದು ಅಘಾತಗಾರಿ ಸುದ್ದಿಯೊಂದು ಬೆಳಕಿಗೆ ಬಂದಿದೆ. ಸಾವನ್ನಪ್ಪಿರುವ ಮಗುವಿನ ದೇಹವನ್ನು ಬೈಕ್‌ನ ಸೈಡ್ ಬಾಕ್ಸ್​ನಲ್ಲಿರಿಸಿ ತಂದಿರುವ ಘಟನೆ ಮಧ್ಯಪ್ರದೇಶದ ಸಿಂಗ್ರೌಲಿನಲ್ಲಿ ನಡೆದಿದೆ. ಆಸ್ಪತ್ರೆಯಲ್ಲಿ ಆಂಬ್ಯುಲೆನ್ಸ್ ನೀಡಲು ನಿರಾಕರಿಸಿದ ಕಾರಣ ಈ ದಂಪತಿಗಳು ಮಗುವಿನ ದೇಹವನ್ನು ಬೈಕ್‌ನ ಸೈಡ್ ಬಾಕ್ಸ್‌ ಹಾಕಿಕೊಂಡು ಜಿಲ್ಲಾಧಿಕಾರಿ ಕಚೇರಿಗೆ ಸಹಾಯ ಮಾಡುವಂತೆ ಮನವಿ ಮಾಡಲು ಬಂದಿದ್ದಾರೆ.

ಜಿಲ್ಲಾಧಿಕಾರಿಗಳು ಮಗುವನ್ನು ತೋರಿಸಲು ಹೇಳಿದಾಗ ಮಗುವಿನ ತಂದೆ ದಿನೇಶ್ ಭಾರತಿ ಬೈಕ್‌ನ ಸೈಡ್ ಬಾಕ್ಸ್​ನ್ನು ತೆರೆದು ಚೀಲವನ್ನು ಹೊರತೆಗೆದರು. ತಾಯಿ ಮೀನಾ ಭಾರತಿ, ಚೀಲದ ಒಳಗೆ ಬಟ್ಟೆಯಲ್ಲಿ ಸುತ್ತಿಕೊಂಡಿದ ಪುಟ್ಟ ದೇಹವನ್ನು ನಿಧಾನವಾಗಿ ತೆಗೆದಿದ್ದಾರೆ.

ಹೆಂಡತಿಗೆ ಸೋಮವಾರದಂದು ಹೆರಿಗೆ ನೋವು ಬಂದಿದ್ದು ಹೆಂಡತಿಯನ್ನು ಸಿಂಗ್ರೌಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ಖಾಸಗಿ ಕ್ಲಿನಿಕ್‌ಗೆ ಕರೆದುಕೊಂಡು ಹೋಗುವಂತೆ ಹೇಳಿದ್ದಾರೆ ಎಂದು ದಂಪತಿಗಳು ಹೇಳಿಕೊಂಡಿದ್ದಾರೆ. ಕ್ಲಿನಿಕ್ ನಲ್ಲಿ 5,000 ರೂ ಕೇಳಿದ್ದರೆ ಹೇಳಲಾಗಿದೆ.

ನನ್ನ ಬಳಿ ಕೇವಲ 3,000 ರೂ. ಇದೆ ವೈದ್ಯರೇ ಎಂದು ಹೇಳಿದರು ವೈದ್ಯರು 5,000 ನೀಡಲೇ ಬೇಕು ಇಲ್ಲದಿದ್ದರೆ ಹೆರಿಗೆ ಮಾಡಿಸುವುದಿಲ್ಲ ಎಂದು ಹೇಳಿದ್ದಾರೆ. ಮರುದಿನ ಹಣವನ್ನು ಒಟ್ಟು ಮಾಡಿ ಆಸ್ಪತ್ರೆಗೆ ನೀಡಲಾಯಿತು ಆದರೆ ನನ್ನ ಮಗುವ ಬದುಕಲಿಲ್ಲ ಎಂದು ಮಗುವಿನ ತಂದೆ ಸುದ್ದಿಗಾರರಿಗೆ ಹೇಳಿದ್ದಾರೆ. ಮಗುವನ್ನು ತಮ್ಮ ಗ್ರಾಮಕ್ಕೆ ಹಿಂತಿರುಗಿಸಲು ದಂಪತಿಗಳು ಆಂಬ್ಯುಲೆನ್ಸ್ ಕೇಳಿದರು ಆದರೆ ಆಸ್ಪತ್ರೆ ಇದಕ್ಕೆ ನಿರಾಕರಿಸಿತು. ದಿನೇಶ್ ಭಾರತಿ ದಂಪತಿಗಳು ತಮ್ಮ ಸತ್ತಿರುವ ಮಗುವಿನ ಮೃತದೇಹವನ್ನು ಬೈಕ್‌ನ ಸೈಡ್ ಬಾಕ್ಸ್‌ನಲ್ಲಿ ಹಾಕಿಕೊಂಡು ಸಹಾಯಕ್ಕಾಗಿ ತಮ್ಮ ಪತ್ನಿ ಮತ್ತು ಸಾವನ್ನಪ್ಪಿರುವ ಮಗುವಿನ ಜೊತೆಗೆ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದಾರೆ.

ಇದನ್ನು ಓದಿ: Crime News: ಹೈದರಾಬಾದ್ ಶಾಲೆಯಲ್ಲಿ 4 ವರ್ಷದ ಬಾಲಕಿ ಮೇಲೆ ಪ್ರಿನ್ಸಿಪಾಲ್ ಚಾಲಕನಿಂದ ಅತ್ಯಾಚಾರ!

ಈ ಘಟನೆಯ ಬಗ್ಗೆ ತನಿಖೆ ನಡೆಸುತ್ತೇವೆ, ಇದಕ್ಕೆ ವಿಶೇಷ ಅಧಿಕಾರಿಗಳ ತಂಡವನ್ನು ರಚನೆ ಮಾಡಿ, ಆಸ್ಪತ್ರೆ ಮತ್ತು ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು. ಈ ದಂಪತಿಗಳಿ ಜಿಲ್ಲಾಡಳಿತದಿಂದ ಸಹಾಯ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ರಾಜೀವ್ ರಂಜನ್ ಮೀನಾ ಹೇಳಿದ್ದಾರೆ.

Published On - 4:48 pm, Wed, 19 October 22