ಕುಡಿದ ಮತ್ತಿನಲ್ಲಿ ಟ್ರಕ್ ಓಡಿಸಿ ಫುಟ್​ಪಾತ್​ ಮೇಲೆ ಮಲಗಿದ್ದ ಮೂವರನ್ನು ಕೊಂದ ಚಾಲಕ

ಮಹಾರಾಷ್ಟ್ರದ ಪುಣೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಕುಡಿದ ಅಮಲಿನಲ್ಲಿದ್ದ ಟ್ರಕ್ ಚಾಲಕ ಫುಟ್‌ಪಾತ್ ಮೇಲೆ ಮಲಗಿದ್ದ ಇಬ್ಬರು ಮಕ್ಕಳು ಸೇರಿದಂತೆ ಮೂವರ ಮೇಲೆ ಟ್ರಕ್ ಚಲಾಯಿಸಿ, ಅವರ ಸಾವಿಗೆ ಕಾರಣನಾಗಿದ್ದಾನೆ. ಮೃತರನ್ನು ವೈಭವಿ ಪವಾರ್ (1), ವೈಭವ್ ಪವಾರ್ (2) ಮತ್ತು ವಿಶಾಲ್ ಪವಾರ್ (22) ಎಂದು ಗುರುತಿಸಲಾಗಿದೆ. ಇನ್ನೂ 6 ಮಂದಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುಡಿದ ಮತ್ತಿನಲ್ಲಿ ಟ್ರಕ್ ಓಡಿಸಿ ಫುಟ್​ಪಾತ್​ ಮೇಲೆ ಮಲಗಿದ್ದ ಮೂವರನ್ನು ಕೊಂದ ಚಾಲಕ
pune accident

Updated on: Dec 23, 2024 | 3:12 PM

ಪುಣೆ: ಇಂದು ಮುಂಜಾನೆ ಟ್ರಕ್ ರಸ್ತೆಯಿಂದ ಫುಟ್‌ಪಾತ್‌ ಮೇಲೆ ಪಲ್ಟಿಯಾಗಿ ಬಿದ್ದು, ಅದರ ಮೇಲೆ ಮಲಗಿದ್ದ 9 ಜನರು ಟ್ರಕ್​ನಡಿ ಸಿಲುಕಿದ್ದಾರೆ. ಅವರಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಮತ್ತು 6 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಟ್ರಕ್ ಚಾಲಕನನ್ನು ಗಜಾನನ ಶಂಕರ್ ತೋಟೆ (26) ಎಂದು ಗುರುತಿಸಲಾಗಿದೆ. ಆತ ಕುಡಿದು ವಾಹನ ಚಲಾಯಿಸುತ್ತಿದ್ದ. ಆತನನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.

ವಘೋಲಿಯ ಕೇಸ್ನಂದ್ ಫಾಟಾ ಬಳಿ ಇಂದು ಮುಂಜಾನೆ 1 ಗಂಟೆಗೆ ಅಪಘಾತ ಸಂಭವಿಸಿದೆ. ಅತಿವೇಗದಲ್ಲಿ ಸಾಗುತ್ತಿದ್ದ ಡಂಪರ್ ಟ್ರಕ್ ಏಕಾಏಕಿ ರಸ್ತೆಯಿಂದ 12 ಮಂದಿ ಮಲಗಿದ್ದ ಫುಟ್‌ಪಾತ್‌ಗೆ ಪಲ್ಟಿಯಾಗಿದೆ. 9 ಮಂದಿ ಟ್ರಕ್ ಅಡಿ ಸಿಲುಕಿ ನಜ್ಜುಗುಜ್ಜಾಗಿದ್ದು, ಇತರರು ಗಾಯಗಳೊಂದಿಗೆ ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ.


ಇದನ್ನೂ ಓದಿ: ನೆಲಮಂಗಲ ಅಪಘಾತ: ದುರಂತಕ್ಕೂ ಮುನ್ನ ಚಂದ್ರಮ್ ಕೊನೆಯ ದೃಶ್ಯ ಇಲ್ಲಿದೆ ನೋಡಿ

ಸಂತ್ರಸ್ತರನ್ನು ತಕ್ಷಣವೇ ಸಾಸೂನ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಗಾಯಗೊಂಡವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ. ಮೃತರನ್ನು ವಿಶಾಲ್ ವಿನೋದ್ ಪವಾರ್ (22), ವೈಭವಿ ರಿತೇಶ್ ಪವಾರ್ (1), ಮತ್ತು ವೈಭವ್ ರಿತೇಶ್ ಪವಾರ್ (2) ಎಂದು ಗುರುತಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ