AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Punjab Crime: 4 ಕೋಟಿ ರೂ. ಇನ್ಶೂರೆನ್ಸ್​ ಪಡೆಯಲು ಸ್ನೇಹಿತನನ್ನು ಕೊಂದು ತಾನೇ ಸತ್ತಿದ್ದೇನೆಂದು ಬಿಂಬಿಸಿದ್ದ ವ್ಯಕ್ತಿಯ ಬಂಧನ

ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದ ಉದ್ಯಮಿಯೊಬ್ಬರು ಸ್ನೇಹಿತನೊಬ್ಬನನ್ನು ಕೊಂದು ತಾನೇ ಸತ್ತಿದ್ದೇನೆಂದು ಬಿಂಬಿಸಿ 4 ಕೋಟಿ ರೂ. ಇನ್ಶೂರೆನ್ಸ್​ ಪಡೆಯಲು ಯತ್ನಿಸಿರುವ ಘಟನೆ ಪಂಜಾಬ್​ನಲ್ಲಿ ನಡೆದಿದೆ.

Punjab Crime: 4 ಕೋಟಿ ರೂ. ಇನ್ಶೂರೆನ್ಸ್​ ಪಡೆಯಲು ಸ್ನೇಹಿತನನ್ನು ಕೊಂದು ತಾನೇ ಸತ್ತಿದ್ದೇನೆಂದು ಬಿಂಬಿಸಿದ್ದ ವ್ಯಕ್ತಿಯ ಬಂಧನ
ಜೈಲು
ನಯನಾ ರಾಜೀವ್
|

Updated on: Jun 29, 2023 | 9:44 AM

Share

ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದ ಉದ್ಯಮಿಯೊಬ್ಬರು ಸ್ನೇಹಿತನೊಬ್ಬನನ್ನು ಕೊಂದು ತಾನೇ ಸತ್ತಿದ್ದೇನೆಂದು ಬಿಂಬಿಸಿ 4 ಕೋಟಿ ರೂ. ಇನ್ಶೂರೆನ್ಸ್​ ಪಡೆಯಲು ಯತ್ನಿಸಿರುವ ಘಟನೆ ಪಂಜಾಬ್​ನಲ್ಲಿ ನಡೆದಿದೆ. ರಾಮದಾಸ್ ನಗರ ಪ್ರದೇಶದ ಗುರ್‌ಪ್ರೀತ್ ಸಿಂಗ್, ಅವರ ಪತ್ನಿ ಖುಷ್‌ದೀಪ್ ಕೌರ್ ಮತ್ತು ಇತರ ನಾಲ್ವರನ್ನು ಸುಖಜೀತ್ ಸಿಂಗ್ ಹತ್ಯೆ ಮಾಡಿರುವ ಆರೋಪದಲ್ಲಿ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಾವ್‌ಜೋತ್ ಕೌರ್ ಗ್ರೆವಾಲ್ ತಿಳಿಸಿದ್ದಾರೆ.

ಸುಖ್‌ಜೀತ್‌ನ ಪತ್ನಿ ಜೀವನ್‌ದೀಪ್ ಕೌರ್ ಅವರು ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗುರ್‌ಪ್ರೀತ್ ತನ್ನ ವ್ಯವಹಾರದಲ್ಲಿ ನಷ್ಟವನ್ನು ಅನುಭವಿಸಿದ್ದರು ಮತ್ತು 4 ಕೋಟಿ ಮೌಲ್ಯದ ವಿಮೆಯ ಹಣವನ್ನು ಪಡೆಯಲು ತನ್ನ ಹೆಂಡತಿ ಮತ್ತು ಇತರ ನಾಲ್ವರು ಸುಖ್ವಿಂದರ್ ಸಿಂಗ್, ಜಸ್ಪಾಲ್ ಸಿಂಗ್, ದಿನೇಶ್ ಕುಮಾರ್ ಮತ್ತು ರಾಜೇಶ್ ಕುಮಾರ್ ಜೊತೆ ಸೇರಿ ತಾನೇ ಸತ್ತಿದ್ದೇನೆನ್ನುವಂತೆ ಬಿಂಬಿಸಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.

ಗುರ್‌ಪ್ರೀತ್ ತನ್ನ ವ್ಯವಹಾರದಲ್ಲಿ ನಷ್ಟವನ್ನು ಅನುಭವಿಸಿದ್ದನು ಮತ್ತು 4 ಕೋಟಿ ಮೌಲ್ಯದ ವಿಮಾ ಹಣವನ್ನು ಪಡೆಯಲು ತನ್ನ ಹೆಂಡತಿ ಮತ್ತು ಇತರ ನಾಲ್ವರು ಸುಖ್ವಿಂದರ್ ಸಿಂಗ್ ಸಂಘ, ಜಸ್ಪಾಲ್ ಸಿಂಗ್, ದಿನೇಶ್ ಕುಮಾರ್ ಮತ್ತು ರಾಜೇಶ್ ಕುಮಾರ್ ಜೊತೆ ಸೇರಿ ತನ್ನ ಸಾವನ್ನು ನಕಲಿ ಮಾಡಲು ಸಂಚು ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ಓದಿ: ಕೋಲಾರ: ಪ್ರೀತಿಸಿದ ಮಗಳ ಮರ್ಯಾದ ಹತ್ಯೆ; ಯುವತಿ ಸಾವಿನ ಸುದ್ದಿ ಕೇಳಿ ರೈಲಿಗೆ ತಲೆ ಕೊಟ್ಟ ಪ್ರಿಯಕರ

ಇದು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ಗುರ್ ಪ್ರೀತ್ ಕುಟುಂಬದವರನ್ನು ಮತ್ತೆ ವಿಚಾರಣೆ ನಡೆಸಲಾಗಿದೆ. ಆಗ ಗುರ್‌ಪ್ರೀತ್ ಬದುಕಿರುವುದು ಪತ್ತೆಯಾಗಿದ್ದು, 4 ಕೋಟಿ ರೂಪಾಯಿ ಮೌಲ್ಯದ ವಿಮೆ ಹಣ ಪಡೆಯಲು ತನ್ನ ಪತ್ನಿ ಮತ್ತು ಇತರರೊಂದಿಗೆ ಸೇರಿ ಸಾವಿನ ನಾಟಕವಾಡಿರುವುದು ಬೆಳಕಿಗೆ ಬಂದಿದೆ.

ತನಿಖೆಯ ವೇಳೆ ಗುರುಪ್ರೀತ್‌ನ ಕುಟುಂಬವು ರಾಜ್‌ಪುರ ಪೊಲೀಸ್ ಠಾಣೆಯಲ್ಲಿ ಜೂನ್ 20 ರಂದು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ ಎಂದು ದೂರು ನೀಡಿರುವುದು ಕಂಡುಬಂದಿದೆ. ಜೂನ್ 19ರಂದು ಗುರುಪ್ರೀತ್ ಸುಖಜೀತ್​ಗೆ ಹೆಚ್ಚು ಮದ್ಯಪಾನ ಮಾಡಿಸಿ, ಪ್ರಜ್ಞೆ ತಪ್ಪಿಸಿದ್ದರು.

ಗುರುಪ್ರೀತ್ ತನ್ನ ಬಟ್ಟೆ ಬದಲಿಸಿ ಆತನಿಗೆ ತೊಡಿಸಿ, ಆತನ ಮುಖದ ಮೇಲೆ ಟ್ರಕ್ ಓಡಿಸಿ ಹತ್ಯೆ ಮಾಡಿದ್ದ, ಮುಖದ ಗುರುತು ಸಿಗದಂತೆ ಮಾಡಿದ್ದ ಎನ್ನಲಾಗಿದೆ. ಗುರ್‌ಪ್ರೀತ್‌ನ ಪತ್ನಿ ಸುಖಜೀತ್‌ನ ಛಿದ್ರಗೊಂಡ ದೇಹವನ್ನು ತನ್ನ ಗಂಡನದೇ ಎಂದು ಹೇಳಿದ್ದರು.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ