ರಾಯಚೂರು, ಫೆಬ್ರವರಿ 14: ರಾಯಚೂರು (Raichur) ತಾಲೂಕಿನ ಕೊರ್ತಕುಂದ ಗ್ರಾಮದ ವ್ಯಕ್ತಿ 45 ದಿನಗಳ ಹಿಂದೆ ನಾಪತ್ತೆಯಾಗಿದ್ದು, ಮಂಗಳವಾರ (ಫೆ.14) ಆತನ ಅಸ್ಥಿಪಂಜರ (Skeleton) ಪತ್ತೆಯಾಗಿದೆ. ಕೊರ್ತಕುಂದ ಗ್ರಾಮದ ರಸೂಲ್ ಸಾಬ್ (45) ಅನುಮಾನಾಸ್ಪದವಾಗಿ ಮೃತಪಟ್ಟಿರುವ ವ್ಯಕ್ತಿ. 45 ದಿನಗಳ ಹಿಂದೆ ಹೊಲಕ್ಕೆ ಹೋದ ರಸೂಲ್ ಸಾಬ್ ಇದ್ದಕ್ಕಿದಂತೆ ನಾಪತ್ತೆಯಾಗಿದ್ದನು. ರಸೂಲ್ಗಾಗಿ ಕುಟುಂಬಸ್ಥರು 20 ಕ್ಕೂ ಹೆಚ್ಚು ಹಳ್ಳಿಗಳಲ್ಲಿ, ದೇವಸ್ಥಾನ, ದರ್ಗಾಗಳಲ್ಲಿ, ಬಸ್ ನಿಲ್ದಾಣಗಳಲ್ಲಿ ಹುಡುಕಾಡಿದರೂ ರಸೂಲ್ ಸಿಗಲ್ಲಿ. ಕೊನೆಗೆ ಕುಟುಂಬಸ್ಥರು ಕೈಚೆಲ್ಲಿ, ಪೊಲೀಸರಿಗೆ (Police) ದೂರು ನೀಡದೆ ಸುಮ್ಮನಾದರು.
ಇದೆ ಫೆಬ್ರವರಿ 11 ರಂದು ಕೊರ್ತಕುಂದ ಹೊರಭಾಗದ ದರ್ಗಾ ಬಳಿ ತಲೆ ಬುರುಡೆವೊಂದು ಪತ್ತೆಯಾಗಿತ್ತು. ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ದೇಹಕ್ಕಾಗಿ ಹುಡುಕಾಟ ನಡೆಸಿದ್ದರು. ಮಂಗಳವಾರದಂದು ಬೆಟ್ಟದ ಮೇಲೆ ಅಸ್ತಿಪಂಜರ ಪತ್ತೆಯಾಗಿದೆ. ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ರುಸೂಲ್ ಕುಟುಂಬಸ್ಥರು, ಚಪ್ಪಲಿ, ಬುರುಡೆ ಮೇಲಿನ ಕೂದಲು ಮತ್ತು ಬಟ್ಟೆಯಿಂದ ಗುರುತು ಪತ್ತೆ ಹಚ್ಚಿದ್ದಾರೆ. ರಸೂಲ್ನನ್ನು ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಯಾಪಲದಿನ್ನಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲಬುರಗಿ: ಎರಡು ವರ್ಷದ ಮಗುವನ್ನು ಹತ್ಯೆಗೈದು ತಾಯಿಯೂ ನೇಣಿಗೆ ಶರಣಾದ ಹೃದಯವಿದ್ರಾವಕ ಘಟನೆ ಚಿಂಚೋಳಿ ತಾಲೂಕಿನ ಮರಪಳ್ಳಿ ಗ್ರಾಮದಲ್ಲಿ ನಡೆದಿದೆ. ವರ್ಷಿತಾ (2) ಶಿವಲೀಲಾ (23) ಮೃತ ದುರ್ದೈವಿಗಳು. ಗಂಡ ಮತ್ತು ಅತ್ತೆಯ ಕಿರುಕುಳದಿಂದ ಶಿವಲೀಲಾ ತವರು ಸೇರಿದ್ದರು. ಶಿವಲೀಲಾ ಎರಡು ದಿನದ ಹಿಂದಷ್ಟೆ ಗಂಡನ ಮನೆಗೆ ಬಂದಿದ್ದರು. ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ