ಹಾಲು ಕೊಡಲು ಬರುತ್ತಿದ್ದ ಬಾಲಕಿ ಮೇಲೆ ಅಜ್ಜನಿಂದ ಅತ್ಯಾಚಾರ: ಈಗ ಆಕೆ ಗರ್ಭಿಣಿ!

| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 22, 2024 | 9:47 PM

ಹಾಲು ಕೊಡಲು ಬರುತ್ತಿದ್ದ ಅಪ್ರಾಪ್ತ ಬಾಲಕಿ ಮೇಲೆ ನೀಚ ಅಜ್ಜನೋರ್ವ ಅತ್ಯಾಚಾರವೆಸಗಿದ ಘಟನೆ ರಾಮನಗರ (Ramanagara) ಜಿಲ್ಲೆಯ ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಗಳ ಸ್ಥಿತಿ ಕಂಡು ಪೋಷಕರು ಕಂಗಾಲಾಗಿದ್ದು, ಅತ್ಯಾಚಾರ ಆರೋಪದಡಿ ವೃದ್ಧನನ್ನು ಪೊಲೀಸರು ಬಂಧಿಸಿದ್ದಾರೆ.

ಹಾಲು ಕೊಡಲು ಬರುತ್ತಿದ್ದ ಬಾಲಕಿ ಮೇಲೆ ಅಜ್ಜನಿಂದ ಅತ್ಯಾಚಾರ: ಈಗ ಆಕೆ ಗರ್ಭಿಣಿ!
ಪ್ರಾತಿನಿಧಿಕ ಚಿತ್ರ
Follow us on

ರಾಮನಗರ, ಫೆ.22: 13 ವರ್ಷದ ಬಾಲಕಿ ಮೇಲೆ 60 ವರ್ಷದ ವೃದ್ಧನೊಬ್ಬ ಅತ್ಯಾಚಾರ ನಡೆಸಿದ ಘಟನೆ ರಾಮನಗರ (Ramanagara) ಜಿಲ್ಲೆಯ ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಬಾಲಕಿಗೆ ಪೋಷಕರು ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಬಾಲಕಿ ಈಗ ಒಂದೂವರೆ ತಿಂಗಳ ಗರ್ಭಿಣಿಯಾಗಿದ್ದು, 13 ವರ್ಷದ ಮಗಳ ಸ್ಥಿತಿ ಕಂಡು ಪೋಷಕರು ಕಂಗಾಲಾಗಿದ್ದಾರೆ. ಇನ್ನು ಯಾರು ಹೀಗೆ ಮಾಡಿದ್ದು ಎಂದು ಪ್ರಶ್ನಿಸಿದಾಗ ವೃದ್ಧನ ಹೆಸರು ಬಾಯ್ಬಿಟಿದ್ದಾಳೆ.

ಹಾಲು ಕೊಡಲು ವೃದ್ಧನ ಮನೆಗೆ ತೆರಳಿದ್ದಾಗ ಕೃತ್ಯವೆಂದು ಮಾಹಿತಿ

ಆರೋಪಿ ವೃದ್ಧನ ಮನೆಗೆ ಹಾಲು ಕೊಡಲು ಬಾಲಕಿಯ ತಂದೆ ಹೋಗುತ್ತಿದ್ದರು. ಕೆಲವೊಂದು ಸಮಯದಲ್ಲಿ ತಂದೆ ಇಲ್ಲದ ದಿನ, ಈ ಬಾಲಕಿಯೇ  ಹಾಲು ಕೊಡಲು ವೃದ್ಧನ ಮನೆಗೆ ಹೋಗುತ್ತಿದ್ದಳು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ತಿಳಿದು ಬಂದಿದೆ. ಇನ್ನು ಈ ವೃದ್ಧ, 5 ವರ್ಷಗಳ ಹಿಂದೆಯೂ ಲೈಂಗಿಕ ದೌರ್ಜನ್ಯವೆಸಗಿದ್ದ. ಆದರೆ, ಭಯದಿಂದ ಬಾಲಕಿ ಸುಮ್ಮನಿದ್ದಳು. ಇದೀಗ ಐದು ವರ್ಷಗಳ ಬಳಿಕ ಮತ್ತೆ ಹಾಲು ಕೊಟ್ಟು ಬರಲು ಮನೆಗೆ ತೆರಳಿದ್ದ ವೇಳೆ
ಮೊದಲಿನಂತೆಯೇ ಸಲುಗೆ ಬೆಳಸಿ ಕುಕೃತ್ಯವೆಸಗಿದ್ದಾನೆ. ಇದೀಗ ಅತ್ಯಾಚಾರ ಆರೋಪದಡಿ 60 ವರ್ಷದ ವೃದ್ಧನನ್ನು ಪೊಲೀಸರು ಬಂಧಿಸಿದ್ದು, ಮಾಗಡಿ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಿಸಿ ತನಿಖೆ ಆರಂಭವಾಗಿದೆ.

ಇದನ್ನೂ ಓದಿ:ಕೊಪ್ಪಳ: ಪತಿಯನ್ನು ಥಳಿಸಿ ಮಹಿಳೆಯ ಮೇಲೆ ಅತ್ಯಾಚಾರ, ಐವರು ಆರೋಪಿಗಳು ಅರೆಸ್ಟ್​

ಇನ್ನು ಇದೇ ಜನವರಿ 30 ರಂದು ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣದಲ್ಲಿ ಕುಡಿದ ಅಮಲಿನಲ್ಲಿ 6 ವರ್ಷದ ಬಾಲಕಿ ಯನ್ನು ಎಳೆದೊಯ್ದು 23 ವರ್ಷದ ಯುವಕ ಅತ್ಯಾಚಾರ ಮಾಡಿರುವಂತಹ ಘಟನೆ ನಡೆದಿತ್ತು. ಮನೆಯಲ್ಲಿ ಯಾರು‌ ಇಲ್ಲದ ವೇಳೆ ಮಧುಗಿರಿ ಮೂಲದ ಯುವಕನಿಂದ ಅತ್ಯಾಚಾರ ಮಾಡಲಾಗಿತ್ತು. ಈ ವೇಳೆ  ಬಾಲಕಿ ಕಿರುಚಿದ ಕಾರಣ ಸ್ಥಳಿಯರು ದೌಡಾಯಿಸಿದ್ದು, ಬಾಲಕಿಯ ರಕ್ಷಣೆ ಮಾಡಲಾಗಿತ್ತು. ಇದೀಗ ರಾಮನಗರ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಘಟನೆ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:43 pm, Thu, 22 February 24