AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಎಂ ನಿವಾಸದ ಕೂಗಳತೆ ದೂರದಲ್ಲೇ ಕೆಜಿಗಟ್ಟಲೇ ಚಿನ್ನಾಭರಣ ಕಳ್ಳತನ: ಅಸ್ಸಾಂ ಮೂಲದ ವ್ಯಕ್ತಿಯ ಬಂಧನ

ಅಸ್ಸಾಂನಿಂದ ರೈಲಿನಲ್ಲಿ ಬೆಂಗಳೂರಿಗೆ ಬಂದು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ನಿವಾಸದ ಕೂಗಳತೆ ದೂರದಲ್ಲೇ ಕೆಜಿಗಟ್ಟಲೇ ಚಿನ್ನಾಭರಣ ಕಳ್ಳತನ ಮಾಡದ್ದ ಆರೋಪಿ ಪ್ರದೀಪ್ ಮಂಡಲ್​ನನ್ನು ಶೇಷಾದ್ರಿಪುರಂ ಪೊಲೀಸರಿಂದ ಅರೆಸ್ಟ್​ ಮಾಡಲಾಗಿದೆ. ಅಸ್ಸಾಂನಿಂದ ಬರಿಗೈಲಿ ಬಂದು ಮನೆಗಳ್ಳತನ ಮಾಡುತ್ತಿದ್ದ. ಮಾರ್ವಾಡಿ ಮನೆಗಳನ್ನೇ ಟಾರ್ಗೆಟ್ ಮಾಡಿ ಆಸಾಮಿ ಚಿನ್ನಾಭರಣ ಎಗರಸುತ್ತಿದ್ದ.

ಸಿಎಂ ನಿವಾಸದ ಕೂಗಳತೆ ದೂರದಲ್ಲೇ ಕೆಜಿಗಟ್ಟಲೇ ಚಿನ್ನಾಭರಣ ಕಳ್ಳತನ: ಅಸ್ಸಾಂ ಮೂಲದ ವ್ಯಕ್ತಿಯ ಬಂಧನ
ಪ್ರಾತಿನಿಧಿಕ ಚಿತ್ರ
ರಾಚಪ್ಪಾಜಿ ನಾಯ್ಕ್
| Updated By: ಗಂಗಾಧರ​ ಬ. ಸಾಬೋಜಿ|

Updated on: Feb 23, 2024 | 9:06 AM

Share

ಬೆಂಗಳೂರು, ಫೆಬ್ರವರಿ 23: ಸಿಎಂ ಸಿದ್ದರಾಮಯ್ಯ ನಿವಾಸದ ಕೂಗಳತೆ ದೂರದಲ್ಲೇ ಕೆಜಿಗಟ್ಟಲೇ ಚಿನ್ನಾಭರಣ ಕಳ್ಳತನ (theft) ಮಾಡಿದ್ದ ಓರ್ವ ಆರೋಪಿಯನ್ನು ಶೇಷಾದ್ರಿಪುರಂ ಪೊಲೀಸರು ಬಂಧಿಸಿದ್ದಾರೆ. ಪ್ರದೀಪ್ ಬಂಧಿತ ಆರೋಪಿ. ಅಸ್ಸಾಂನಿಂದ ಬರಿಗೈಲಿ ಬಂದು ಮನೆಗಳ್ಳತನ ಮಾಡುತ್ತಿದ್ದ. ಮಾರ್ವಾಡಿ ಮನೆಗಳನ್ನೇ ಟಾರ್ಗೆಟ್ ಮಾಡಿ ಆಸಾಮಿ ಚಿನ್ನಾಭರಣ ಎಗರಸುತ್ತಿದ್ದ. ಸದ್ಯ ಆರೋಪಿ ಕಳ್ಳತನದ ಸ್ಟೋರಿ ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ. ಆಗಾಗ ರೈಲಿನಲ್ಲಿ ಅಸ್ಸಾಂನಿಂದ ಬೆಂಗಳೂರಿಗೆ ಬಂದು ಕಳ್ಳತನಕ್ಕೆ ಯತ್ನಿಸುತ್ತಿದ್ದ.

ಮೆಜೆಸ್ಟಿಕ್ ಲಾಡ್ಜ್​ನಲ್ಲೇ ವಾಸ್ತವ್ಯ

ಇತ್ತೀಚೆಗೆ ಕಳ್ಳತನ ಮಾಡಲೇಬೇಕು ಅಂತ ನಿರ್ಧರಿಸಿ ಬಂದಿದ್ದ. ಮೆಜೆಸ್ಟಿಕ್ ಲಾಡ್ಜ್​ನಲ್ಲೇ ವಾಸ್ತವ್ಯ ಹೂಡಿ ಹಗಲೊತ್ತಲ್ಲಿ ಮಾರ್ವಾಡಿಗಳ ಮನೆಗಳ ರೌಂಡ್ಸ್​ ಹಾಕಿದ್ದಾನೆ. ಬಳಿಕ ರಾತ್ರಿ ವೇಳೆ ಸಿಎಂ ಮನೆಯ ಪಕ್ಕದಲ್ಲೇ ಶೇಷಾದ್ರಿಪುರಂ ಠಾಣಾ ವ್ಯಾಪ್ತಿಯ ಮಾರ್ವಾಡಿ ಮನೆಯೊಂದರ ಕಿಟಕಿಯಿಂದ ಎಂಟ್ರಿಯಾಗಿ 2.1 ಕೆಜಿ ಚಿನ್ನಾಭರಣ ಕಳ್ಳತನ ಮಾಡಿದ್ದಾನೆ.

ಇದನ್ನೂ ಓದಿ: ಮಂಡ್ಯ: ಮನೆ ಕಳ್ಳರಿಗೆ ಸಹಕಾರ: ಪೊಲೀಸರಿಂದಲೇ ಪೊಲೀಸ್​ ಕಾನ್ಸ್​ಟೇಬಲ್ ಬಂಧನ

ಚಿನ್ನಾಭರಣ ಕದ್ದ ದುಡ್ಡಲ್ಲೇ ಅಸ್ಸಾಂಗೆ ಹೋಗಿ ಕಾರು ಖರೀದಿಸಿದ್ದಾನೆ. 250 ಸಿಸಿಟಿವಿ ಪರಿಶೀಲನೆ ನಡೆಸಿದಾಗ ಖತರ್ನಾಕ್ ಆಸಾಮಿ ಸಿಕ್ಕಿಬಿದ್ದಿದ್ದಾನೆ. ಲಾಡ್ಜ್​ ನ ಲೆಡ್ಜರ್ ಬುಕ್​ನಲ್ಲೂ ಎಂಟ್ರಿ ಮಾಡದೆ ಕಳ್ಳಾಟ ಮಾಡಿದ್ದಾನೆ. ಕೇವಲ ಒಂದು ನಂಬರ್ ಮೂಲಕ ಸವಾಲಾಗಿದ್ದ ಕೇಸ್ ಪತ್ತೆ ಆಗಿದೆ.

ಶೇಷಾದ್ರಿಪುರಂನಲ್ಲಿ ಕಳ್ಳತನ ಮಾಡುವುದಕ್ಕೂ ಮೊದಲು ಸದಾಶಿವನಗರದಲ್ಲಿ ಕೈಚಳಕ ತೋರಿಸಿದ್ದ. ಸದಾಶಿವನಗರ ಮನೆಯಲ್ಲಿ ಕಳ್ಳತನಕ್ಕೆ ಹೋದಾಗ ಏನು ಸಿಕ್ಕಿರಲಿಲ್ಲ. ಹಾಗಾಗಿ ಶೇಷಾದ್ರಿಪುರಂನ ಮನೆಯನ್ನ ಟಾರ್ಗೆಟ್ ಮಾಡಿ ಕಳ್ಳತನ ಮಾಡಿದ್ದ. ಸದ್ಯ ಆರೋಪಿಯನ್ನ ಬಂಧಿಸಿರುವ ಶೇಷಾದ್ರಿಪುರಂ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಕಾರು ಡಿಕ್ಕಿ: ಇಬ್ಬರು ಬೈಕ್​ ಸವಾರರು ಸಾವು

ಮೈಸೂರು: ಕಾರು ಡಿಕ್ಕಿಯಾಗಿ ಇಬ್ಬರು ಬೈಕ್​ ಸವಾರರು ಸಾವನ್ನಪ್ಪಿರುವಂತಹ ಘಟನೆ ಮೈಸೂರು ತಾಲೂಕಿನ ಹೊಸಹುಂಡಿ ಬಳಿ ನಡೆದಿದೆ. ಮಂಜುನಾಥ್(50), ವೆಂಕಟೇಶ್(48) ದುರ್ಮರಣ. ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೈಸೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಗೃಹಿಣಿ ಅನುಮಾನಾಸ್ಪದವಾಗಿ ಸಾವು: ಪತಿಯೇ ಕೊಲೆ ಮಾಡಿದ್ದಾನೆಂದು ಪೋಷಕರ ಆರೋಪ

ಹಾಸನ: ಗೃಹಿಣಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ನಾಗಯ್ಯನಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಪತಿಯೇ ಕೊಲೆ ಮಾಡಿದ್ದಾನೆಂದು ಪೋಷಕರು ಆರೋಪ ಮಾಡಿದ್ದಾರೆ. ಸುರಭಿ (24) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಮಹಿಳೆ. ಮೂರು ವರ್ಷದ ಹಿಂದೆ ನಾಗಯ್ಯನಕೊಪ್ಪಲು ಗ್ರಾಮದ ದರ್ಶನ್ ಜೊತೆ ವಿವಾಹವಾಗಿದ್ದರು.

ನಿನ್ನೆ ಮನೆಯಲ್ಲಿ ಸಾವನ್ನಪ್ಪಿದ್ದು, ನಿಮ್ಮ ಮಗಳು ಲೋ ಬಿಪಿಯಾಗಿ ಸಾವನ್ನಪ್ಪಿದ್ದಾರೆ ಎಂದು ಸುರಭಿ ಪೋಷಕರಿಗೆ ದರ್ಶನ್ ಕರೆ ಮಾಡಿದ್ದಾರೆ. ಸುರಭಿಯನ್ನು ಕೊಲೆ ಮಾಡಿದ್ದಾರೆ ಎಂದು ಪೋಕಷರ ಆರೋಪ ಮಾಡಿದ್ದಾರೆ. ಇದನ್ನು ಪ್ರಶ್ನಿಸುತ್ತಿದ್ದ ಸುರಭಿಯನ್ನು ನೇಣುಬಿಗಿದು ಕೊಲೆ ಮಾಡಿ ನಾಟವಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಶ್ರವಣಬೆಳಗೊಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.