AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾನೂ ಮದ್ವೆಯಾಗಲಿಲ್ಲ, ಬೇರೆಯವರ ಜತೆ ಮದ್ವೆಯಾಗಲು ಬಿಡದ ಪ್ರಿಯಕರ: ಸಾವಿನ ಹಾದಿ ಹಿಡಿದ ಯುವತಿ

ಯುವಕನೋರ್ವ ಮದುವೆಯಾಗುವುದಾಗಿ ಪ್ರೀತಿಯ ನಾಟಕವಾಡಿ ಕೊನೆಗೆ ಕೈಕೊಟ್ಟಿದ್ದಾನೆ. ಬಳಿಕ ಯುವತಿ, ಕುಟುಂಬಸ್ಥರ ಮನವೊಲಿಕೆಯಿಂದ ಬೇರ ಹುಡುಗನ ಜೊತೆ ಮದುವೆಗೆ ಒಪ್ಪಿದ್ದಾಳೆ. ಅದರಂತೆ ಯುವತಿಯ ನಿಶ್ವಿತಾರ್ಥವು ಸಹ ಮುಗಿದಿದೆ. ಆದ್ರೆ, ಪ್ರಿಯಕರ ಮಾತ್ರ ಯುವತಿಯನ್ನು ಮದುವೆಯಾಗಲು ಬಿಟ್ಟಿಲ್ಲ, ದಮ್ಕಿ ಹಾಕುವುದು, ಕಿರುಕುಳ ನೀಡಿದ್ದಾನೆ. ಇದರಿಂದ ಬೇಸತ್ತ ಯುವತಿ ಕೊನೆಗೆ ಸಾವಿನ ಹಾದಿ ಹಿಡಿದಿದ್ದಾಳೆ.

ತಾನೂ ಮದ್ವೆಯಾಗಲಿಲ್ಲ, ಬೇರೆಯವರ ಜತೆ ಮದ್ವೆಯಾಗಲು ಬಿಡದ ಪ್ರಿಯಕರ: ಸಾವಿನ ಹಾದಿ ಹಿಡಿದ ಯುವತಿ
ಚಂದ್ರಕಲಾ, ಅರುಣ್ ಕುಮಾರ್
TV9 Web
| Updated By: ರಮೇಶ್ ಬಿ. ಜವಳಗೇರಾ|

Updated on: Feb 23, 2024 | 3:57 PM

Share

ಆನೇಕಲ್, (ಫೆಬ್ರವರಿ 23): ಪಕ್ಕದ ಮನೆಯಲ್ಲಿದ್ದು ನಿರಂತರ ಕಾಟ ಕೊಡುತ್ತಿದ್ದ ಮಾಜಿ ಪ್ರಿಯಕರನ ಕಾಟ (harassment) ತಾಳಲಾರದೆ, ನಿಶ್ಚಿತಾರ್ಥವಾಗಿದ್ದ (Engagement) ಯುವತಿಯೊಬ್ಬಳು ಆತ್ಮಹತ್ಯೆ (Self Harm) ಮಾಡಿಕೊಂಡ ಘಟನೆ ನಡೆದಿದೆ. ಬೆಂಗಳೂರು (Bengaluru) ಹೊರವಲಯದ ಜಿಗಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಚಂದ್ರಕಲಾ (19) ಆತ್ಮಹತ್ಯೆಗೆ ಶರಣಾದ ಯುವತಿ. ಜಿಗಣಿ ಸಮೀಪದ ನಂಜಾಪುರದಲ್ಲಿ ಮೊನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಚಂದ್ರಕಲಾ ಪಕ್ಕದ ಮನೆಯ ಅರುಣ್ ಕುಮಾರ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಬಳಿಕ ಚಂದ್ರಕಲಾ ಮದುವೆ ಪ್ರಸ್ತಾಪ ಮಾಡಿದ್ದಾಳೆ. ಇಲ್ಲ ಅಕ್ಕನ ಮದುವೆ ಬಳಿಕ ಮದುವೆ ಮಾಡಿಕೊಳ್ಳುವುದಾಗಿ ಅರುಣ್ ಕುಮಾರ್ ಹೇಳಿದ್ದ. ಆದ್ರೆ, ಅಕ್ಕನ‌ ಮದುವೆ ಆಗುತ್ತಿದ್ದಂತೆ ಅರುಣ್​ ವರಸೆ ಬದಲಿಸಿದ್ದಾನೆ. ಆದರೂ ಸಹ ಚಂದ್ರಕಲಾ, ಮದುವೆ ವಿಚಾರವಾಗಿ ಮಾತುಕತೆಗೆ ಎಂದು ತನ್ನ ತಾಯಿಯನ್ನು ಅರುಣ್​ ಮನೆಗೆ ಕಳುಹಿಸಿದ್ದಾಳೆ. ಆದ್ರೆ, ಅರುಣ್​ ಮನೆಯವರು ಚಂದ್ರಕಲಾ ತಾಯಿಗೆ ಬೈದು ಅವಮಾನ ಮಾಡಿ ಕಳುಹಿಸಿದ್ದಾರೆ. ಇದರಿಂದ ಅರುಣ್​ ಪ್ರೀತಿಯ ನಾಟಕವಾಡಿರುವುದು ಚಂದ್ರಕಲಾಗೆ ಗೊತ್ತಾಗಿ, ಅವನಿಗೆ ಬುದ್ಧಿ ಕಲಿಸಬೇಕೆಂದು ತೀರ್ಮಾನಿಸಿದ್ದಳು.

ಅರುಣ್ ಜೈಲಿಗೆ ಹೋಗಿ ಬಂದವನಾಗಿದ್ದು, ಹುಡುಗನ ವ್ಯಕ್ತಿತ್ವ ಸರಿ ಇಲ್ಲ. ಆತನನ್ನು ಮದುವೆಯಾಗಬೇಡ. ಆತನನ್ನು ಮರೆತುಬಿಡು ಎಂದಯ ಕುಟುಂಬಸ್ಥರು ಮನವೊಲಿಸಿ ಆಕೆಗೆ ಪರಿಚಿತರ ಹುಡುಗನೊಬ್ಬನ ಜೊತೆ ಎಂಗೇಜ್‌ಮೆಂಟ್ ಮಾಡಿಸಿದ್ದರು. ಆದ್ರೆ, ಅರುಣ್​ ಬೇರೆಯವನನ್ನು ಮದುವೆಯಾದರೆ ನಿನ್ನನ್ನು ಕೊಲ್ಲುವುದಾಗಿ ಚಂದ್ರಕಲಾಗೆ ಬೆದರಿಕೆ ಹಾಕುವುದು. ಕಿರುಕುಳ ನೀಡುತ್ತಿದ್ದ. ಅಲ್ಲದೇ ನಿಶ್ಚಿತಾರ್ಥವಾಗಿದ್ದ ಯುವಕನಿಗೆ ಅರುಣ್ ದಮ್ಕಿ ಹಾಕಿದ್ದ. ನನ್ನ ಹುಡುಗಿ ಬಿಟ್ಟು ಬಿಡು ಇಲ್ಲದಿದ್ದರೆ ಕೊಲ್ಲುವುದಾಗಿ ಎಚ್ಚರಿಕೆ ನೀಡಿದ್ದ.

ಇದರಿಂದ ಮನನೊಂದಿದ್ದ ಚಂದ್ರಕಲಾ ಮೂರು ದಿನಗಳ ಹಿಂದೆ ದೊಡ್ಡಮ್ಮನ ಮನೆಗೆ ಹೋಗಿ ಅಲ್ಲಿ ಕೋಣೆಯಲ್ಲಿ ನೇಣಿ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪ್ರಿಯಕರ ಆರುಣ್ ಕಿರುಕುಳದಿಂದ ಬೇಸತ್ತು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಆರೋಪಿ ಆರುಣ್​ಗೆ ತಕ್ಕ ಶಿಕ್ಷೆಯಾಗಬೇಕು ಎಂದು ಪೋಷಕರ ಒತ್ತಾಯಿಸಿದ್ದಾರೆ. ಇನ್ನು ಮಗಳ ಸಾವಿಗೆ ಆತನೇ ಕಾರಣವೆಂದು ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆದ್ರೆ, ಘಟನೆಯ ನಂತರ ಅರುಣ್‌ ಕುಮಾರ್‌ ತಲೆ ಮರೆಸಿಕೊಂಡಿದ್ದಾನೆ. ಈ ಬಗ್ಗೆ ಜಿಗಣಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇನ್ನಷ್ಟು ಕ್ರೈಂ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!