AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಪ್ರದೇಶ: ಯೂಟ್ಯೂಬ್ ವಿಡಿಯೊ ನೋಡಿ ಟ್ರಿಕ್ ಕಲಿತು 500 ಕ್ಕೂ ಹೆಚ್ಚು ಕಾರು ಕದ್ದ ಕಳ್ಳರು

ಅಂದಹಾಗೆ ಈ ಗ್ಯಾಂಗ್ ಕಾರುಗಳನ್ನು ಅನ್ಲಾಕ್ ಮಾಡಲು ಹೈಟೆಕ್ ಸಾಫ್ಟ್‌ವೇರ್ ಬಳಸಿದೆ. ಕಳ್ಳರು ಕದ್ದ ಕಾರುಗಳನ್ನು ಸಂಭಾಲ್‌ನಲ್ಲಿರುವ ಅಮೀರ್‌ಗೆ ಸರಬರಾಜು ಮಾಡುತ್ತಾರೆ. ಆ್ಯಂಟಿ ಥೆಫ್ಟ್ ವ್ಯವಸ್ಥೆಯನ್ನು ಹೊಂದಿರುವ ಐಷಾರಾಮಿ ಕಾರುಗಳನ್ನು ಅನ್ಲಾಕ್ ಮಾಡಲು ಅವರು ತಮ್ಮ ಟ್ಯಾಬ್ಲೆಟ್‌ಗಳಲ್ಲಿ ಸಾಫ್ಟ್‌ವೇರ್ ಅನ್ನು ಡೌನ್‌ಲೋಡ್ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರ ಪ್ರದೇಶ: ಯೂಟ್ಯೂಬ್ ವಿಡಿಯೊ ನೋಡಿ ಟ್ರಿಕ್ ಕಲಿತು 500 ಕ್ಕೂ ಹೆಚ್ಚು ಕಾರು ಕದ್ದ ಕಳ್ಳರು
ಕಾರು ಕಳ್ಳರು
ರಶ್ಮಿ ಕಲ್ಲಕಟ್ಟ
|

Updated on:Feb 23, 2024 | 8:33 PM

Share

ದೆಹಲಿ ಫೆಬ್ರುವರಿ23: ಐದನೇ ತರಗತಿವರೆಗೆ ಓದಿದ ಈತ ಜೀವನ ನಿರ್ವಹಣೆಗೆ ಆಟೋರಿಕ್ಷಾ ಓಡಿಸುತ್ತಿದ್ದ. 2012 ರಲ್ಲಿ ಆತನಿಗೆ ರೌನಕ್ ಅಲಿಯಾಸ್ ಬಬ್ಬು ಎಂಬವನ ಪರಿಚಯವಾಗಿದ್ದು ಇವರು ಕಾರುಗಳನ್ನು ಕದಿಯಲು (stolen cars) ಯೋಜಿಸಿದ್ದರು. ಅಲ್ಲಿಂದ ಇಬ್ಬರು ತಮ್ಮ ಗ್ಯಾಂಗ್ ಅನ್ನು ವಿಸ್ತರಿಸಿದರು. ಈ ಕಳ್ಳರ ಗ್ಯಾಂಗ್ ಹಲವಾರು ಐಷಾರಾಮಿ ಕಾರು ಸೇರಿದಂತೆ 500 ಕ್ಕೂ ಹೆಚ್ಚು ಕಾರುಗಳನ್ನು ಕದ್ದಿದೆ. ಓದು ಬರಹ ಬರದೇ ಇರುವ ಇವರು  ಕಾರುಗಳನ್ನು ಕದಿಯಲು ಕಲಿತಿದ್ದು ಯೂಟ್ಯೂಬ್‌ನಿಂದ (Youtube).

ತಾಜ್ ಮೊಹಮ್ಮದ್ ಮತ್ತು ರೌನಕ್ ಅಲಿ ರಿಂಕು, ಹಕೀಮ್ ಎಂಬಾತನ್ನು ಭೇಟಿಯಾಗಿದ್ದು ಅವರು ದೆಹಲಿ ಮತ್ತು ಅದರ ಪಕ್ಕದ ಪ್ರದೇಶಗಳಲ್ಲಿ ಕಾರುಗಳನ್ನು ಕದಿಯಲು ಪ್ರಾರಂಭಿಸಿದರು.ಈ ಯುವಕರು ಹಲವಾರು ಬಾರಿ ಜೈಲಿಗೆ ಹೋಗಿದ್ದರು. ತಾಜ್‌ನ ಸಹಚರರು ಜೈಲಿನಲ್ಲಿದ್ದಾಗ ಗುಡ್ಡು, ಕಾಶಿಫ್ ಮತ್ತು ಮತೀನ್‌ನೊಂದಿಗೆ ಗ್ಯಾಂಗ್‌ ಆರಂಭಿಸಿದ್ದ. ಉತ್ತರ ಪ್ರದೇಶ ಪೊಲೀಸರು ಘಾಜಿಯಾಬಾದ್‌ನ ಮಸ್ಸೋರಿಯಲ್ಲಿ ಪೊಲೀಸರು ಈ ಗ್ಯಾಂಗ್ ಸದಸ್ಯರನ್ನು ಬಂಧಿಸಿದ್ದು ಇವರು ದುಬೈ ಗ್ಯಾಂಗ್​​ನೊಂದಿಗೂ ಸಂಪರ್ಕ ಹೊಂದಿರುವುದಾಗಿ ಹೇಳಿದ್ದಾರೆ.

ಅಂದಹಾಗೆ ಈ ಗ್ಯಾಂಗ್ ಕಾರುಗಳನ್ನು ಅನ್ಲಾಕ್ ಮಾಡಲು ಹೈಟೆಕ್ ಸಾಫ್ಟ್‌ವೇರ್ ಬಳಸಿದೆ. ಕಳ್ಳರು ಕದ್ದ ಕಾರುಗಳನ್ನು ಸಂಭಾಲ್‌ನಲ್ಲಿರುವ ಅಮೀರ್‌ಗೆ ಸರಬರಾಜು ಮಾಡುತ್ತಾರೆ. 200 ಕ್ಕೂ ಹೆಚ್ಚು ವಾಹನಗಳನ್ನು ವಡೋದರಾ ಗುಜರಾತ್‌ನಲ್ಲಿರುವ ವ್ಯಕ್ತಿಗೆ ತಲುಪಿಸಿದ್ದಾರೆ ಇವರು. ಆ್ಯಂಟಿ ಥೆಫ್ಟ್ ವ್ಯವಸ್ಥೆಯನ್ನು ಹೊಂದಿರುವ ಐಷಾರಾಮಿ ಕಾರುಗಳನ್ನು ಅನ್ಲಾಕ್ ಮಾಡಲು ಅವರು ತಮ್ಮ ಟ್ಯಾಬ್ಲೆಟ್‌ಗಳಲ್ಲಿ ಸಾಫ್ಟ್‌ವೇರ್ ಅನ್ನು ಡೌನ್‌ಲೋಡ್ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಮೀರ್ ಮತ್ತು ಅವರ ಪತ್ನಿ ಕಳ್ಳತನದಲ್ಲಿ ಸಹ ಪಾಲುದಾರರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ದಂಪತಿ ಕಾರುಗಳನ್ನು ಕದಿಯಲು ಉಪಕರಣಗಳನ್ನು ನೀಡುತ್ತಿದ್ದರು. ಇವರು ರಿಮೋಟ್-ನಿಯಂತ್ರಿತ ಕಾರ್ ಕೀಗಳನ್ನು ಸಹ ಸರಬರಾಜು ಮಾಡಿದ್ದಾರೆ ಎಂದು ಅಪರಾಧ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಅಜಿತ್ ಕುಮಾರ್ ಹೇಳಿದ್ದಾರೆ.

ಸಾಫ್ಟ್‌ವೇರ್, ನಕಲಿ ಕೀಗಳು, ಮ್ಯಾಗ್ನೆಟ್

ಕಾರಿಗೆ ಬೇಡಿಕೆ ಬಂದಾಗ ಕಳ್ಳತನ ಮಾಡುತ್ತೇವೆ ಎಂದು ಆರೋಪಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಗುಡ್ಡು, ಮತೀನ್ ಮತ್ತು ಕಾಶಿಫ್ ಕಾರನ್ನು ಗುರುತಿಸಲ ಹೋಗುತ್ತಾರೆ. ಗ್ಯಾಂಗ್ ಸದಸ್ಯರು, ಕಾರನ್ನು ಗುರುತಿಸಿದ ನಂತರ, ಟ್ರಂಕ್‌ನ ಬೀಗವನ್ನು ಒಡೆದು ಅಥವಾ ವಾಹನದ ಒಳಗೆ ಪ್ರವೇಶಿಸಲು ಕಿಟಕಿಯನ್ನು ಒಡೆದು ತಮ್ಮ ಟ್ಯಾಬ್ಲೆಟ್‌ನಲ್ಲಿ ಡೌನ್‌ಲೋಡ್ ಮಾಡಿದ ಸಾಫ್ಟ್‌ವೇರ್ ಸಹಾಯದಿಂದ ನಕಲಿ ಕೀ ತಯಾರಿಸುತ್ತಿದ್ದರು. ಕಾರುಗಳ ಸ್ಟೀರಿಂಗ್ ಲಾಕ್ ಅನ್ನು ಒಡೆಯಲು, ವಾಹನದ ನಂಬರ್ ಪ್ಲೇಟ್ ಅನ್ನು ಬದಲಾಯಿಸಲು ಮತ್ತು ಅವುಗಳಿಂದ ಜಿಪಿಎಸ್ ಟ್ರ್ಯಾಕರ್‌ಗಳನ್ನು ತೆಗೆದುಹಾಕಲ ಮ್ಯಾಗ್ನೆಟ್‌ಗಳನ್ನು ಬಳಸುತ್ತಾರೆ.

ಇದನ್ನೂ ಓದಿ: ಅಯೋಧ್ಯೆ ವಿಶೇಷ ರೈಲಿಗೆ ಬೆಂಕಿ ಹಚ್ಚುವ ಬೆದರಿಕೆ ಪ್ರಕರಣ; ವಿಚಾರಣೆ ವೇಳೆ ಆರೋಪಿ ಹೇಳಿದ್ದೇನು? 

ಕಾರುಗಳಲ್ಲಿನ ತಂತ್ರಜ್ಞಾನವು ಬದಲಾದಂತೆ, ಅವುಗಳ ಕಾರ್ಯಾಚರಣಾ ವಿಧಾನವೂ ಬದಲಾಯಿತು. ಕಳ್ಳರು ತಮ್ಮ ಫೋನ್ ಅನ್ನು ಫ್ಲೈಟ್ ಮೋಡ್ ನಲ್ಲಿರಿಸುತ್ತಾರೆ. ಟ್ರ್ಯಾಕ್ ಮಾಡಲಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಲೊಕೇಷನ್ ಆಫ್ ಮಾಡುತ್ತಾರೆ. ಸಂವಹನಕ್ಕಾಗಿ WhatsApp ಬಳಸುತ್ತಿದ್ದರು ಮತ್ತು ಅಪರಾಧ ಮಾಡುವಾಗ ಸಾಮಾನ್ಯ ಕರೆಗಳನ್ನು ಮಾಡುತ್ತಿರಲಿಲ್ಲ ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ. ಲಾಭವನ್ನು ಅವರ ನಡುವೆ ಸಮಾನವಾಗಿ ವಿಂಗಡಿಸಲಾಗಿದೆ. ಉಳಿದ ಹಣವನ್ನು ಇಷ್ಟಬಂದಂತೆ ಖರ್ಚು ಮಾಡಲಾಗುತ್ತಿತ್ತು. ಐಷಾರಾಮಿ ಬದುಕು ಬಯಸಿಯೇ ಇವರು ಕಾರುಗಳನ್ನು ಕದಿಯಲು ಪ್ರಾರಂಭಿಸಿದ್ದು ಎಂದು ಆರೋಪಿಗಳಲ್ಲಿ ಒಬ್ಬರು ಹೇಳಿದರು. ಈ ಕಳ್ಳರು ಐಷಾರಾಮಿ ಕಾರುಗಳನ್ನು ಕದಿಯಲು ಆದ್ಯತೆ ನೀಡುತ್ತಾರೆ ಎಂದು ಪೊಲೀಸರು ಹೇಳಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:31 pm, Fri, 23 February 24

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ