ಮತಾಂತರಕ್ಕೆ ಯತ್ನ ಆರೋಪದಡಿ 12 ಜನರ ಬಂಧನ

| Updated By: Rakesh Nayak Manchi

Updated on: Nov 01, 2022 | 2:26 PM

ಮತಾಂತರಕ್ಕೆ ಯತ್ನ ಆರೋಪದಡಿ ಕನಕಪುರದಲ್ಲಿ ಒಟ್ಟು 12 ಮಂದಿಯನ್ನು ಪೊಲೀಸರು ಬಂಧಿಸಿದ್ದು, ತೀವ್ರ ವಿಚಾರಣೆ ನಡೆಸಲಾಗುತ್ತಿದೆ.

ಮತಾಂತರಕ್ಕೆ ಯತ್ನ ಆರೋಪದಡಿ 12 ಜನರ ಬಂಧನ
ಮನೆಯಲ್ಲಿ ಮತಾಂತರ ನಡೆಸಲು ಯತ್ನ
Follow us on

ರಾಮನಗರ: ಮತಾಂತರಕ್ಕೆ ಯತ್ನ ಆರೋಪದಡಿ ಕನಕಪುರ ತಾಲೂಕಿನ ಚಿಕ್ಕಮುದುವಾಡಿ ತಾಂಡ್ಯದ 12 ಜನರನ್ನು ಪೊಲೀಸರ ಬಂಧಿಸಿದ್ದು, ಕನಕಪುರ ಠಾಣೆ ಸಬ್​ಇನ್ಸ್​​ಪೆಕ್ಟರ್​​ ಉಷಾ ಅವರಿಂದ ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಲು ಸಿದ್ಧತೆ ನಡೆಸುತ್ತಿರುವ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಇಂದು ಬೆಳಗ್ಗೆ ಕಾರ್ಯಾಚರಣೆ ನಡೆಸಲಾಗಿದೆ. ಈ ವೇಳೆ ‌ಚಿಕ್ಕಮುದುವಾಡಿ ತಾಂಡ್ಯದ ಒಂದಷ್ಟು ಜನರು ಕನಕಪುರದ ಮನೆಯೊಂದರಲ್ಲಿ ಇರುವುದು ಪತ್ತೆಯಾಗಿದೆ. ಸದ್ಯ ಮತಾಂಕರಕ್ಕೆ ಯತ್ನಿಸಿದ 12 ಮಂದಿಯನ್ನು ಬಂಧಿಸಲಾಗಿದ್ದು, ಕನಕಪುರ ಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕುಖ್ಯಾತ ಬೈಕ್ ಕಳ್ಳರ ಬಂಧನ

ಬೆಂಗಳೂರು: ನಗರದಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದು ಓರ್ವ ರೌಡಿಶೀಟರ್ ಸೇರಿದಂತೆ ಒಟ್ಟು ಮೂವರು ಕುಖ್ಯಾತ ಬೈಕ್ ಕಳ್ಳರನ್ನು ವಿದ್ಯಾರಣ್ಯಪುರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರೌಡಿಶೀಟರ್ ಶಾಹಿಲ್ ಪಾಷಾ, ನಿಸಾರ್ ಹಾಗೂ ತೌಸಿಫ್ ಬಂಧಿತ ಆರೋಪಿಗಳಾಗಿದ್ದು, ಇವರ ಬಂಧನದಿಂದ 18 ಬೈಕ್ ಕಳವು ಪ್ರಕರಣಗಳು ಪತ್ತೆಯಾದಂತಾಗಿದೆ. ಆರೋಪಿಗಳಿಂದ 15 ಲಕ್ಷ ಮೌಲ್ಯದ ವಿವಿಧ ಮಾಡೆಲ್ ನ 23 ಬೈಕ್ ವಶಕ್ಕೆ ಪಡೆಯಲಾಗಿದೆ.

ವಿದ್ಯಾರಣ್ಯಪುರ, ಯಲಹಂಕ ನ್ಯೂಟೌನ್, ಕೊಡಿಗೇಹಳ್ಳಿ, ಯಶವಂತಪುರ, ಜೆ.ಸಿ,ನಗರ, ಹೆಣ್ಣೂರು, ಬಾಗಲಗುಂಟೆ ಶೇಷಾದ್ರಿಪುರಂ, ವಿಜಯನಗರ, ಬಸಶಂಕರಿ, ರಾಜಾಜಿನಗರ ಹಾಗೂ ನೆಲಮಂಗಲ ಗ್ರಾಮಾಂತರ ಪ್ರದೇಶದಲ್ಲಿ ಬೈಕ್​ಗಳನ್ನು ಕಳವು ಮಡಿದ್ದಾರೆ. ನಂತರ ಅವುಗಳನ್ನು ಮಾಡಿಪೈ ಮಾಡಿ ವ್ಹೀಲಿಂಗ್ ಮಾಡುತ್ತಿದ್ದರು. ಬಳಿಕ ಕಡಿಮೆ ಬೆಲೆಗೆ ಸ್ನೇಹಿತರಿಗೆ ಮಾರಾಟ ಮಾಡುತ್ತಿದ್ದರು.

ಪಿಸ್ತೂಲ್ ತೋರಿಸಿ ಕೊಲೆ ಬೆದರಿಕೆ, ರೌಡಿ ಅರೆಸ್ಟ್

ಬೆಂಗಳೂರು: ಸೈಕಲ್ ರವಿಯಿಂದ ಪಡೆದಿದ್ದ ಪಿಸ್ತೂಲ್​ನಿಂದ ಹೆದರಿಸಿ ಕೊಲೆ ಬೆದರಿಕೆ ಹಾಕಿದ್ದ ಸತ್ಯನಾದನ್ ಅಲಿಯಾಸ್ ಸತೀಶ್ ಅಲಿಯಾಸ್ ನಾಯಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈತ ಸೈಕಲ್ ರವಿ ಮತ್ತು ಬೇಕರಿ ರಘು ಸಹಚರನಾಗಿದ್ದು, ಒಂದು ಪಿಸ್ತೂಲ್ ಸಹಿತಿ ಸತೀಶನನ್ನು ಬಂಧಿಸಲಾಗಿದೆ. ಮಡಿವಾಳ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿರುವ ಸತೀಶ್ ವಿರುದ್ಧ ಕೊಲೆ ಪ್ರಕರಣಗಳು ಮತ್ತು ಕೊಲೆ ಬೆದರಿಕೆ ಪ್ರಕರಣ ದಾಖಲಾಗಿತ್ತು. ಸದ್ಯ ರೌಡಿಯನ್ನು ಬಂಧಿಸಿದ ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ತನಗೆ ಪಿಸ್ತೂಲ್ ನೀಡಿದ್ದು ಬಾಸ್ ಸೈಕಲ್ ರವಿ ಎಂದು ಹೇಳಿದ್ದಾನೆ. ಅಲ್ಲದೆ ಸೈಕಲ್ ರವಿ ಹಾಗೂ ಬೇಕರಿ ರಘು ಹೇಳಿದಂತೆ ಕೆಲವರನ್ನು ಬೆದರಿಸಿದ್ದಾಗಿ ಮಾಹಿತಿ ಲಭ್ಯವಾಗಿದೆ.

ಕೊಡಗಿನ ದೇವಸ್ಥಾನಗಳಲ್ಲಿ ವಿಚಿತ್ರ ಕಳ್ಳತನ

ಮಡಿಕೇರಿ: ಕೊಡಗಿನ ದೇವಸ್ಥಾನಗಳಲ್ಲಿನ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಘಂಟೆಗಳನ್ನೇ ಕಳ್ಳರು ಕದ್ದೊಯ್ದಿದ್ದಾರೆ. ಕಳೆದ‌ ಮೂರು ತಿಂಗಳಲ್ಲಿ ಮಾಯಾಮುಡಿ, ಪೊನ್ನಪ್ಪಸಂತೆ, ಬಾಳೆಲೆ, ಬೀಳೂರು, ಬೆಸಗೂರು, ಹಳ್ಳಿಗಟ್ಟು ದೇವಸ್ಥಾನಗಳು ಸೇರಿದಂತೆ 12ಕ್ಕೂ ಅಧಿಕ ದೇವಸ್ಥಾನಗಳ ಗಂಟೆ ಕಳವು ಮಾಡಲಾಗಿದ್ದು, ವಿರಾಜಪೇಟೆ, ಪೊನ್ನಂಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿ ನಿರಂತರ ಕಳ್ಳತನ ಪ್ರಕರಣಗಳು ನಡೆದಿವೆ. ಆರಂಭದಲ್ಲಿ ಆರೋಪಿಗಳು ಸಿಸಿ ಕ್ಯಾಮಾರಗಳನ್ನ ಕಟ್ ಮಾಡಿ ನಂತರ ಕೈಚಳಕ ತೋರಿಸುತ್ತಿದ್ದರು. ಸದ್ಯ ಕಳ್ಳರ ಹಾವಳಿಯು ಪೊಲೀಸರಿಗೆ ಭಾರೀ ತಲೆನೋವಾಗಿ ಪರಿಣಮಿಸಿದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ