ಸೆನ್ಸೇಷನಲ್ ಕ್ರೈಮ್ ಕತೆಗಳು: ಮ್ಯಾನ್ಷನ್ ಫ್ಯಾಮಿಲಿ ಹಂತಕರಿಂದ ಟಿವಿ ನಟಿ ಶಾರೋನ್ ಟೇಟ್ ಭೀಕರವಾಗಿ ಹತ್ಯೆಯಾದಾಗ 8-ತಿಂಗಳು ಗರ್ಭಿಣಿಯಾಗಿದ್ದರು!

ಮ್ಯಾನ್ಷನ್ ಫ್ಯಾಮಿಲಿಯ ಮುಖಂಡ ಮತ್ತುಒಬ್ಬ ಧಾರ್ಮಿಕ ಗುರು ಅಂತ ಗುರುತಿಸಿಕೊಂಡಿದ್ದ ಚಾರ್ಲ್ಸ್ ಮ್ಯಾನ್ಷನ್ ತನ್ನ ಅನುಯಾಯಿಗಳಲ್ಲಿ ಹೆಚ್ಚು ನಂಬಿಗಸ್ತರಾದ ಕೆಲವರನ್ನು ಕರೆದು ಟೇಟ್ ಮನೆಗೆ ನುಗ್ಗಿ ಅಲ್ಲಿರುವವರನ್ನು ಎಷ್ಟು ಭೀಕರವಾಗಿ ಸಾಧ್ಯವೋ ಅಷ್ಟು ಭೀಕರವಾಗಿ ಕೊಲ್ಲುವಂತೆ ಅಂತ ಆದೇಶಿಸಿದ. ಮ್ಯಾನ್ಷನ್ ಫ್ಯಾಮಿಲಿ ಹಿಪ್ಪೀಗಳ ಒಂದು ಗುಂಪಾಗಿತ್ತು.

ಸೆನ್ಸೇಷನಲ್ ಕ್ರೈಮ್ ಕತೆಗಳು: ಮ್ಯಾನ್ಷನ್ ಫ್ಯಾಮಿಲಿ ಹಂತಕರಿಂದ ಟಿವಿ ನಟಿ ಶಾರೋನ್ ಟೇಟ್ ಭೀಕರವಾಗಿ ಹತ್ಯೆಯಾದಾಗ 8-ತಿಂಗಳು ಗರ್ಭಿಣಿಯಾಗಿದ್ದರು!
ಶರೋನ್ ಟೇಟ್
Follow us
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 02, 2022 | 8:08 AM

ಶಾರೋನ್ ಟೇಟ್ (Sharon Tait) 1960 ರ ದಶಕದಲ್ಲಿ ಅಮೆರಿಕದ ಕಿರುತೆರೆ ನಟಿ ಮತ್ತು ಮಾಡೆಲ್ ಅಗಿದ್ದರು. ಆದರೆ ಅವರು ಜಾಸ್ತಿ ಪ್ರಸಿದ್ಧಿಗೆ ಬಂದಿದ್ದು ಅವರ ಕೊಲೆ ನಡೆದ ವಿಧಾನದಿಂದಾಗಿ. ಅವರ ಕೊಲೆಯನ್ನು ಬರ್ಬರ, ಪೈಶಾಚಿಕ ಅಂತ ಹೇಳಿದರೆ ಅದು ಅಂಡರ್ ಸ್ಟೇಟ್ ಮೆಂಟ್ ಅನಿಸಿಕೊಳ್ಳುತ್ತದೆ. ಹಾಲಿವುಡ್ (Hollywood) ಮತ್ತು ಅಮೆರಿಕದ ಜನತೆಗೆ ಅವರ ಕೊಲೆಯ ಭೀಭತ್ಸತೆಯಿಂದ ಚೇತರಿಸಿಕೊಳ್ಳಲು ದಶಕಗಳು ಬೇಕಾದವು. ಮ್ಯಾನ್ಷಮ್ ಫ್ಯಾಮಿಲಿ (Mansion Family) ಹೆಸರಿನಿಂದ ಗುರುತಿಸಿಕೊಳ್ಳುತ್ತಿದ್ದ ಅಮೆರಿಕದ ಒಂದು ಕುಖ್ಯಾತ ಅಪರಾಧಿಗಳ ಗುಂಪು ಎಂಟು ತಿಂಗಳು ಗರ್ಭಿಣಿಯಾಗಿದ್ದ ಟೇಟ್ ರನ್ನು ಅತ್ಯಂತ ಕ್ರೂರವಾದ ರೀತಿಯಲ್ಲಿ ಕೊಂದುಹಾಕಿತ್ತು. ಅವತ್ತು ಈ ಮಹಾಪಾತಕಿಗಳು ಕೇವಲ ಟೇಟ್ ಮಾತ್ರ ಅಲ್ಲ, ಅವರೊಂದಿಗಿದ್ದ ಇತರ ಮೂವರನ್ನು ಮತ್ತು ಮನೆ ಮಾಲೀಕನ ಒಬ್ಬ ಉದ್ಯೋಗಿಯನ್ನು ಅದೇ ಕ್ರೌರ್ಯತೆಯಿಂದ ಕೊಂದಿದ್ದರು.

ಅದು ಆಗಸ್ಟ್ 8, 1969ರ ಕರಾಳ ದಿನ. ಟೇಟ್ ತಮ್ಮ ಸ್ನೇಹಿತರಾಗಿದ್ದ ವೊಜೆಕ್ ಪ್ರೈಕೋವ್ಸ್ಕಿ, ಅಬಿಗೇಲ್ ಫೋಲ್ಗರ್, ಮತ್ತು ಸೆಲಿಬ್ರಿಟಿ ಹೇರ್ ಸ್ಟೈಲಿಸ್ಟ್ ಆಗಿದ್ದ ಜೇ ಸೆಬ್ರಿಂಗ್ ಜೊತೆ ಮನೆಯಲ್ಲಿದ್ದರು. ಅವರ ಪತಿ ಮತ್ತು ಸಿನಿಮಾ ನಿರ್ದೇಶಕ ರೋಮನ್ ಪೊಲನ್ಸ್ಕಿ ವಿದೇಶವೊಂದರಲ್ಲಿ ಸಿನಿಮಾ ಚಿತ್ರೀಕರಣದಲ್ಲಿ ಮಗ್ನರಾಗಿದ್ದರು.

ಆ ಸಮಯದಲ್ಲಿ ಟೇಟ್ ಮತ್ತು ಪೊಲನ್ಸ್ಕಿ ದಂಪತಿ ಲಾಸ್ ಏಂಜೆಲಿಸ್ ನಗರದ ಬೆನೆಡಿಕ್ಟ್ ಕಾನ್ಯನ್ ಹೆಸರಿನ ಪ್ರದೇಶದಲ್ಲಿ ಮನೆಯೊಂದನ್ನು ಬಾಡಿಗೆಗೆ ಗೊತ್ತುಮಾಡಿಕೊಂಡು ವಾಸವಾಗಿದ್ದರು. ಅದೇ ಮನೆ ರಣಭೀಕರ ಹತ್ಯೆಗಳಿಗೆ ಸಾಕ್ಷಿಯಾಯಿತು.

ಮ್ಯಾನ್ಷನ್ ಫ್ಯಾಮಿಲಿಯ ಮುಖಂಡ ಮತ್ತುಒಬ್ಬ ಧಾರ್ಮಿಕ ಗುರು ಅಂತ ಗುರುತಿಸಿಕೊಂಡಿದ್ದ ಚಾರ್ಲ್ಸ್ ಮ್ಯಾನ್ಷನ್ ತನ್ನ ಅನುಯಾಯಿಗಳಲ್ಲಿ ಹೆಚ್ಚು ನಂಬಿಗಸ್ತರಾದ ಕೆಲವರನ್ನು ಕರೆದು ಟೇಟ್ ಮನೆಗೆ ನುಗ್ಗಿ ಅಲ್ಲಿರುವವರನ್ನು ಎಷ್ಟು ಭೀಕರವಾಗಿ ಸಾಧ್ಯವೋ ಅಷ್ಟು ಭೀಕರವಾಗಿ ಕೊಲ್ಲುವಂತೆ ಅಂತ ಆದೇಶಿಸಿದ. ಮ್ಯಾನ್ಷನ್ ಫ್ಯಾಮಿಲಿ ಹಿಪ್ಪೀಗಳ ಒಂದು ಗುಂಪಾಗಿತ್ತು. ದಿನವಿಡೀ ಮಾದಕ ಪದಾರ್ಥಗಳನ್ನು ಸೇವಿಸುತ್ತಾ ಅದರ ನಶೆಯಲ್ಲೇ ಬದುಕು ನಡೆಸುತ್ತಿದ್ದರು.

Charles Mansion before and later in jail (right)

ಚಾರ್ಲ್ಸ್ ಮ್ಯಾನ್ಷನ್ ಮೊದಲು ಮತ್ತು ನಂತರ ಜೈಲಲ್ಲಿ ಹೀಗಿದ್ದ

ಅವನಿಂದ ಆದೇಶ ಪಡೆದ ಸದಸ್ಯರು ಟೇಟ್ ವಾಸವಾಗಿದ್ದ ಮನೆಗೆ ನುಗ್ಗಿ ಮನೆಯ ಆವರಣದಲ್ಲಿದ್ದ ತಿರುಗಾಡುತ್ತಿದ್ದ ಮನೆ ಮಾಲೀಕನಿಂದ ನಿಯುಕ್ತಿ ಹೊಂದಿದ್ದ 18-ವರ್ಷ-ವಯಸ್ಸಿನ ಕೇರ್ ಟೇಕರ್ ಸ್ಟೀವನ್ ಪೇರೆಂಟ್ ನನ್ನು ಕೊಂದು ಮನೆಯನ್ನು ಪ್ರವೇಶಿಸಿ ಅಲಿದ್ದ ಜನರ ಮೇಲೆ ಕಣ್ಣು ಹಾಯಿಸಿದರು.

ಮನೆಯಲ್ಲಿದ್ದ ನಾಲ್ವರನ್ನು ಲಿವಿಂಗ್ ರೂಮಿಗೆ ದೂಡಿ ಎಲ್ಲರ ಕೈಕಾಲುಗಳನ್ನು ಕಟ್ಟಿದರು. ಸೆಬ್ರಿಂಗ್, 8-ತಿಂಗಳು ಗರ್ಭಿಣಿಯಾಗಿದ್ದ ಟೇಟ್ ರೊಂದಿಗೆ ಒರಟೊರಟಾಗಿ ವರ್ತಿಸದಂತೆ ಮತ್ತು ಆಕೆಯನ್ನು ಬಿಟ್ಟುಬಿಡುವಂತೆ ಗೋಗರೆದರು. ಅವರು ಹಾಗೆ ಹೇಳಿದ ಕೂಡಲೇ ಪಿಸ್ಟಲ್ ನಿಂದ ಗುಂಡೊಂದು ಅವರ ಎದೆಭಾಗವನ್ನು ಹೊಕ್ಕಿತು. ನಂತರ ಅವರ ಮುಖದ ಮೇಲೆ ಒದ್ದರು. ಅಷ್ಟು ಸಾಲದೆಂಬಂತೆ ಕ್ರೂರ ಹಂತಕರು ಸೆಬ್ರಿಂಗ್ ಕೊನೆಯುಸಿರೆಳೆಯುವವರೆಗೆ ಅವರ ದೇಹವನ್ನು ಕತ್ತಿಯಿಂದ ತಿವಿದರು!

ಫೋಲ್ಗರ್ ಮತ್ತು ಪ್ರೈಕೋವ್ಸ್ಕಿ ತಮ್ಮ ಕಟ್ಟುಗಳನ್ನು ಬಿಡಿಸಿಕೊಂಡು ಅಲ್ಲಿಂದ ಪರಾರಿಯಾಗುವ ಪ್ರಯತ್ನ ಮಾಡಿದರು. ಅದರೆ ಅವರ ಪ್ರಯತ್ನ ವಿಫಲವಾಯಿತು. ಅವರನ್ನು ಬೆನ್ನಟ್ಟಿದ ಕೊಲೆಗಡಕರು ನಿರ್ದಯತೆಯಿಂದ ಅವರ ಹರಿತವಾದ ಆಯುಧಗಳಿಂದ ಹಲವಾರು ಬಾರಿ ತಿವಿದು ಕೊಂದರು.

ಅವರಿಬ್ಬರನ್ನೂ ಕೊಂದ ಬಳಿಕ ಮನೆಯಲ್ಲಿ ಉಳಿದಿದ್ದು ಟೇಟ್ ಮಾತ್ರ. ಹಂತಕರು ರಕ್ತ ಬಸಿಯುತ್ತಿದ್ದ ಆಯುಧಗಳನ್ನು ಹಿಡಿದುಕೊಂಡು ಟೇಟ್ ಬಳಿ ಬಂದಾಗ ಅವರು ನನ್ನ ಹೊಟ್ಟೆಯಲ್ಲಿ ಮಗುವಿದೆ. ಮಗುಗೋಸ್ಕರವಾದರೂ ನನ್ನನ್ನು ಬಿಟ್ಟುಬಿಡಿ ಅಂತ ಆರ್ತರಾಗಿ ಬೇಡಿಕೊಂಡರು. ಆದರೆ, ಹಂತಕರಲ್ಲಿ ಲವಲೇಷದಷ್ಟು ಸಹ ದಯೆ, ಕನಿಕರ ಹುಟ್ಟಲಿಲ್ಲ. ಟೇಟ್ರನ್ನೂ ಮನಬಂದಂತೆ ತಿವಿದು ಕೊಂದ ಹಂತಕರು ಅವರ ರಕ್ತದಿಂದಲೇ ಮನೆಯ ಮುಖ್ಯದ್ವಾರದ ಮೇಲೆ ಪಿಗ್ (Pig) ಅಂತ ಬರೆದು ಪರಾರಿಯಾದರು.

ಅ ಮನೆಯೇ ಟೇಟ್ ಮತ್ತು ಅವರ ಸ್ನೇಹಿತರ ಮೇಲೆ ಚಾರ್ಲ್ಸ್ ಮ್ಯಾನ್ಷನ್ ಹಲ್ಲೆ ನಡೆಸುವ ಹಿಂದಿನ ಉದ್ದೇಶವಾಗಿತ್ತು. ಟೇಟ್ ಕುಟುಂಬಕ್ಕಿಂತ ಮೊದಲು ಆ ಮನೆಯಲ್ಲಿ ಟೆರ್ರಿ ಮೆಲ್ಚರ್ ಹೆಸರಿನ ಮ್ಯೂಸಿಕ್ ಪ್ರೊಡ್ಯೂಸರ್ ವಾಸವಾಗಿದ್ದ. ಖುದ್ದು ಮ್ಯೂಸಿಕ್ ಉದ್ದಿಮೆಯಲ್ಲಿ ತೊಡಗಿಸಿಕೊಂಡಿದ್ದ ಮ್ಯಾನ್ಷನ್ ಜೊತೆ ವ್ಯವಹಾರ ಇಟ್ಟುಕೊಳ್ಳುವುದಕ್ಕೆ ಮೆಲ್ಚರ್ ನಿರಾಕರಿಸಿದ್ದ. ಅವನ ಮೇಲೆ ಸೇಡು ತೀರಿಸಿಕೊಳ್ಳಲೆಂದೇ ಅವನು ಆ ಮನೆಗೆ ತನ್ನ ಹಂತಕ ಶಿಷ್ಯರನ್ನು ಕಳಿಸಿ ಮನೆಯಲ್ಲಿದ್ದವರನ್ನು ಕೊಲ್ಲಿಸಿದ್ದ. ಆದರೆ ಅವನ ಸೇಡಿನ ಕ್ರೌರ್ಯಕ್ಕೆ ಬಲಿಯಾಗಿದ್ದು ಮಾತ್ರ ಗರ್ಭಿಣಿ ಟೇಟ್ ಮತ್ತು ಅವರ ಸ್ನೇಹಿತರು.

ಆಗಸ್ಟ್ 8 ರ ರಾತ್ರಿ ಹತ್ಯೆಗಳನ್ನು ನಡೆಸಿದ ಎಲ್ಲಾ ಹಂತಕರು ಮತ್ತು ಖುದ್ದು ಮ್ಯಾನ್ಷನ್ ನನ್ನು ವರ್ಷಾಂತ್ಯದೊಳಗೆ ಬಂಧಿಸಲಾಯಿತು. ಮ್ಯಾನ್ಷನ್ ಮತ್ತು ಹಂಕತರಿಗೆ ಜೀವಾವಧಿ ಶಿಕ್ಷೆಗೆ ಗುರಿಪಡಿಸಲಾಯಿತು. ಅವರು ಪರೋಲ್ ಗಾಗಿ ಸಲ್ಲಿಸಿದ್ದ ಪ್ರತಿ ಮನವಿಯನ್ನು ತಿರಸ್ಕರಿಸಲಾಯಿತು.

ಮೈಸೂರು-ದರ್ಭಾಂಗ್ ರೈಲಿಗೆ ಗೂಡ್ಸ್ ರೈಲು ಡಿಕ್ಕಿ: ಅಪಘಾತದ ಭಯಾನಕ ದೃಶ್ಯಗಳು
ಮೈಸೂರು-ದರ್ಭಾಂಗ್ ರೈಲಿಗೆ ಗೂಡ್ಸ್ ರೈಲು ಡಿಕ್ಕಿ: ಅಪಘಾತದ ಭಯಾನಕ ದೃಶ್ಯಗಳು
ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾಗೆ ಮಕ್ಕಳಿಂದ ಸಿಕ್ತು ಭರ್ಜರಿ ಸ್ವಾಗತ
ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾಗೆ ಮಕ್ಕಳಿಂದ ಸಿಕ್ತು ಭರ್ಜರಿ ಸ್ವಾಗತ
ಗೃಹಲಕ್ಷ್ಮಿ ಹಣದಲ್ಲಿ ದೇವಿಗೆ ಕಿರೀಟ: ಸಿದ್ದರಾಮಯ್ಯ ಹಾಡಿಹೊಗಳಿದ ಮಹಿಳೆ
ಗೃಹಲಕ್ಷ್ಮಿ ಹಣದಲ್ಲಿ ದೇವಿಗೆ ಕಿರೀಟ: ಸಿದ್ದರಾಮಯ್ಯ ಹಾಡಿಹೊಗಳಿದ ಮಹಿಳೆ
ರವಿ ಕೇಸ್ ಗುರಾಣಿಯಾಗಿ ಬಳಸಲು ವಾಪಸ್ಸು ಪಡೆದಿರುವ ಗುಮಾನಿ ದಟ್ಟವಾಗುತ್ತಿದೆ
ರವಿ ಕೇಸ್ ಗುರಾಣಿಯಾಗಿ ಬಳಸಲು ವಾಪಸ್ಸು ಪಡೆದಿರುವ ಗುಮಾನಿ ದಟ್ಟವಾಗುತ್ತಿದೆ
ಜಾತಿಗಣತಿ ಬಗ್ಗೆ ಮೊದಲು ಬಿಜೆಪಿ ತನ್ನ ನಿಲುವು ಪ್ರಕಟಿಸಲಿ: ಡಿಕೆ ಶಿವಕುಮಾರ್
ಜಾತಿಗಣತಿ ಬಗ್ಗೆ ಮೊದಲು ಬಿಜೆಪಿ ತನ್ನ ನಿಲುವು ಪ್ರಕಟಿಸಲಿ: ಡಿಕೆ ಶಿವಕುಮಾರ್
ತಾಯಿ ಜಗನ್ಮಾತೆಯ ಕೃಪೆಯಿಂದ ಬಳ್ಳಾರಿ ವಾಪಸ್ಸಾಗೋದು ಸಾಧ್ಯವಾಗಿದೆ: ರೆಡ್ಡಿ
ತಾಯಿ ಜಗನ್ಮಾತೆಯ ಕೃಪೆಯಿಂದ ಬಳ್ಳಾರಿ ವಾಪಸ್ಸಾಗೋದು ಸಾಧ್ಯವಾಗಿದೆ: ರೆಡ್ಡಿ
‘ಒಳ್ಳೆಯ ರಿಪೋರ್ಟ್ ಇದೆ’: ಮಾರ್ಟಿನ್​ ಬಿಡುಗಡೆ ಬಳಿಕ ಧ್ರುವ ಪ್ರತಿಕ್ರಿಯೆ
‘ಒಳ್ಳೆಯ ರಿಪೋರ್ಟ್ ಇದೆ’: ಮಾರ್ಟಿನ್​ ಬಿಡುಗಡೆ ಬಳಿಕ ಧ್ರುವ ಪ್ರತಿಕ್ರಿಯೆ
ಮುಡಾ ಹಗರಣ ಸಿದ್ದರಾಮಯ್ಯರನ್ನು ಹೆಚ್ಚು ಆಸ್ತಿಕರನ್ನಾಗಿ ಮಾಡಿರುವಂತಿದೆ!
ಮುಡಾ ಹಗರಣ ಸಿದ್ದರಾಮಯ್ಯರನ್ನು ಹೆಚ್ಚು ಆಸ್ತಿಕರನ್ನಾಗಿ ಮಾಡಿರುವಂತಿದೆ!
ಗೃಹಲಕ್ಷ್ಮಿ ಹಣದ ಉಪಯೋಗ ಹೇಗೆ? ಇಲ್ಲಿದೆ ಬಾಗವ್ವ ಸಣ್ಣಕ್ಕಿಯ ಉದಾಹರಣೆ
ಗೃಹಲಕ್ಷ್ಮಿ ಹಣದ ಉಪಯೋಗ ಹೇಗೆ? ಇಲ್ಲಿದೆ ಬಾಗವ್ವ ಸಣ್ಣಕ್ಕಿಯ ಉದಾಹರಣೆ
ನವರಾತ್ರಿ ಪೂಜಾವಿಧಿಗಳ 9 ನೇ ದಿನ ಜನಿಸಿದ ಮಗು ಶುಭದಾಯಯಕ: ಡಾ ಶೆಲ್ವಪಿಳ್ಳೆ
ನವರಾತ್ರಿ ಪೂಜಾವಿಧಿಗಳ 9 ನೇ ದಿನ ಜನಿಸಿದ ಮಗು ಶುಭದಾಯಯಕ: ಡಾ ಶೆಲ್ವಪಿಳ್ಳೆ