Ramanagara News: ನಾಪತ್ತೆಯಾಗಿದ್ದ ಅಪ್ರಾಪ್ತನ ಪತ್ತೆಗೆ BEOS ಟೆಕ್ನಾಲಜಿ ಬಳಕೆ; ಕರ್ನಾಟಕದಲ್ಲಿ ಇದೇ ಮೊದಲು

| Updated By: ವಿವೇಕ ಬಿರಾದಾರ

Updated on: Jan 22, 2023 | 8:39 AM

ರಾಮನಗರ ಜಿಲ್ಲೆ ಕನಕಪುರದಲ್ಲಿ ಮಿಸ್ಸಿಂಗ್ ಆಗಿದ್ದ 17 ರ ಹರೆಯದ ಅಪ್ರಾಪ್ತ ಬಾಲಕನ ನಿಗೂಢ ಹತ್ಯೆ ಕೇಸ್, ರಾಜ್ಯದ FSL ನಲ್ಲಿ ನೂತನ ಟೆಕ್ನಾಲಜಿ ಆಧಾರಿತ ಬ್ರೈನ್ ಮ್ಯಾಫಿಂಗ್ ಪರೀಕ್ಷೆ ಮೂಲಕ ರಿವೀಲ್ ಅಗಿದೆ.

Ramanagara News: ನಾಪತ್ತೆಯಾಗಿದ್ದ ಅಪ್ರಾಪ್ತನ ಪತ್ತೆಗೆ BEOS ಟೆಕ್ನಾಲಜಿ ಬಳಕೆ; ಕರ್ನಾಟಕದಲ್ಲಿ ಇದೇ ಮೊದಲು
ಆರೋಪಿಗಳಾದ ವಕೀಲ ಶಂಕರೇಗೌಡ ಹಾಗೂ ಆತನ ಸ್ನೇಹಿತ ಅರುಣ್
Follow us on

ರಾಮನಗರ: ಜಿಲ್ಲೆಯ ಕನಕಪುರ (Kanakpura) ಪೊಲೀಸರು ರಾಜ್ಯದಲ್ಲೇ ಮೊದಲ ಬಾರಿಗೆ ಬ್ರೈನ್ ಮ್ಯಾಫಿಂಗ್ ಪರೀಕ್ಷೆ (Brain electrical Assileation Signature Profiling BEOS) ಮೂಲಕ ಅಪ್ರಾಪ್ತ ಬಾಲಕ ಮೇಲೆ ಆದ ಅಸಹಜ ಲೈಂಗಿಕ ಕ್ರಿಯೆ ಹಾಗೂ ಮಿಸ್ಸಿಂಗ್​ ಪ್ರಕರಣವನ್ನು ಭೇದಿಸಿದ್ದಾರೆ. ನೂತನ ತಂತ್ರಜ್ಞಾನದ ಮೂಲಕ ಆರೋಪಿಗಳಾದ ವಕೀಲ ಶಂಕರೇಗೌಡ ಹಾಗೂ ಅವನ ಸ್ನೇಹಿತ ಅರುಣ್ ಬಂಧಿಸಿದ್ದಾರೆ. ಕಳೆದ ವರ್ಷ 2022 ಮೇ 19 ರಂದು ಕನಕಪುರದ ನಿವಾಸಿ 17 ರ ಹರೆಯದ ಅಪ್ರಾಪ್ತ ಬಾಲಕನ ಜೊತೆ ಕನಕಪುರದಲ್ಲಿ ಈ ಇಬ್ಬರು ಅಸಹಜ ಲೈಂಗಿಕ ಕ್ರಿಯೆ ನಡೆಸಿ, ಕೊಲೆ ಮಾಡಿರುವ ಆರೋಪವಿದೆ.

ಮೇ 19 ರಂದು ತನ್ನ 17 ವರ್ಷದ ಮಗ ಪರಿಚಿತ ವಕೀಲರ ಕಚೇರಿ ಶಿಫ್ಟ್ ಮಾಡ್ತಿದ್ದು ಕೆಲಸಕ್ಕೆ ಕರೆದಿರುವುದಾಗಿ ಹೇಳಿ ಹೋದವನು ನಾಪತ್ತೆಯಾಗಿದ್ದಾನೆಂದು ಬಾಲಕನ ತಾಯಿ ಕನಕಪುರ ಠಾಣೆಗೆ ದೂರು‌ ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದರು. ದೂರಿನ ಹಿನ್ನಲೆ ಕೇಸ್ ತನಿಖೆ ವೇಳೆ ಅಸಹಜ ಲೈಂಗಿಕ ಕ್ರಿಯೆ ಆರೋಪದಲ್ಲಿ ವಕೀಲ ಶಂಕರೇಗೌಡ ಮತ್ತು ಅರುಣ್ ಮೇಲೆ ಐಪಿಸಿ ಸೆಕ್ಷನ್ 377 ಅಡಿ ಕೇಸ್ ದಾಖಲಿಸಿದ್ದ ಕನಕಪುರ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್​ನ್ನು ಕೂಡ ಸಲ್ಲಿಕೆ ಮಾಡಿದ್ದರು. ಆದರೆ ಆರೋಪಿಗಳಿಬ್ಬರು ಬಾಲಕ ನಿಗೂಢ ನಾಪತ್ತೆ ಕುರಿತು ಬಾಯಿಬಿಟ್ಟಿರಲಿಲ್ಲ.

ಈ ಹಿನ್ನಲೆ ಆರೋಪಿಗಳನ್ನು ಕಾನೂನು ಪ್ರಕ್ರಿಯೆಯಂತೆ ಕ್ರಮವಹಿಸಿ ನೂತನ ಟೆಕ್ನಾಲಜಿ ಆಧಾರಿತ ವ್ಯವಸ್ಥೆ ಆಧರಿಸಿ BEOS ಬ್ರೈನ್ ಮ್ಯಾಫಿಂಗ್ ಒಳಪಡಿಸಿದಾಗ ಸತ್ಯಾಂಶ ರಿವೀಲ್ ಆಗಿದ್ದು, ಅಪ್ರಾಪ್ತನನ್ನ ಕಚೇರಿ ಶಿಫ್ಟ್ ಮಾಡುವ ನೆಪವೊಡ್ಡಿ ಕರೆಸಿಕೊಂಡು, ಪ್ರಜ್ಞೆ ತಪ್ಪಿಸಿ ಲೈಂಗಿಕ ಕ್ರಿಯೆ ನಡೆಸಿ ಆ ಬಳಿಕ ನೀರಿನಲ್ಲಿ ಮುಳುಗಿಸಿ ಹತ್ಯೆ ನಡೆಸಿರುವುದಾಗಿ ರಿವೀಲ್ ಮಾಡಿದ್ದಾರೆ. ಇದರಿಂದ BEOS ಬ್ರೈನ್ ಮ್ಯಾಫಿಂಗ್ ಪರೀಕ್ಷೆಯ ಬಳಿಕ ಅಪ್ರಾಪ್ತನ ಹತ್ಯೆ ಆರೋಪಕ್ಕೆ ಸಂಬಂಧಿಸಿ ಪೊಲೀಸರಿಗೆ ಪ್ರಬಲವಾದ ಟೆಕ್ನಿಕಲ್ ಎವಿಡೆನ್ಸ್ ಲಭ್ಯವಾದಂತಾಗಿದೆ. ಟೆಕ್ನಿಕಲ್ ಎವಿಡೆನ್ಸ್ ಆಧಾರದ ಮೇಲೆ ಐಪಿಸಿ ಸೆಕ್ಷನ್ 377 ಅಡಿ ಅಸಹಜ ಲೈಂಗಿಕ ಕ್ರಿಯೆ ಆರೋಪದ ಜತೆಗೆ ಐಪಿಸಿ ಸೆಕ್ಷನ್ 302 ಅಡಿ ಹತ್ಯೆ ಆರೋಪಕ್ಕೆ ಒಳಪಟ್ಟಿದ್ದಾರೆ. ಕನಕಪುರ ಪೊಲೀಸರಿಗೆ ಚಾಲೆಂಜಿಂಗ್ ಆಗಿದ್ದ ಪ್ರಕರಣ ಭೇಧಿಸಿದ್ದಾರೆ.
ಶಿವಪ್ರಸಾದ್ ಟಿವಿನೈನ್ ಬೆಂಗಳೂರು

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್  ಮಾಡಿ