ರಾಮನಗರ: ಮಳೆಯಲ್ಲೇ ಬಿತ್ತು ರೌಡಿಶೀಟರ್ ಹೆಣ! ಅಕ್ರಮ ಸಂಬಂಧಕ್ಕಾಗಿಯೇ ನಡೀತಾ ಹತ್ಯೆ?

ಆತ ಹೇಳಿ ಕೇಳಿ ಮೊದಲೇ ರೌಡಿಶೀಟರ್, ತನ್ನದೇ ಹವಾ ಮೆಂಟೇನ್ ಮಾಡಿಕೊಂಡು ಏರಿಯಾದಲ್ಲಿ ಸುತ್ತುತ್ತಿದ್ದ. ಆದರೆ, ನಿನ್ನೆ(ಅ.14) ರಾತ್ರಿ ಸ್ನೇಹಿತರ ಜೊತೆ ಪಾರ್ಟಿ ಮಾಡಿಕೊಂಡು ಬರುವಾಗ ಬರ್ಬರವಾಗಿ ಹತ್ಯೆಯಾಗಿದ್ದಾನೆ.

ರಾಮನಗರ: ಮಳೆಯಲ್ಲೇ ಬಿತ್ತು ರೌಡಿಶೀಟರ್ ಹೆಣ! ಅಕ್ರಮ ಸಂಬಂಧಕ್ಕಾಗಿಯೇ ನಡೀತಾ ಹತ್ಯೆ?
ಮೃತ ರೌಡಿಶೀಟರ್​
Edited By:

Updated on: Oct 15, 2023 | 8:37 PM

ರಾಮನಗರ, ಅ.15: ತಾಲೂಕಿನ ಕೆರೆಮೆಗಲದೊಡ್ಡಿ ಗ್ರಾಮದ ರೌಡಿಶೀಟರ್(Rowdy Sheeter)​ ಲೋಕೇಶ್(35) ಎಂಬಾತ ನಿನ್ನೆ(ಅ.14) ರಾತ್ರಿ ಬರ್ಬರವಾಗಿ ಹತ್ಯೆಯಾಗಿದ್ದಾನೆ. ಸ್ನೇಹಿತರ ಜೊತೆ ಎಣ್ಣೆ ಪಾರ್ಟಿಗೆ ತೆರಳಿದ್ದ ಲೋಕೇಶ್, ರಾತ್ರಿ 10 ಗಂಟೆ ವೇಳೆಗೆ ಪಾರ್ಟಿಯಿಂದ ಮನೆ ಕಡೆ ಬಂದಿದ್ದಾನೆ. ಇದೇ ವೇಳೆ ಹೊಂಚು ಹಾಕಿ ಕೂತಿದ್ದ ಹಂತಕರು, ಕತ್ತಲ ರಾತ್ರಿಯಲ್ಲಿ ಲೊಕೇಶ್​ನನ್ನು ಅಟ್ಟಾಡಿಸಿ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಮುಖ, ಕುತ್ತಿಗೆ, ತಲೆಗೆ ಮಾರಾಕಾಸ್ತ್ರದಿಂದ ಕೊಚ್ಚಿರುವ ಕಾರಣ ರಕ್ತಸ್ರಾವದಿಂದ ಲೋಕೇಶ್ ಸ್ಥಳದಲ್ಲಿಯೇ ಅಸುನೀಗಿದ್ದಾನೆ.

ಅಕ್ರಮ ಸಂಬಂಧಕ್ಕಾಗಿಯೇ ನಡೀತಾ ಹತ್ಯೆ?

ಲೊಕೇಶ್ ಮನೆ ಹಿಂದೆಯೇ ಮರ್ಡರ್ ನಡೀತಿದ್ರೂ, ಮಳೆಯ ಕಾರಣ ಯಾರೂ ಹೊರಗಡೆ ಇರಲಿಲ್ಲ. ಆದರೆ, ಘಟನೆ ನಡೆದು ಎರಡು ತಾಸಿನ ಬಳಿಕ ರೌಡಿಶೀಟರ್ ಲೊಕೇಶ್ ಕೊನೆಯುಸಿರೆಳೆದಿರೋದು ಗೊತ್ತಾಗಿದೆ. ದರೋಡೆ ಹಾಗೂ ಜನಸಾಮನ್ಯರನ್ನು ಹೆದರಿಸುವ ಹಲವು‌ ಪ್ರಕರಣಗಳಲ್ಲಿ ಲೊಕೇಶ್ ಹೆಸರು ತಳಕು ಹಾಕಿಕೊಂಡಿತ್ತಾದ್ರೂ, ಲೋಕೇಸ್ ಹತ್ಯೆಗೆ ಕಾರಣವಾಗಿದ್ದು ಮಾತ್ರ ಅಕ್ರಮ ಸಂಬಂಧ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ಅತಿಥಿ ಉಪನ್ಯಾಸಕನ ಹತ್ಯೆ: ಬೈಕಿನಿಂದ ಗುದ್ದಿದ ದುಷ್ಕರ್ಮಿಗಳು, ಮಾರಕಾಸ್ತ್ರದಿಂದ ಇರಿದು ಬರ್ಬರವಾಗಿ ಕೊಲೆ ಮಾಡಿಬಿಟ್ಟರು!

ತನ್ನ ಸಮೀಪದ ಸಂಬಂಧಿಯೊಬ್ಬರ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡು ದಾಯಾದಿಗಳ ಜೊತೆ ಕಲಹ ಶುರುವಾಗಿತ್ತು ಎನ್ನುವ ಆರೋಪ ಕೇಳಿ ಬಂದಿದೆ. ಆದರೆ, ತನ್ನ ಮಗ ಯಾರ ತಂಟೆಗೂ ಹೋಗದೇ ತನ್ನ ಪಾಡಿಗೆ ತಾನಿದ್ದ ಎಂದು ಲೋಕೇಶ್ ತಾಯಿ ಆಕ್ರಂದನ ವ್ಯಕ್ತ ಪಡಿಸಿದ್ದಾರೆ. ಸಧ್ಯ ಲೊಕೇಶ್ ಹತ್ಯೆ ಪ್ರಕರಣ‌ ದಾಖಲಿಸಿಕೊಂಡಿರುವ ರಾಮನಗರ ಗ್ರಾಮಾಂತರ ಪೊಲೀಸರು, ಕೊಲೆಗೆ ಕಾರಣವಾದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ