AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Crime News: ತನ್ನಿಂದ ದೂರ ಉಳಿದಿದ್ದ ಪತ್ನಿಯ ಶೀಲ ಶಂಕಿಸಿ ಬರ್ಬರವಾಗಿ ಹತ್ಯೆಗೈದ ಪತಿ

ಕಳೆದ 10 ವರ್ಷಗಳ ಹಿಂದೆ ಶಬಾನಾ ಮತ್ತು ಮೆಹಬೂಬ್ ಮದುವೆಯಾಗಿದ್ದರು. ದಂಪತಿಗೆ 2 ಮಕ್ಕಳಿದ್ದರೂ ಪತಿ ತನ್ನ ಪತ್ನಿಯ ಮೇಲೆ ಸಂಶಯ ಪಡುತ್ತಿದ್ದ. ಪತಿಯ ಕಿರುಕುಳಕ್ಕೆ ಬೇಸತ್ತು ಶಬಾನಾ ಗಂಡನ ಮನೆ ಬಿಟ್ಟು 2 ಮಕ್ಕಳೊಂದಿಗೆ ಸವದತ್ತಿಯಲ್ಲಿ ವಾಸಿಸುತ್ತಿದ್ದರು.

Crime News: ತನ್ನಿಂದ ದೂರ ಉಳಿದಿದ್ದ ಪತ್ನಿಯ ಶೀಲ ಶಂಕಿಸಿ ಬರ್ಬರವಾಗಿ ಹತ್ಯೆಗೈದ ಪತಿ
ಶಬಾನಾ ಮತ್ತು ಮೆಹಬೂಬ್
TV9 Web
| Edited By: |

Updated on:Aug 18, 2022 | 2:52 PM

Share

ಬೆಳಗಾವಿ: ಶೀಲ ಶಂಕಿಸಿ ಪತ್ನಿಯನ್ನು ಪತಿ ಬರ್ಬರವಾಗಿ ಹತ್ಯೆಗೈದ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿ ನಡೆದಿದೆ. ಶಬಾನಾ ಗೋರವನಕೊಳ್ಳ(28) ಕೊಲೆಯಾದ ಮಹಿಳೆ. ಪತಿ ಮೆಹಬೂಬ್ ಸಾಬ್ನನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ 10 ವರ್ಷಗಳ ಹಿಂದೆ ಶಬಾನಾ ಮತ್ತು ಮೆಹಬೂಬ್ ಮದುವೆಯಾಗಿದ್ದರು. ದಂಪತಿಗೆ 2 ಮಕ್ಕಳಿದ್ದರೂ ಪತಿ ತನ್ನ ಪತ್ನಿಯ ಮೇಲೆ ಸಂಶಯ ಪಡುತ್ತಿದ್ದ. ಪತಿಯ ಕಿರುಕುಳಕ್ಕೆ ಬೇಸತ್ತು ಶಬಾನಾ ಗಂಡನ ಮನೆ ಬಿಟ್ಟು 2 ಮಕ್ಕಳೊಂದಿಗೆ ಸವದತ್ತಿಯಲ್ಲಿ ವಾಸಿಸುತ್ತಿದ್ದರು. ಹಾಗೂ ಗಂಡನಿಂದ ವಿಚ್ಛೇದನ ಕೂಡ ಕೋರಿದ್ದರು. ಆದ್ರೆ ಇಂದು ಬೆಳಗ್ಗೆ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಮೆಹಬೂಬ್, ಶಬಾನಾಳ ಕೊಲೆ ಮಾಡಿದ್ದಾರೆ. ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಪುತ್ರನ ಶಿವಗಣಾರಾಧನೆ ದಿನವೇ ತಾಯಿ ಸಾವು

ಕೊಪ್ಪಳ‌: ಪುತ್ರನ ಶಿವಗಣಾರಾಧನೆ ದಿನವೇ ತಾಯಿ ಕೊನೆಯುಸಿರೆಳೆದಂತಹ ಹೃದಯವಿದ್ರಾವಕ ಘಟನೆ ಕೊಪ್ಪಳ‌ ಜಿಲ್ಲೆ ಕುಷ್ಟಗಿಯಲ್ಲಿ ನಡೆದಿದೆ. ಆಗಸ್ಟ್ 9ರಂದು ಲೋ ಬಿಪಿ‌ಯಿಂದಾಗಿ ರವಿಕುಮಾರ್ ಮೃತಪಟ್ಟಿದ್ದರು. ಆಗಸ್ಟ್ 17ರಂದು ಅಂದರೆ ನಿನ್ನೆ ಶಿವಗಣಾರಾಧನೆ ವೇಳೆ ತಾಯಿಗೆ ಹೃದಯಾಘಾತವಾಗಿ ಮಾಬಮ್ಮ‌ ಕೆಂಗಾರಿ ನಿಧನರಾಗಿದ್ದಾರೆ. ಕೇವಲ 9 ದಿನಗಳ ಅಂತರದಲ್ಲಿ ತಾಯಿ-ಮಗ ಇಬ್ಬರೂ ಸಾವನ್ನಪ್ಪಿದ್ದಾರೆ.

ಕುಷ್ಟಗಿ ಪಟ್ಟಣದ ಅಂಬೇಡ್ಕರ್ ನಿವಾಸಿಗಳಾಗಿರೋ ರವಿಕುಮಾರ್ ಮಾಬಮ್ಮ ಶಿವಗಣಾರಾಧನೆ ದಿನವೇ ತಾಯಿ ಕೂಡ ಮೃತಪಟ್ಟಿದ್ದಾರೆ. ತಾಯಿ ಸಾವಿನ ಸುದ್ದಿ ಕೇಳಿ ಮತ್ತಿಬ್ಬರು ಮಕ್ಕಳು ಅಸ್ವಸ್ಥರಾಗಿದ್ದಾರೆ. ಬಿಪಿ ಏರುಪೇರಾಗಿ ಮತ್ತೊಬ್ಬ ಪುತ್ರ, ಗಜೇಂದ್ರಗಡ ತಹಶೀಲ್ದಾರ್ ಆಗಿರುವ ರಜನಿಕಾಂತ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಜನಿಕಾಂತ್ ಸಹೋದರ ನಾಗರಾಜ್ ಕೂಡ ಆಸ್ಪತ್ರೆಗೆ ದಾಖಲಾಗಿದ್ದು ಸದ್ಯ ಇಬ್ಬರು ಸಹೋದರರು ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದ್ದಾರೆ.

Published On - 2:51 pm, Thu, 18 August 22

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್