ಬೆಂಗಳೂರಿನಲ್ಲಿ 25 ವರ್ಷದ ಯುವತಿ ಮೇಲೆ ಇಬ್ಬರು ಗೆಳೆಯರಿಂದ ಅತ್ಯಾಚಾರ
ಕೆಲಸವಿಲ್ಲದೆ ಇದ್ದ ಯುವತಿಯನ್ನು ಆರೋಪಿಗಳಿಬ್ಬರೂ ಪರಿಚಯ ಮಾಡಿಕೊಂಡಿದ್ದರು. ನಂತ್ರ ಮೂವರೂ ಹೆಚ್ಎಎಲ್ ಬಳಿಯ ಖಾಲಿ ಮೈದಾನ ಒಂದಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಯೇ ...
ಬೆಂಗಳೂರು: ಬೆಂಗಳೂರಿನಲ್ಲಿ 25 ವರ್ಷದ ಯುವತಿ ಮೇಲೆ ಅತ್ಯಾಚಾರ ನಡೆದಿದೆ. ವಿವೇಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಖಾಸಗಿ ಟ್ರಾವೆಲ್ಸ್ನ ಇಬ್ಬರು ಚಾಲಕರಿಂದ ದುಷ್ಕೃತ್ಯ ನಡೆದಿದೆ. ಆರೋಪಿಗಳಾದ ಅಖಿಲೇಶ್ ಮತ್ತು ದೀಪುನನ್ನು ಪೊಲೀಸರು ಬಂಧಿಸಿದ್ದಾರೆ. ನಿರುದ್ಯೋಗಿ ಯುವತಿಯನ್ನ ಪರಿಚಯ ಮಾಡಿಕೊಂಡಿದ್ದ ಆರೋಪಿಗಳು. ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮದ್ಯ ಕುಡಿಸಿ ಅತ್ಯಾಚಾರವೆಸಗಿದ್ದಾರೆ.
ಕೆಲಸವಿಲ್ಲದೆ ಇದ್ದ ಯುವತಿಯನ್ನು ಆರೋಪಿಗಳಿಬ್ಬರೂ ಪರಿಚಯ ಮಾಡಿಕೊಂಡಿದ್ದರು. ನಂತ್ರ ಮೂವರೂ ಹೆಚ್ಎಎಲ್ ಬಳಿಯ ಖಾಲಿ ಮೈದಾನ ಒಂದಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಯೇ ಊಟ ಮಾಡಿ, ಮದ್ಯ ಸೇವನೆ ಮಾಡಿದ್ದಾರೆ. ನಂತ್ರ ಯುವತಿಗೂ ಮದ್ಯ ಸೇವನೆ ಮಾಡಿಸಿದ್ದಾರೆ. ಬಳಿಕ ಯುವತಿಯ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕೇಸ್ ದಾಖಲು ಮಾಡಿಕೊಂಡ ವಿವೇಕ್ ನಗರ ಪೊಲೀಸರು ಇಬ್ಬರನ್ನೂ ಅರೆಸ್ಟ್ ಮಾಡಿದ್ದಾರೆ.
Published On - 8:04 pm, Fri, 2 September 22