KGF ಸಿನಿಮಾದಿಂದ ಪ್ರೇರಿತನಾಗಿ 4 ಕಾವಲು ಸಿಬ್ಬಂದಿಯನ್ನು ಹತ್ಯೆ ಮಾಡಿದ ಹದಿಹರೆಯದ ಯುವಕ
72 ಗಂಟೆಗಳಲ್ಲಿ ಸಾಗರ್‌ನಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಮೂವರು ಕಾವಲು ಸಿಬ್ಬಂದಿಯನ್ನು ಹತ್ಯೆ ಮಾಡಲಾಗಿದ್ದು, ಆತಂಕ ಸೃಷ್ಟಿಸಿತ್ತು.
ಭೋಪಾಲ್ : ಮಧ್ಯಪ್ರದೇಶದ ಸಾಗರ್ ಪಟ್ಟಣದಲ್ಲಿ ಮೂವರು ಕಾವಲು ಸಿಬ್ಬಂದಿಗಳ ಹತ್ಯೆಯಲ್ಲಿ ಭಾಗಿಯಾಗಿರುವ ಶಂಕಿತ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ, ಆರೋಪಿ ಶಿವಪ್ರಸಾದ್ ಧ್ರುವೆಯನ್ನು ಭೋಪಾಲ್‌ನಿಂದ ಮುಂಜಾನೆ ಕರೆತಂದಿದ್ದೇವೆ. ಈ ಬಗ್ಗೆ ತನಿಖೆಗಳು ನಡೆಯುತ್ತಿವೆ ಎಂದು ಸಾಗರ್ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಅನುರಾಗ್ ಪಿಟಿಐಗೆ ತಿಳಿಸಿದರು.
ಪೊಲೀಸರ ಪ್ರಕಾರ, ಕಳೆದ ಐದು ದಿನಗಳಲ್ಲಿ ನಾಲ್ವರು ಗಾರ್ಡ್‌ಗಳನ್ನು ಕೊಲೆ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದು, ಮೇ ತಿಂಗಳಲ್ಲಿ ಶವವಾಗಿ ಪತ್ತೆಯಾದ ಇನ್ನೊಬ್ಬ ವಾಚ್‌ಮನ್‌ನ ಕೊಲೆಯಲ್ಲಿ ಅವನ ಪಾತ್ರ ಇದೆ ಎಂದು ತನಿಖೆ ತಿಳಿದು ಬಂದಿದೆ. ಆರೋಪಿಯನ್ನು ಸಾಗರದ ಕೇಸರಿ ಪ್ರದೇಶದ ನಿವಾಸಿ ಶಿವಪ್ರಸಾದ್ ಧ್ರುವ (19) ಎಂದು ಗುರುತಿಸಲಾಗಿದೆ. ಭೋಪಾಲ್‌ನ ಲಾಲ್ ಘಾಟಿ ಪ್ರದೇಶದಲ್ಲಿ ಸಿಬ್ಬಂದಿಯನ್ನು ಕೊಂದ ನಂತರ ಅವನನ್ನು ಬಂಧಿಸಲಾಗಿದೆ.
महज़ 19-20 साल की उम्र में नाम हासिल करने के लिये आरोपी ने 5 सिक्योरिटी गार्ड को पत्थर से कुचलकर मार डाला ऐसा पुलिस का कहना है. सीसीटीवी फुटेज में वो बेरहमी से कत्ल करता दिख रहा है @ndtv @ndtvindia https://t.co/vupRSULQIj pic.twitter.com/pTKcV4jSDk
— Anurag Dwary (@Anurag_Dwary) September 2, 2022
ಗುರುವಾರ ರಾತ್ರಿ ಪ್ರಾಥಮಿಕ ವಿಚಾರಣೆಯ ವೇಳೆ, ಆರೋಪಿ ಧ್ರುವ ಕೆಜಿಎಫ್‌ನ ರಾಕಿ ಭಾಯ್ ಚಿತ್ರದಿಂದ ಸ್ಫೂರ್ತಿ ಪಡೆದಿದ್ದೇನೆ ಮತ್ತು ಹಣವನ್ನು ಸಂಗ್ರಹಿಸಲು, ದರೋಡೆಕೋರರಾಗಲು ಮತ್ತು ಭವಿಷ್ಯದಲ್ಲಿ ಪೊಲೀಸರನ್ನು ಗುರಿಯಾಗಿಸಲು ಯೋಜಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರು.
ಪ್ರಸಿದ್ಧರಾಗುವ ಹುಚ್ಚು
ವಿಚಾರಣೆಗೆ ಮಾಡುವ ವೇಳೆ ಧ್ರುವ ನನಗೆ ರಾಕಿ ಬಾಯ್ ಅಂತೆ ಪ್ರಸಿದ್ಧಿಯಾಗಬೇಕು ಎಂದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಹೇಳಿದ್ದಾನೆ. ಆತ ನಿದ್ರಿಸುತ್ತಿದ್ದ ಭದ್ರತಾ ಸಿಬ್ಬಂದಿಯನ್ನು ಮಾತ್ರ ಏಕೆ ಗುರಿಯಾಗಿಸಿಕೊಂಡಿದ್ದಾನೆ ಎಂಬುದು ಪೊಲೀಸರಿಗೆ ಇನ್ನೂ ಖಚಿತವಾಗಿಲ್ಲ. ಮೂಲಗಳ ಪ್ರಕಾರ. ತ್ರಿಕೋನ ಪೊಲೀಸರ ತಂಡವು ಧ್ರುವ್ನನ್ನು ಬಂಧಿಸಿ, ಅವರ ಮೊಬೈಲ್ ಫೋನ್ ಅನ್ನು ಪತ್ತೆಹಚ್ಚಿದೆ. ಆತನ ಬಂಧನಕ್ಕೆ ಕಾರಣವಾದ ಮೊಬೈಲ್ ಫೋನ್ ಈ ವಾರ ಸಾಗರ್‌ನಲ್ಲಿ ಕೊಲೆ ಮಾಡಿದ್ದ ಮತ್ತೊಬ್ಬ ಭದ್ರತಾ ಸಿಬ್ಬಂದಿಗೆ ಸೇರಿದ್ದಾಗಿದೆ.
ಕಳೆದ 72 ಗಂಟೆಗಳಲ್ಲಿ ಸಾಗರ್‌ನಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಮೂವರು ಭದ್ರತಾ ಸಿಬ್ಬಂದಿಯನ್ನು ಹತ್ಯೆ ಮಾಡಲಾಗಿತ್ತು, ಇದು ಭೀತಿಯನ್ನು ಸೃಷ್ಟಿಸಿತು. ಒಟ್ಟು ನಾಲ್ವರು ಭದ್ರತಾ ಸಿಬ್ಬಂದಿ ಮೇಲೆ ದಾಳಿ ನಡೆದಿದೆ. ಅವರಲ್ಲಿ ಮೂವರು ಸಾವನ್ನಪ್ಪಿದ್ದರೆ, ಒಬ್ಬನನ್ನು ಭೋಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೊದಲ ಪ್ರಕರಣವು ಮೇ ತಿಂಗಳಲ್ಲಿ ವರದಿಯಾಗಿದ್ದರೆ, ಎರಡನೆಯದು ಸೋಮವಾರ ಮತ್ತು ಮೂರನೇ ಮತ್ತು ನಾಲ್ಕನೆಯದನ್ನು ಮಂಗಳವಾರ ನಡೆಸಲಾಯಿತು. ಮೊದಲ ಕೊಲೆಯಾದವನು ಉತ್ತಮ್ ರಜಾಕ್ ಎಂದು ಗುರುತಿಸಲಾಗಿದ್ದು, ಸೋಮವಾರ ಮತ್ತು ಮಂಗಳವಾರ ಕ್ರಮವಾಗಿ ಸಂಭೂಶರಣ್ ದುಬೆ ಮತ್ತು ಕಲ್ಯಾಣ್ ಲೋಧಿ ಕೊಲ್ಲಲ್ಪಟ್ಟರು. ಮಂಗಲ್ ಅಹಿರ್ವಾರ್ ತಲೆಬುರುಡೆಗೆ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿದ್ದಾರೆ.
ಪ್ರತಿ ದಾಳಿಯು ರಾತ್ರಿ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಸಾವನ್ನಪ್ಪಿದ ವ್ಯಕ್ತಿ ಮನೆ ಆವರಣದಲ್ಲಿ ಮಲಗಿದ್ದಾಗ ಬಂದು ಕೊಲೆ ಮಾಡಲಾಗಿದೆ. ಅವರಲ್ಲಿ ಕನಿಷ್ಠ ಇಬ್ಬರನ್ನು ಒಬ್ಬನೇ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Published On - 6:02 pm, Fri, 2 September 22