AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Big News: ಸ್ಟಾರ್‌ಬಕ್ಸ್ ನೂತನ ಸಿಇಒ ಆಗಿ ಭಾರತೀಯ ಮೂಲದ ಲಕ್ಷ್ಮಣ್ ನರಸಿಂಹನ್ ನೇಮಕ

ಲಕ್ಷ್ಮಣ್ ನರಸಿಂಹನ್ ಸ್ಟಾರ್​ಬಕ್ಸ್​ ಕಂಪನಿಯ ಮುಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಸ್ಟಾರ್‌ಬಕ್ಸ್ ನಿರ್ದೇಶಕರ ಮಂಡಳಿಯ ಸದಸ್ಯರಾಗಲಿದ್ದಾರೆ ಎಂದು ಸ್ಟಾರ್‌ಬಕ್ಸ್ ಗುರುವಾರ ಘೋಷಿಸಿದೆ.

Big News: ಸ್ಟಾರ್‌ಬಕ್ಸ್ ನೂತನ ಸಿಇಒ ಆಗಿ ಭಾರತೀಯ ಮೂಲದ ಲಕ್ಷ್ಮಣ್ ನರಸಿಂಹನ್ ನೇಮಕ
ಲಕ್ಷ್ಮಣ್ ನರಸಿಂಹನ್
TV9 Web
| Edited By: |

Updated on: Sep 02, 2022 | 11:11 AM

Share

ನವದೆಹಲಿ: ಭಾರತ ಮೂಲದ ಲಕ್ಷ್ಮಣ್ ನರಸಿಂಹನ್ (Laxman Narasimhan) ಅವರನ್ನು ಪ್ರಸಿದ್ಧ ಕಾಫಿ ಕಂಪನಿಯಾಗಿರುವ ಸ್ಟಾರ್‌ಬಕ್ಸ್‌ನ (Starbucks) ಹೊಸ ಸಿಇಒ ಆಗಿ ನೇಮಕ ಮಾಡಲಾಗಿದೆ. ಈ ಮೂಲಕ 55 ವರ್ಷದ ಲಕ್ಷ್ಮಣ್ ನರಸಿಂಹನ್ ಜಾಗತಿಕ ನಿಗಮಗಳ ಚುಕ್ಕಾಣಿ ಹಿಡಿದಿರುವ ಭಾರತೀಯ ಮೂಲದ ಉದ್ಯಮಿಗಳ ಸಾಲಿಗೆ ಸೇರ್ಪಡೆಯಾಗಿದ್ದಾರೆ. ಲಕ್ಷ್ಮಣ್ ನರಸಿಂಹನ್ ಈ ಹಿಂದೆ ಬಹುರಾಷ್ಟ್ರೀಯ ಗ್ರಾಹಕ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಟಿಕಾಂಶ ಕಂಪನಿಯಾದ ಇಂಗ್ಲೆಂಡ್ ಮೂಲದ ರೆಕಿಟ್ ಬೆನ್‌ಕೈಸರ್‌ನ ಸಿಇಒ ಆಗಿದ್ದರು.

ಲಕ್ಷ್ಮಣ್ ನರಸಿಂಹನ್ ಸ್ಟಾರ್​ಬಕ್ಸ್​ ಕಂಪನಿಯ ಮುಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಸ್ಟಾರ್‌ಬಕ್ಸ್ ನಿರ್ದೇಶಕರ ಮಂಡಳಿಯ ಸದಸ್ಯರಾಗಲಿದ್ದಾರೆ ಎಂದು ಸ್ಟಾರ್‌ಬಕ್ಸ್ ಗುರುವಾರ ಘೋಷಿಸಿದೆ. ಲಕ್ಷ್ಮಣ್ ನರಸಿಂಹನ್ ಅವರು ಲಂಡನ್‌ನಿಂದ ಸಿಯಾಟಲ್ ಪ್ರದೇಶಕ್ಕೆ ಸ್ಥಳಾಂತರಗೊಂಡ ನಂತರ 2022ರ ಅಕ್ಟೋಬರ್ 1ರಂದು ಸ್ಟಾರ್‌ಬಕ್ಸ್‌ನ CEO ಆಗಿ ಸೇರಿಕೊಳ್ಳಲಿದ್ದಾರೆ.

ಲಕ್ಷ್ಮಣ್ ನರಸಿಂಹನ್ ಅವರು ಸೆಪ್ಟೆಂಬರ್ 30ರಂದು ತಮ್ಮ ಕಂಪನಿಯ ಸಿಇಒ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ ಎಂದು ರೆಕಿಟ್ ಬೆಂಕಿಸರ್ ತಿಳಿಸಿದೆ. ಲಕ್ಷ್ಮಣ್ ನರಸಿಂಹನ್ ವೈಯಕ್ತಿಕ ಮತ್ತು ಕೌಟುಂಬಿಕ ಕಾರಣಗಳಿಂದ ಇಂಗ್ಲೆಂಡ್​​ಗೆ ಮರಳಲು ನಿರ್ಧರಿಸಿದ್ದಾರೆ ಎಂದು ಖಚಿತಪಡಿಸಿದೆ.

ಇದನ್ನೂ ಓದಿ: NSE Phone Tapping: ಮಾಜಿ ಸಿಇಒ ಚಿತ್ರಾ ರಾಮಕೃಷ್ಣ ಜಾಮೀನು ಅರ್ಜಿ ವಜಾ ಮಾಡಿದ ದೆಹಲಿ ನ್ಯಾಯಾಲಯ

ಈ ಮೂಲಕ ಮೈಕ್ರೋಸಾಫ್ಟ್ ಸಿಇಒ ಸತ್ಯ ನಡೆಲ್ಲಾ, ಅಡೋಬ್ ಸಿಇಒ ಶಾಂತನು ನಾರಾಯಣ್, ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಮತ್ತು ಟ್ವಿಟರ್ ಮುಖ್ಯಸ್ಥ ಪರಾಗ್ ಅಗರವಾಲ್ ಸೇರಿದಂತೆ ಅಮೆರಿಕ ಮೂಲದ ಜಾಗತಿಕ ದೈತ್ಯ ಕಂಪನಿಗಳ ಚುಕ್ಕಾಣಿ ಹಿಡಿದಿರುವ ಭಾರತೀಯ ಮೂಲದ ಸಿಇಒಗಳ ಪಟ್ಟಿಗೆ ಲಕ್ಷ್ಮಣ್ ನರಸಿಂಹನ್ ಕೂಡ ಸೇರಿದ್ದಾರೆ.

ಲಕ್ಷ್ಮಣ್ ನರಸಿಂಹನ್ ಭಾರತದ ಪುಣೆ ವಿಶ್ವವಿದ್ಯಾಲಯದ ಕಾಲೇಜ್ ಆಫ್ ಇಂಜಿನಿಯರಿಂಗ್‌ನಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ಅವರು ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ ಲಾಡರ್ ಇನ್ಸ್ಟಿಟ್ಯೂಟ್‌ನಿಂದ ಜರ್ಮನ್ ಮತ್ತು ಅಂತಾರಾಷ್ಟ್ರೀಯ ಅಧ್ಯಯನಗಳಲ್ಲಿ ಎಂಎ ಮತ್ತು ವಾರ್ಟನ್ ಸ್ಕೂಲ್ ಆಫ್ ದಿ ಯೂನಿವರ್ಸಿಟಿ ಆಫ್ ಪೆನ್ಸಿಲ್ವೇನಿಯಾದಿಂದ ಹಣಕಾಸು ವಿಷಯದಲ್ಲಿ ಎಂಬಿಎ ಪದವಿ ಹೊಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್