ಲಾಕ್​ಡೌನ್​ ವೇಳೆ Superbike Stunts: ಸ್ಥಳದಲ್ಲಿದ್ದ DCP ಮಾಡಿದ್ದೇನು ಗೊತ್ತಾ?

ಇಡೀ ದೇಶ ಕೊರೊನಾ ಚಕ್ರಸುಳಿಯಲ್ಲಿ ಲಾಕ್​ಡೌನ್​ ಬಲೆಗೆ ಸಿಲುಕಿದೆ. ಈ ಮಧ್ಯೆ ಬಹುತೇಕ ಕಡೆ ಲಾಕ್​ಡೌನ್​ ಸಡಿಲಿಕೆಯಾಗಿದೆ. ಇದೇ ಲಾಕ್​ಡೌನ್​ ನಿಂದಾಗಿ ಮನೆಗಳಲ್ಲೇ ಸುಮ್ಮನೆ ಕುಳಿತಿರಲಾರದೆ ಜನ ಚಡಪಡಿಸಿತೊಡಗಿದ್ದರು. ಅದರಲ್ಲೂ ಒಂದಷ್ಟು ಸಾಹಸಗಳಲ್ಲಿ ತೊಡಗುವ ಪ್ರವೃತ್ತಿಯ ಯುವಜನತೆಗಂತೂ ತಮ್ಮನ್ನು ಅಕ್ಷರಶಃ ಕಟ್ಟಿಹಾಕಿದಂತಿತ್ತು.. ಆದ್ರೆ, ಲಾಕ್​ಡೌನ್​ ಸಡಿಲಿಕೆಯಾಯ್ತು ಅಂತಾ ಒಂದಷ್ಟು ಯುವಕರು ತಮ್ಮ ಸೂಪರ್ ಬೈಕ್​ಗಳನ್ನು ಹೊರಗೆ ತೆಗೆದಿದ್ದೇ ಜೂಮ್​ ಜೂಮ್​ ಅಂತಾ ಸ್ಟಾರ್ಟ್​ ಮಾಡಿಯೇಬಿಟ್ಟರು.. ಇದು ನಡೆದಿದ್ದು ರಾಷ್ಟ್ರ ರಾಜಧಾನಿ ದಿಲ್ಲಿಯ ಬಗಲಲ್ಲಿರುವ ಗುಡಗಾವ್​ ಬಳಿ. ಆ […]

ಲಾಕ್​ಡೌನ್​ ವೇಳೆ Superbike Stunts: ಸ್ಥಳದಲ್ಲಿದ್ದ DCP ಮಾಡಿದ್ದೇನು ಗೊತ್ತಾ?
Follow us
ಸಾಧು ಶ್ರೀನಾಥ್​
|

Updated on:Jun 12, 2020 | 5:59 PM

ಇಡೀ ದೇಶ ಕೊರೊನಾ ಚಕ್ರಸುಳಿಯಲ್ಲಿ ಲಾಕ್​ಡೌನ್​ ಬಲೆಗೆ ಸಿಲುಕಿದೆ. ಈ ಮಧ್ಯೆ ಬಹುತೇಕ ಕಡೆ ಲಾಕ್​ಡೌನ್​ ಸಡಿಲಿಕೆಯಾಗಿದೆ. ಇದೇ ಲಾಕ್​ಡೌನ್​ ನಿಂದಾಗಿ ಮನೆಗಳಲ್ಲೇ ಸುಮ್ಮನೆ ಕುಳಿತಿರಲಾರದೆ ಜನ ಚಡಪಡಿಸಿತೊಡಗಿದ್ದರು. ಅದರಲ್ಲೂ ಒಂದಷ್ಟು ಸಾಹಸಗಳಲ್ಲಿ ತೊಡಗುವ ಪ್ರವೃತ್ತಿಯ ಯುವಜನತೆಗಂತೂ ತಮ್ಮನ್ನು ಅಕ್ಷರಶಃ ಕಟ್ಟಿಹಾಕಿದಂತಿತ್ತು.. ಆದ್ರೆ, ಲಾಕ್​ಡೌನ್​ ಸಡಿಲಿಕೆಯಾಯ್ತು ಅಂತಾ ಒಂದಷ್ಟು ಯುವಕರು ತಮ್ಮ ಸೂಪರ್ ಬೈಕ್​ಗಳನ್ನು ಹೊರಗೆ ತೆಗೆದಿದ್ದೇ ಜೂಮ್​ ಜೂಮ್​ ಅಂತಾ ಸ್ಟಾರ್ಟ್​ ಮಾಡಿಯೇಬಿಟ್ಟರು.. ಇದು ನಡೆದಿದ್ದು ರಾಷ್ಟ್ರ ರಾಜಧಾನಿ ದಿಲ್ಲಿಯ ಬಗಲಲ್ಲಿರುವ ಗುಡಗಾವ್​ ಬಳಿ. ಆ ಯುವಕರ ಗುಂಪು ಒಟ್ಟು 19 ಹೈ ಎಂಡ್ ಸೂಪರ್ ಬೈಕ್​ಗಳನ್ನು ರಸ್ತೆಗೆ ತಂದಿದ್ದರು.. 2-3 ತಿಂಗಳಿಂದ ಮನೆಯಲ್ಲೇ ಕೂಡಿಹಾಕಿದ್ದಕ್ಕೆ ಬರಗೆಟ್ಟವರಂತೆ ಆ ಸೂಪರ್​ ಬೈಕ್​ಗಳಲ್ಲಿ ಶರವೇಗದಲ್ಲಿ ಗಾಡಿಗಳನ್ನು ಓಡಿಸತೊಡಗಿದ್ದಾರೆ.

ಸರಿಯಾಗಿ ಅದೇ ವೇಳೆ ಅವರ ನಸೀಬು ಕೈಕೊಟ್ಟಿದೆ.. ಅದೇ ಹಾದಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿ ತಮ್ಮ ವಾಹನದಲ್ಲಿ ಸಂಚರಿಸುತ್ತಿದ್ದರು.. ಅವರು ಇವರ ಹುಚ್ಚಾಟ ನೋಡಿದ್ದಾರೆ.. ಹೀಗೇ ಬಿಟ್ಟರೆ ಏನಾದರೂ ಅನಾಹುತ ಮಾಡಿಬಿಟ್ಟಾರು ಅಂತಾ ಅವರು ಆ್ಯಕ್ಷನ್ ಗೆ ಇಳಿದಿದ್ದಾರೆ.

ಪೊಲೀಸ್ ಅಧಿಕಾರಿಯನ್ನು ನೋಡಿದ ಮೇಲಾದರೂ ಅವರು ಬೈಕ್​ನಿಂದ ಇಳಿದರಾ ಅಂದ್ರೆ ಉಹು.. ಬದಲಿಗೆ ಅವರಿಗೇ ರೋಪು ಹಾಕಿದ್ದಾರೆ.. ಇನ್ನು ಸುಮ್ಮನಿದ್ದರೆ ಆಗೋಲ್ಲ ಅಂತಾ ಆ ಅಧಿಕಾರಿ ಅಷ್ಟೂ ಬೈಕ್​ಗಳ ಕೀಗಳನ್ನು ವಸಪಡಿಸಿಕೊಂಡವರೇ.. ಅಲ್ಲಿಂದ ಒಂದೂವರೆ ಕಿ ಮೀ ದೂರದಲ್ಲಿದ್ದ  ಪೊಲೀಸ್​ ಠಾಣೆವರೆಗೂ ತಮ್ಮ ತಮ್ಮ ಬೈಕ್​ಗಳನ್ನು ತಳ್ಳಿಕೊಂಡು ಹೋಗಿ, ಬಿಡಬೇಕೆಂದು ಆಜ್ಞಾಪಿಸಿದ್ದಾರೆ. ತುಟಿ ಪಿಟಿಕ್ಕನ್ನದೆ ಆ ಯುವ ತಂಡ ತಮ್ಮ ನಸೀಬನ್ನು ಶಪಿಸುತ್ತಾ.. ಅನ್ಯ ಮಾರ್ಗವಿಲ್ಲದೇ ಅಧಿಕಾರಿಯ ಸೂಚನೆಯಂತೆ ಸನ್ಮಾರ್ಗದಲ್ಲಿ ತಮ್ಮ ಬೈಕ್​ಗಳನ್ನು ತಳ್ಳಿಕೊಂಡು ಹೊರಟಿದ್ದಾರೆ. .

ಸ್ಟಂಟುಗಳಿಗೆ ಬ್ರೇಕ್ ಹಾಕಿದ DCP ಗೆ ಜೈ ಜೈ ಅಂದ್ರು ಸ್ಥಳೀಯರು ಆ ಹತ್ತೊಂಬತ್ತೂ ಸೂಪರ್ ಡ್ಯೂಪರ್​ ಬೈಕ್​ಗಳು ಈಗ  ಗುಡಗಾವ್​ನ ಸೆಕ್ಟರ್ 53ರಲ್ಲಿರುವ ಪೊಲೀಸ್ ಠಾಣೆಯಲ್ಲಿ ಧೂಳು ತಿನ್ನುತ್ತಾ ಇವೆ. Rash driving ಸಂಚಾರಕ್ಕೆ ಪೊಲೀಸರು ಅದಾಗಲೇ ತಲಾ 17 ಸಾವಿರ ದಂಡ ವಿಧಿಸಿದ್ದಾರೆ. ಜೊತೆಗೆ ಜಿಲ್ಲಾ ನ್ಯಾಯಾಲಯಕ್ಕೆ ಪ್ರಕರಣ ಒಪ್ಪಿಸಿದ್ದಾರೆ. ಅಲ್ಲಿ ಕೋರ್ಟ್ ವಿಧಿಸುವ ಶಿಕ್ಷೆಯನ್ನೂ ಯುವಕರು ಪೂರೈಸಬೇಕಾಗುತ್ತದೆ.

ಇದನ್ನು ಕೇಳಿ ಗುಡಗಾವ್​ನ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ. ಜೊತೆಗೆ DCP (traffic) Chander Mohan ಅವರಿಗೆ ದೊಡ್ಡ ಥ್ಯಾಂಕ್ಸ್ ಹೇಳಿದ್ದಾರೆ. ಈ ಬೈಕ್​ ಸ್ಟಂಟ್​ ಹಾವಳಿ ವಿಪರೀತವಾಗಿತ್ತು. ಸಧ್ಯ ಅದಕ್ಕೆ ಬ್ರೇಕ್ ಬಿತ್ತು ಎಂದಿದ್ದಾರೆ ಸ್ಥಳೀಯರು.

Published On - 3:05 pm, Fri, 12 June 20