ಕಿಡ್ನಾಪ್​ ಎಡವಟ್ಟು: ಉದ್ಯಮಿ ಬದಲು ಕೆಲಸಗಾರರನ್ನು ಅಪಹರಿಸಿದ ಕಿಡ್ನಾಪರ್ಸ್ ಅಂದರ್

ಬೆಂಗಳೂರು: ಅಡ್ಡದಾರಿಯಲ್ಲಿ ದುಡ್ಡು ಮಾಡಿ ರಾತ್ರೋರಾತ್ರಿ ಶ್ರೀಮಂತರಾಗಲು ಹೊರಟ ಮೂವರು ಮಹಾಶಯರು ಮಾಡಿಕೊಂಡ ಕಿಡ್ನಾಪ್ ಎಡವಟ್ಟೊಂದು ತಡವಾಗಿ ಬೆಳಕಿಗೆ ಬಂದಿದೆ. ಶ್ರೀಮಂತನೊಬ್ಬನನ್ನು ಅಪಹರಿಸಿ ಆತನ ಕುಟುಂಬದಿಂದ ಹಣ ಪಡೆದು ನಂತರ ಸುಲಭವಾಗಿ ಪರಾರಿಯಾಗಲು ಪ್ಲಾನ್​ ಹಾಕಿದ್ದ ಇಮ್ರಾನ್, ಮುಬಾರಕ್ ಮತ್ತು ಸಾದಿಕ್ ಎಂಬ ಮೂವರು ಆರೋಪಿಗಳನ್ನು ನಗರದ ಆಗ್ನೇಯ ವಿಭಾಗದ ಪೊಲೀಸರ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಮೂವರು ಕಿಡ್ನಾಪ್​ ಮಹಾಶಯರ ಎಡವಟ್ಟು ಸಿಲಿಕಾನ್​ ಸಿಟಿಯ ಶ್ರೀಮಂತರೊಬ್ಬರನ್ನು ಕಿಡ್ನಾಪ್​ ಮಾಡಿದರೆ ಸುಲಭವಾಗಿ ಹಣ ಮಾಡಬಹುದು ಎಂದು ನಿರ್ಧರಿಸಿದ ಇಮ್ರಾನ್, […]

ಕಿಡ್ನಾಪ್​ ಎಡವಟ್ಟು: ಉದ್ಯಮಿ ಬದಲು ಕೆಲಸಗಾರರನ್ನು ಅಪಹರಿಸಿದ ಕಿಡ್ನಾಪರ್ಸ್ ಅಂದರ್
Follow us
ಆಯೇಷಾ ಬಾನು
|

Updated on:Jun 11, 2020 | 4:20 PM

ಬೆಂಗಳೂರು: ಅಡ್ಡದಾರಿಯಲ್ಲಿ ದುಡ್ಡು ಮಾಡಿ ರಾತ್ರೋರಾತ್ರಿ ಶ್ರೀಮಂತರಾಗಲು ಹೊರಟ ಮೂವರು ಮಹಾಶಯರು ಮಾಡಿಕೊಂಡ ಕಿಡ್ನಾಪ್ ಎಡವಟ್ಟೊಂದು ತಡವಾಗಿ ಬೆಳಕಿಗೆ ಬಂದಿದೆ. ಶ್ರೀಮಂತನೊಬ್ಬನನ್ನು ಅಪಹರಿಸಿ ಆತನ ಕುಟುಂಬದಿಂದ ಹಣ ಪಡೆದು ನಂತರ ಸುಲಭವಾಗಿ ಪರಾರಿಯಾಗಲು ಪ್ಲಾನ್​ ಹಾಕಿದ್ದ ಇಮ್ರಾನ್, ಮುಬಾರಕ್ ಮತ್ತು ಸಾದಿಕ್ ಎಂಬ ಮೂವರು ಆರೋಪಿಗಳನ್ನು ನಗರದ ಆಗ್ನೇಯ ವಿಭಾಗದ ಪೊಲೀಸರ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಮೂವರು ಕಿಡ್ನಾಪ್​ ಮಹಾಶಯರ ಎಡವಟ್ಟು ಸಿಲಿಕಾನ್​ ಸಿಟಿಯ ಶ್ರೀಮಂತರೊಬ್ಬರನ್ನು ಕಿಡ್ನಾಪ್​ ಮಾಡಿದರೆ ಸುಲಭವಾಗಿ ಹಣ ಮಾಡಬಹುದು ಎಂದು ನಿರ್ಧರಿಸಿದ ಇಮ್ರಾನ್, ಮುಬಾರಕ್ ಮತ್ತು ಸಾದಿಕ್​ರ ಕಣ್ಣಿಗೆ ಬಿದ್ದಿದ್ದು ಗೌಥಮ್​ ಎಂಬ ಉದ್ಯಮಿ. ಅದರಂತೆಯೇ ಗೌಥಮ್​ ಚಲನವಲನವನ್ನು ಗಮನಿಸಿದ್ದಾರೆ. ಗೌಥಮ್​ ಬಗ್ಗೆ ತಿಳಿಯಲು ಗಾರ್ಮೆಂಟ್ಸ್​ ಫ್ಯಾಕ್ಟರಿಯ ಮಾಲೀಕರೊಬ್ಬರ ಫ್ರೆಂಡ್​ ಎಂದು ಸುಳ್ಳು ಹೇಳಿ ಫ್ಯಾಕ್ಟರಿಯ ಕೆಲವು ನೌಕರರನ್ನು ವಿಚಾರಿಸಿದರೆ ಇನ್ನಷ್ಟು ಮಾಹಿತಿ ಕಲೆಹಾಕಬಹುದು ಅಂತಾ ಕೊನೆಗೆ ನೌಕರರನ್ನೇ ಮೊದಲು ಅಪಹರಿಸುವ ಸ್ಕಚ್ ಹಾಕಿದರು.

ಯೋಚಿಸಿದ್ದೇ ಒಂದು, ಆಗಿದ್ದೇ ಬೇರೆ! ಜೂನ್​ 9ರಂದು ನಕಲಿ ಪೊಲೀಸರ ಸೋಗಿನಲ್ಲಿ ತೆರಳಿದ ಮೂವರು ಆರೋಪಿಗಳು ಮೊದಲಿಗೆ ಜಹೀರ್​ವುಲ್ಲಾ ಹಸೇನ್ ಎಂಬ ಫ್ಯಾಕ್ಟರಿಯ ನೌಕರನನ್ನು ಹೊಂಗಸಂದ್ರದ ಬಳಿ ಅಡ್ಡಗಟ್ಟಿ ನಿಮ್ಮ ಮಾಲೀಕರ ಗೆಳೆಯರಾದ ಗೌಥಮ್​ ಎಲ್ಲಿದ್ದಾರೆ ತೋರಿಸು ಅಂತಾ ಕರೆದುಕೊಂಡು ಹೋದರು. ಇದೇ ವೇಳೆ ಮಾರ್ಗ ಮಧ್ಯೆ ಮೊಹಬೂಬ್ ಹಾಗೂ ಕಾಬೂಲ್ ಎಂಬ ಇನ್ನಿಬ್ಬರು ನೌಕರರನ್ನು ಸಹ ಕಿಡ್ನಾಪ್ ಮಾಡಿದರು. ಬಳಿಕ ಮೂವರು ನೌಕರನ್ನು ಬಿಟಿಎಂ ಲೇಔಟ್ ಬಳಿ ಇರುವ ಎಂ.ಎಸ್​ ಪಾಳ್ಯದ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಇಟ್ಟಿದ್ದರು.

ನಂತರ ಮೂವರು ಕಿಡ್ನಾಪರ್ಸ್​ಗಳಿಗೆ ಅದೇನಾಯ್ತೋ ಏನೋ. ಪಾಲಿಗೆ ಬಂದಿದ್ದು ಪಂಚಾಮೃತ ಅಂತಾ ಈ ಮೂವರು ನೌಕರರಿಂದಲೇ ಹಣ ವಸೂಲಿ ಮಾಡೋಣ ಅಂತಾ ಡಿಸೈಡ್​ ಮಾಡಿ ಅವರ ಮನೆಗಳಿಗೆ ಕರೆಮಾಡಿ 50 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟರು. ಇದರಿಂದ ಗಾಬರಿಗೊಂಡ ನೌಕರರ ಕುಟುಂಬಸ್ಥರು ಪೊಲೀಸರ ಮೊರೆ ಹೋದರು. ಕೂಡಲೆ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆಗೆ ಇಳಿದ ಬೊಮ್ಮನಹಳ್ಳಿ ಹಾಗೂ ಮೈಕೋ ಲೇಔಟ್ ಪೊಲೀಸರು ಆರೋಪಿಗಳ ಬೆನ್ನಟ್ಟಿದ್ದಾರೆ.

ಆದರೆ ಇಂಥ ಎಡವಟ್ಟು ಪ್ಲಾನ್​ ಮಾಡಿದ್ದವರನ್ನು ಹಿಡಿಯೋದು ಅಷ್ಟು ಸುಲಭವಿರಲಿಲ್ಲ. ಯಾಕಂದ್ರೆ ಸಿನಿಮಾ ಸ್ಟೈಲ್​ನಲ್ಲಿ ಮೂವರು ಆರೋಪಿಗಳು ಸ್ಥಳ ಬದಲಿಸುತ್ತಿದ್ದರು. ಅಲ್ಲಿ ಬನ್ನಿ, ಇಲ್ಲಿ ಬನ್ನಿ ಅಂತಾ ಕುಟುಂಬಸ್ಥರಿಗೆ ತಿಳಿಸಿ ನಂತರ ಸ್ಥಳದಲ್ಲಿ ಅವರನ್ನು ದೂರದಿಂದ ಗಮನಿಸುತ್ತಿದ್ದರು.

ಹೀಗೆ 2-3 ಬಾರಿ ಮಾಡಿದ ಕಿಡ್ನಾಪರ್ಸ್ ಅಂತಿಮವಾಗಿ ರಾಜಾಜಿನಗರದ ರಾಮಮಂದಿರ ಬಳಿ ಬರಲು ಸೂಚಿಸಿದರು. ಕುಟುಂಬಸ್ಥರ ವೇಷದಲ್ಲಿ ಹಣ ತೆಗೆದುಕೊಂಡು ಬಂದ ವೇಳೆ ಸ್ಥಳಕ್ಕೆ ಅನುಮಾನಸ್ಪದವಾಗಿ ಓಡಾಡುತ್ತಿದ್ದ ಇಮ್ರಾನ್​ನನ್ನು ಮಫ್ತಿಯಲ್ಲಿ ಪೊಲೀಸರು ಗಮನಿಸಿದರು. ಕೂಡಲೇ ಅವನನ್ನು ಹಿಡಿದು ವಿಚಾರಿಸಿದಾಗ ಇನ್ನಿಬ್ಬರು ಕಿಡ್ನಾಪರ್ಸ್​ ಮತ್ತು ಗಾರ್ಮೆಂಟ್ಸ್​ ನೌಕರರನ್ನ ಅವಿತಿಟ್ಟಿದ್ದ ಸ್ಥಳ ಪತ್ತೆಯಾಯ್ತು. ಆಶ್ಚರ್ಯವೆಂದರೆ ಪ್ರಕರಣ ದಾಖಲಾದ ಕೇವಲ 7 ಗಂಟೆಗಳೊಳಗೆ ಪೊಲೀಸರು ಈ ಎಡವಟ್ಟು ಕಿಡ್ನಾಪರ್ಸ್​ಗಳನ್ನು ಬಂಧಿಸಿದ್ದಾರೆ. ಸಿನಿಮಾ ಶೈಲಿಯಲ್ಲಿ ಕಿಡ್ನಾಪ್​ ಮಾಡಲು ಮುಂದಾದ ಮೂವರ ಸ್ಕೆಚ್​ ಕೊನೆಗೂ ಫ್ಲಾಪ್​ ಆಗಿ ಈಗ ಕಂಬಿ ಎಣಿಸುವ ಸ್ಥಿತಿ ಎದುರಾಗಿದೆ.

Published On - 3:48 pm, Thu, 11 June 20

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ