Justice Santosh Hegde: ನಿವೃತ್ತ ನ್ಯಾ. ಸಂತೋಷ್ ಹೆಗಡೆಗೆ ವಂಚಿಸಲು ಯತ್ನ; ಸೈಬರ್ ಕ್ರೈಂ ಪೊಲೀಸರಿಗೆ ದೂರು

| Updated By: ಸಾಧು ಶ್ರೀನಾಥ್​

Updated on: Jun 18, 2021 | 12:53 PM

Cyber Crime: ನಿವೃತ್ತಿ ನ್ಯಾಯಮೂರ್ತಿ, ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆಗೆ ಕ್ರೆಡಿಟ್ ಕಾರ್ಡ್ ಬಗ್ಗೆ ಆರೋಪಿ ಮಹಿಳೆ ಕರೆ ಮಾಡಿ ವಂಚಿಸಲು ಯತ್ನಿದ್ದಾಳೆ. 99196 71358 ಮೊಬೈಲ್ನಿಂದ ಕರೆ ಮಾಡಿದ್ದಳು. ಕ್ರೆಡಿಟ್ ಕಾರ್ಡ್ ಪಾಯಿಂಟ್ ಮುಕ್ತಾಯವಾಗಿದೆ ಎಂದು ಕರೆ ಮಾಡಿದ್ದಳು.

Justice Santosh Hegde: ನಿವೃತ್ತ ನ್ಯಾ. ಸಂತೋಷ್ ಹೆಗಡೆಗೆ ವಂಚಿಸಲು ಯತ್ನ; ಸೈಬರ್ ಕ್ರೈಂ ಪೊಲೀಸರಿಗೆ ದೂರು
ನಿವೃತ್ತ ನ್ಯಾ. ಸಂತೋಷ್ ಹೆಗಡೆಗೆ ವಂಚಿಸಲು ಯತ್ನ; ಸೈಬರ್ ಕ್ರೈಂ ಪೊಲೀಸರಿಗೆ ದೂರು
Follow us on

ಬೆಂಗಳೂರು: ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅವರಿಗೆ ಮಹಿಳೆಯೊಬ್ಬಳು ವಂಚನೆ ಮಾಡಲು ಯತ್ನಿಸಿದ್ದಾಳೆ ಎಂದು ತಿಳಿದುಬಂದಿದೆ. ಈ ಬಗ್ಗೆ ಅನುಮಾನ ಬಂದು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಲಾಗಿದೆ. ಕೇಂದ್ರ ವಿಭಾಗ ಸಿಇಎನ್ ಠಾಣೆಯಲ್ಲಿ ದೂರು ದಾಖಲಾಗಿದೆ. 99196 71358 ಮೊಬೈಲ್​ ಸಂಖ್ಯೆಯಿಂದ ಮಹಿಳೆ ಕರೆ ಮಾಡಿದ್ದಳು ಎನ್ನಲಾಗಿದೆ.

ನಿವೃತ್ತಿ ನ್ಯಾಯಮೂರ್ತಿ, ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆಗೆ ಕ್ರೆಡಿಟ್ ಕಾರ್ಡ್ ಬಗ್ಗೆ ಆರೋಪಿ ಮಹಿಳೆ ಕರೆ ಮಾಡಿ ವಂಚಿಸಲು ಯತ್ನಿದ್ದಾಳೆ. 99196 71358 ಮೊಬೈಲ್ನಿಂದ ಕರೆ ಮಾಡಿದ್ದಳು. ಕ್ರೆಡಿಟ್ ಕಾರ್ಡ್ ಪಾಯಿಂಟ್ ಮುಕ್ತಾಯವಾಗಿದೆ ಎಂದು ಕರೆ ಮಾಡಿದ್ದಳು. ನಂತರ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರ ನಂಬರಿಗೆ ಎರಡು ಬಾರಿ ಒಟಿಪಿ ಬಂದಿತ್ತು. ಆದರೆ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಒಟಿಪಿಯನ್ನ ಶೇರ್ ಮಾಡಿರಲಿಲ್ಲ‌. ಅದಾದ ಮೇಲೆ, ಸಂತೋಷ್ ಹೆಗ್ಡೆ ಅವರು ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ. ಕೇಂದ್ರ ವಿಭಾಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

(retired justice santosh hegde files complaint on cyber cheat)

ಬೆಂಗಳೂರಿಗೆ ಬರುತ್ತಿರುವ ಡಿಕೆಶಿಗೆ ಭರ್ಜರಿ ಸ್ವಾಗತ, ನ್ಯಾ.ಸಂತೋಷ್ ಹೆಗ್ಡೆ ಏನಂದ್ರು?

Published On - 12:51 pm, Fri, 18 June 21