ಭದ್ರತೆ ಇಲ್ಲದ್ದನ್ನೇ ಎನ್​ಕ್ಯಾಷ್​ ಮಾಡ್ಕೊಂಡು.. ತಡರಾತ್ರಿ ATMಗೆ ಕನ್ನ, 11 ಲಕ್ಷ ದೋಚಿ ಎಸ್ಕೇಪ್

| Updated By: ಸಾಧು ಶ್ರೀನಾಥ್​

Updated on: Oct 02, 2020 | 2:46 PM

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ತಡರಾತ್ರಿ ATMಗೆ ಕನ್ನ ಹಾಕಿರುವ ಘಟನೆ KR ಪುರದ ಭಟ್ಟರಹಳ್ಳಿಯಲ್ಲಿ ನಡೆದಿದೆ. ಖದೀಮರು ATMನಲ್ಲಿದ್ದ ಬರೊಬ್ಬರಿ 11 ಲಕ್ಷ ರೂಪಾಯಿ ನಗದು ದೋಚಿ ಎಸ್ಕೇಪ್ ಆಗಿದ್ದಾರೆ. ನಿನ್ನೆ ಸಂಜೆ ಬ್ಯಾಂಕ್​ ಸಿಬ್ಬಂದಿ ATMಗೆ ಲಕ್ಷ ಲಕ್ಷ ಹಣ ತುಂಬಿದ್ದರಂತೆ. ಇದಕ್ಕಾಗಿಯೇ ಕಾದು ಕುಳಿತಿದ್ದ ಕಳ್ಳರ ಗ್ಯಾಂಗ್ ವೆಲ್ಡಿಂಗ್ ಕಟರ್ ಬಳಸಿ ATM ಕಟ್ ಮಾಡಿದ್ದಾರೆ. ಬಳಿಕ ATM ನಲ್ಲಿದ್ದ ಬರೊಬ್ಬರಿ 11 ಲಕ್ಷ ರೂಪಾಯಿ ನಗದು ದೊಚಿ ಪರಾರಿಯಾಗಿದ್ದಾರೆ. ಬ್ಯಾಂಕ್​ನ ಬೇಜವಾಬ್ದಾರಿತನದಿಂದ ಕೃತ್ಯ […]

ಭದ್ರತೆ ಇಲ್ಲದ್ದನ್ನೇ ಎನ್​ಕ್ಯಾಷ್​ ಮಾಡ್ಕೊಂಡು.. ತಡರಾತ್ರಿ ATMಗೆ ಕನ್ನ, 11 ಲಕ್ಷ ದೋಚಿ ಎಸ್ಕೇಪ್
Follow us on

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ತಡರಾತ್ರಿ ATMಗೆ ಕನ್ನ ಹಾಕಿರುವ ಘಟನೆ KR ಪುರದ ಭಟ್ಟರಹಳ್ಳಿಯಲ್ಲಿ ನಡೆದಿದೆ. ಖದೀಮರು ATMನಲ್ಲಿದ್ದ ಬರೊಬ್ಬರಿ 11 ಲಕ್ಷ ರೂಪಾಯಿ ನಗದು ದೋಚಿ ಎಸ್ಕೇಪ್ ಆಗಿದ್ದಾರೆ.

ನಿನ್ನೆ ಸಂಜೆ ಬ್ಯಾಂಕ್​ ಸಿಬ್ಬಂದಿ ATMಗೆ ಲಕ್ಷ ಲಕ್ಷ ಹಣ ತುಂಬಿದ್ದರಂತೆ. ಇದಕ್ಕಾಗಿಯೇ ಕಾದು ಕುಳಿತಿದ್ದ ಕಳ್ಳರ ಗ್ಯಾಂಗ್ ವೆಲ್ಡಿಂಗ್ ಕಟರ್ ಬಳಸಿ ATM ಕಟ್ ಮಾಡಿದ್ದಾರೆ. ಬಳಿಕ ATM ನಲ್ಲಿದ್ದ ಬರೊಬ್ಬರಿ 11 ಲಕ್ಷ ರೂಪಾಯಿ ನಗದು ದೊಚಿ ಪರಾರಿಯಾಗಿದ್ದಾರೆ.

ಬ್ಯಾಂಕ್​ನ ಬೇಜವಾಬ್ದಾರಿತನದಿಂದ ಕೃತ್ಯ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ATMಗೆ ಯಾವುದೇ ಸಿಸಿಟಿವಿ ಅಳವಡಿಸಿರಲಿಲ್ಲ. ಜೊತೆಗೆ, ಅಲರ್ಟ್ ಅಲಾರಾಮ್​ ಅಷ್ಟೇ ಅಲ್ಲದೇ ಇಲ್ಲಿ ಭದ್ರತಾ ಸಿಬ್ಬಂದಿಯನ್ನು ಸಹ ನಿಯೋಜಿಸಿರಲಿಲ್ಲ. ಇದನ್ನೇ ಎನ್​ಕ್ಯಾಶ್​ ಮಾಡಿಕೊಂಡ ದರೋಡೆಕೋರರು ಹಲವು ದಿನಗಳು ವಾಚ್ ಮಾಡಿದ ಬಳಿಕ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿದೆ.

ಇಂದು ಬೆಳಿಗ್ಗೆ ATM ಮುಂಭಾಗದಲ್ಲಿರುವ ಬೇಕರಿ ಬಾಗಿಲು ತೆಗೆಯುವಾಗ ಕೃತ್ಯ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ.