ಶಿವಮೊಗ್ಗ: ಪತ್ನಿಯನ್ನು ಮಾತಾಡಿಸಿದ್ದಕ್ಕೆ ಎದುರು ಮನೆ ಯುವಕನ ಮೇಲೆ ಹಲ್ಲೆ

ಶಿವಮೊಗ್ಗ(Shivamogga) ಜಿಲ್ಲೆಯ ಸಾಗರ ನಗರದ ಬೆಳಲಮಕ್ಕಿಯಲ್ಲಿ ಪತ್ನಿಯನ್ನು ಮಾತಾಡಿಸಿದ್ದಕ್ಕೆ ಎದುರು ಮನೆ ಯುವಕನ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ನಡೆದಿದೆ. ಓರ್ವ ಗಾಯಾಳುವನ್ನು ಮಣಿಪಾಲ್​ಗೆ ಸೇರಿಸಿದರೆ, ಮತ್ತೊರ್ವನಿಗೆ ಶಿವಮೊಗ್ಗದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಶಿವಮೊಗ್ಗ: ಪತ್ನಿಯನ್ನು ಮಾತಾಡಿಸಿದ್ದಕ್ಕೆ ಎದುರು ಮನೆ ಯುವಕನ ಮೇಲೆ ಹಲ್ಲೆ
ಸಾಗರದಲ್ಲಿ ಯುವಕನೋರ್ವನ ಮೇಲೆ ಹಲ್ಲೆ
Follow us
Basavaraj Yaraganavi
| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 20, 2024 | 6:10 PM

ಶಿವಮೊಗ್ಗ, ಫೆ.20: ಪತ್ನಿಯನ್ನು ಮಾತಾಡಿಸಿದ್ದಕ್ಕೆ ಎದುರು ಮನೆ ಯುವಕನ ಮೇಲೆ ಕತ್ತಿಯಿಂದ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಶಿವಮೊಗ್ಗ(Shivamogga) ಜಿಲ್ಲೆಯ ಸಾಗರ ನಗರದ ಬೆಳಲಮಕ್ಕಿಯಲ್ಲಿ ನಡೆದಿದೆ. ಮೊದಲು ಕತ್ತಿ, ರಾಡ್‌ನಿಂದ ನವೀನ್ ಕಾರಿನ ಮೇಲೆ ದಾಳಿ ನಡೆಸಿದ್ದ ಆರೋಪಿ ರವಿ. ನಂತರ ಮನೆಯಿಂದ ಹೊರಬಂದ ಯುವಕ ನವೀನ್‌, ಆತನ ಸ್ನೇಹಿತ ಧರೇಶ್‌ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಕತ್ತಿ ದಾಳಿಯಿಂದ ಬೆರಳು ಕಟ್‌ ಆಗಿದ್ದು, ಎದೆ ಭಾಗದಲ್ಲಿ ಗಂಭೀರ ಗಾಯವಾಗಿದೆ.

ಇನ್ನು ಗಾಯಾಳು ನವೀನ್‌ನನ್ನು ಉಡುಪಿಯ ಮಣಿಪಾಲ್‌ ಆಸ್ಪತ್ರೆಗೆ ದಾಖಲು ಮಾಡಿದರೆ, ಮತ್ತೊಬ್ಬ ಗಾಯಾಳು ಧರೇಶ್‌ಗೆ ಶಿವಮೊಗ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಸಾಗರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ರವಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೇವಲ ಮಾತನಾಡಿಸಿದಕ್ಕೆ ಮಾರಣಾಂತಿಕ ಹಲ್ಲೆ ಮಾಡಿದನೆ?, ಅಥವಾ ಹಳೆಯ ದ್ವೇಷವೇನಾದರೂ ಇತ್ತೆ. ಈ ರೀತಿಯ ಹಲವಾರು ಆಯಾಮಗಳಲ್ಲಿ ತನಿಖೆ ಶುರುವಾಗಿದೆ.

ಇದನ್ನೂ ಓದಿ:ಅನೈತಿಕ ಸಂಬಂಧ: ನಡುರಸ್ತೆಯಲ್ಲಿ ಪತ್ನಿಯನ್ನು ಅಟ್ಟಾಡಿಸಿ ಮಚ್ಚಿನಿಂದ ಹಲ್ಲೆ ಮಾಡಿದ ಪತಿ

ಸ್ನೇಹಿತನನ್ನ ಡ್ರಾಪ್‌ ಮಾಡಲು ಹೋದ ವ್ಯಕ್ತಿ ಮೇಲೆ ಹಲ್ಲೆ ಆರೋಪ

ಬೆಂಗಳೂರು ಗ್ರಾಮಾಂತರ: ಸ್ನೇಹಿತನನ್ನ ಡ್ರಾಪ್‌ ಮಾಡಲು ಹೋದ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ ಆರೋಪ ದೊಡ್ಡಬಳ್ಳಾಪುರ ತಾಲೂಕಿನ ಮಾರಸಂದ್ರ ಬಳಿಯ ಪ್ರಾವಿಡೆಂಟ್​​​​ ವೆಲ್ವರ್ಥ್​ ಸಿಟಿ ಅಪಾರ್ಟ್​ಮೆಂಟ್​ನಲ್ಲಿ ಕೇಳಿಬಂದಿದೆ. ತಮಿಳು ಯುವಕರು ಮತ್ತು ಭದ್ರತಾ ಸಿಬ್ಬಂದಿಯಿಂದ ಹಲ್ಲೆ ಮಾಡಲಾಗಿದ್ದು, ಅರ್ಚನ್​​​(19) ಹಲ್ಲೆಯಿಂದ ಗಾಯಗೊಂಡ ಯುವಕ. ಯುವಕನ ಮೇಲೆ ಹಲ್ಲೆ ನಡೆಸಿದ ದೃಶ್ಯ ಮೊಬೈಲ್​ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಯುವಕನ ಮೇಲಿನ ಹಲ್ಲೆಗೆ ನ್ಯಾಯ ಕೊಡಿಸುವಂತೆ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಈ ಘಟನೆ ರಾಜಾನುಕುಂಟೆ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ