ಪೂಜೆ ನೆಪದಲ್ಲಿ ಬಂದು ಕನ್ನ ಹಾಕುತ್ತಿದ್ದ ಖದೀಮರ ಬಂಧನ
ಬೆಂಗಳೂರು: ಪೂಜೆ ಮಾಡುವ ನೆಪದಲ್ಲಿ ಮನೆಗೆ ಬಂದು ಕನ್ನ ಹಾಕುತ್ತಿದ್ದ ಖದೀಮರನ್ನು ನಗರದ ಸಂಪಿಗೆಹಳ್ಳಿ ಪೊಲೀಸರು ಬಂಧಸಿದ್ದಾರೆ. ನಾಗರಾಜ್ ಹಾಗೂ ಲಕ್ಷ್ಮಣ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, 180 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಇವರಿಬ್ಬರು ಮೊದಲು ಸ್ವಾಮೀಜಿ ವೇಷ ಧರಿಸಿ ದೊಡ್ಡ ದೊಡ್ಡ ಮನೆಗಳಿಗೆ ಎಂಟ್ರಿ ಕೊಟ್ಟು, ನಿಮ್ಮ ಮನೆಯಲ್ಲಿ ದೋಷವಿದೆ. ದೋಷ ನಿವಾರಣೆಗೆ ಮಹಾ ಪೂಜೆ ಮಾಡಬೇಕು ಎಂದು ನಂಬಿಸಿ ಪೂಜೆ ಮಾಡುವಂತೆ ಮಾಡುತ್ತಿದ್ದರು. ಪೂಜೆ ವೇಳೆ ಮನೆಯಲ್ಲಿದ್ದ ಚಿನ್ನವನ್ನು ಒಂದೆಡೆ ಇಡುವಂತೆ ಹೇಳುತ್ತಿದ್ದರು. […]
ಬೆಂಗಳೂರು: ಪೂಜೆ ಮಾಡುವ ನೆಪದಲ್ಲಿ ಮನೆಗೆ ಬಂದು ಕನ್ನ ಹಾಕುತ್ತಿದ್ದ ಖದೀಮರನ್ನು ನಗರದ ಸಂಪಿಗೆಹಳ್ಳಿ ಪೊಲೀಸರು ಬಂಧಸಿದ್ದಾರೆ. ನಾಗರಾಜ್ ಹಾಗೂ ಲಕ್ಷ್ಮಣ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, 180 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಇವರಿಬ್ಬರು ಮೊದಲು ಸ್ವಾಮೀಜಿ ವೇಷ ಧರಿಸಿ ದೊಡ್ಡ ದೊಡ್ಡ ಮನೆಗಳಿಗೆ ಎಂಟ್ರಿ ಕೊಟ್ಟು, ನಿಮ್ಮ ಮನೆಯಲ್ಲಿ ದೋಷವಿದೆ. ದೋಷ ನಿವಾರಣೆಗೆ ಮಹಾ ಪೂಜೆ ಮಾಡಬೇಕು ಎಂದು ನಂಬಿಸಿ ಪೂಜೆ ಮಾಡುವಂತೆ ಮಾಡುತ್ತಿದ್ದರು. ಪೂಜೆ ವೇಳೆ ಮನೆಯಲ್ಲಿದ್ದ ಚಿನ್ನವನ್ನು ಒಂದೆಡೆ ಇಡುವಂತೆ ಹೇಳುತ್ತಿದ್ದರು. ನಂತರ ಮನೆಯ ಸಂಪೂರ್ಣ ಮಾಹಿತಿ ಕಲೆ ಹಾಕಿ ಸರಿಯಾದ ಸಮಯ ನೋಡಿ ರಾತ್ರಿ ವೇಳೆ ಮನೆಗೆ ಎಂಟ್ರಿ ಕೊಟ್ಟು ಚಿನ್ನಾಭರಣ ಲೂಟಿ ಮಾಡುತ್ತಿದ್ದರು. ಸದ್ಯ ಸಂಪಿಂಗೆಹಳ್ಳಿ ಪೊಲೀಸರ ಕಾರ್ಯಾಚರಣೆಯಿಂದ ಆರೋಪಿಗಳನ್ನು ಬಂಧಿಸಲಾಗಿದೆ.