ಚಿತ್ರನಟರ ಪುತ್ರಿಯರ ಕಾರು ಅಪಘಾತ, ಮೂವರಿಗೆ ಗಾಯ

ಚಿತ್ರನಟರ ಪುತ್ರಿಯರ ಕಾರು ಅಪಘಾತ, ಮೂವರಿಗೆ ಗಾಯ

ಬೆಂಗಳೂರು: ಸ್ಯಾಂಡಲ್ ವುಡ್ ಚಿತ್ರನಟ, ನಿರ್ದೇಶಕರ ಮಕ್ಕಳಿದ್ದ ಕಾರು ಅಪಘಾತವಾಗಿದೆ. ಯಲಹಂಕ ಸಂಚಾರಿ ಠಾಣಾ ವ್ಯಾಪ್ತಿಯ ಮಾವಳ್ಳಿ ಬಳಿ ತಡರಾತ್ರಿ ಘಟನೆ ನಡೆದಿದ್ದು, ಎರಡು ದಿನದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಜುಲೈ 28 ರ ತಡರಾತ್ರಿ ರಾಜಾನುಕುಂಟೆಯಿಂದ ಯಲಹಂಕ ಮಾರ್ಗವಾಗಿ ಬರ್ತಿದ್ದ ಬಿಳಿ ಬಣ್ಣದ ಫಾರ್ಚೂನರ್ ಕಾರು ನಿಯಂತ್ರಣ ತಪ್ಪಿ ಮರವೊಂದಕ್ಕೆ ಗುದ್ದಿತ್ತು. ಈ ಪರಿಣಾಮ ಕಾರಿನಲ್ಲಿದ್ದ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಪುತ್ರಿ ರೋಹಿಣಿ ಸಿಂಗ್, ನಟ ಜೈ ಜಗದೀಶ್ ಪುತ್ರಿ ಅರ್ಪಿತಾ, ಸ್ನೇಹಿತನಿಗೆ […]

Ayesha Banu

|

Jul 30, 2020 | 3:56 PM

ಬೆಂಗಳೂರು: ಸ್ಯಾಂಡಲ್ ವುಡ್ ಚಿತ್ರನಟ, ನಿರ್ದೇಶಕರ ಮಕ್ಕಳಿದ್ದ ಕಾರು ಅಪಘಾತವಾಗಿದೆ. ಯಲಹಂಕ ಸಂಚಾರಿ ಠಾಣಾ ವ್ಯಾಪ್ತಿಯ ಮಾವಳ್ಳಿ ಬಳಿ ತಡರಾತ್ರಿ ಘಟನೆ ನಡೆದಿದ್ದು, ಎರಡು ದಿನದ ಬಳಿಕ ಘಟನೆ ಬೆಳಕಿಗೆ ಬಂದಿದೆ.

ಜುಲೈ 28 ರ ತಡರಾತ್ರಿ ರಾಜಾನುಕುಂಟೆಯಿಂದ ಯಲಹಂಕ ಮಾರ್ಗವಾಗಿ ಬರ್ತಿದ್ದ ಬಿಳಿ ಬಣ್ಣದ ಫಾರ್ಚೂನರ್ ಕಾರು ನಿಯಂತ್ರಣ ತಪ್ಪಿ ಮರವೊಂದಕ್ಕೆ ಗುದ್ದಿತ್ತು. ಈ ಪರಿಣಾಮ ಕಾರಿನಲ್ಲಿದ್ದ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಪುತ್ರಿ ರೋಹಿಣಿ ಸಿಂಗ್, ನಟ ಜೈ ಜಗದೀಶ್ ಪುತ್ರಿ ಅರ್ಪಿತಾ, ಸ್ನೇಹಿತನಿಗೆ ಗಾಯಗಳಾಗಿವೆ. ಅವರನ್ನ ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ನಡೆದ 2 ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

Follow us on

Related Stories

Most Read Stories

Click on your DTH Provider to Add TV9 Kannada