ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯವನ್ನು ವಶಕ್ಕೆ ಪಡೆದ ಸಂಕೇಶ್ವರ ಅಬಕಾರಿ ಪೊಲೀಸ್​​

| Updated By: ವಿವೇಕ ಬಿರಾದಾರ

Updated on: Jul 17, 2022 | 7:07 PM

ಹುಕ್ಕೇರಿ ತಾಲೂಕಿನ ಕಮತನೂರ ಗೇಟ್ ಬಳಿ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 18.30 ಲಕ್ಷ ರೂ. ಮೌಲ್ಯದ ಮದ್ಯವನ್ನು ಸಂಕೇಶ್ವರ ಠಾಣೆ ಅಬಕಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ

ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯವನ್ನು ವಶಕ್ಕೆ ಪಡೆದ ಸಂಕೇಶ್ವರ ಅಬಕಾರಿ ಪೊಲೀಸ್​​
ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯ ವಶ
Follow us on

ಬೆಳಗಾವಿ: ಹುಕ್ಕೇರಿ (Hukkeri) ತಾಲೂಕಿನ ಕಮತನೂರ ಗೇಟ್ ಬಳಿ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 18.30 ಲಕ್ಷ ರೂ. ಮೌಲ್ಯದ ಮದ್ಯವನ್ನು ಸಂಕೇಶ್ವರ (Sankeshwar) ಠಾಣೆ ಅಬಕಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬೆಳಗಾವಿ (Belagavi) ತಾಲೂಕಿನ ಖನಗಾವಿ ಗ್ರಾಮದ ಲಾರಿ ಚಾಲಕ ಬಸವರಾಜ ಡಿಂಪಲಕುಂಪಿ (36) ಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. KA25 – C5844 ನಂಬರ್ ಹೊಂದಿದ ಐಚರ್ ಲಾರಿಯಲ್ಲಿ ಗೋವಾದಿಂದ ರಾಜ್ಯಕ್ಕೆ 280 ಬಾಕ್ಸ್​​ಗಳ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದರು. ಸಂಕೇಶ್ವರ ಅಬಕಾರಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಕ್ಷಿಣೆ ಕಿರುಕುಳ ತಾಳದೇ ಕಂದನ ಜೊತೆ ತಾಯಿ ಆತ್ಮಹತ್ಯೆ, ಪ್ರೀತಿಸಿ ವಿವಾಹವಾಗಿದ್ದ ಪತಿ ಅರೆಸ್ಟ್

ಶಿವಮೊಗ್ಗ: ವರದಕ್ಷಿಣೆ ಕಿರುಕುಳ ತಾಳದೇ ಮಗನ ಜೊತೆ ನೇಣು ಬಿಗಿದುಕೊಂಡು ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಪ್ರೀತಿಸಿ ವಿವಾಹವಾಗಿದ್ದ ಪತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆಯ  ಸೊರಬ ತಾಲೂಕಿನ  ಕಪ್ಪಗಳಲೆ ಗ್ರಾಮದ ನಯನಾ(27) ಮತ್ತು ಗುರು(4) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ತಾಯಿ, ಮಗ. ಮನೆಯಲ್ಲಿ ನೇಣು ಬಿಗಿದುಕೊಂಡು ಅಮ್ಮ, ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ನಯನಾ 5 ವರ್ಷಗಳ ಹಿಂದೆ ಶರತ್ ಎಂಬಾತನನ್ನು ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. ದುರಂತದ ಬಳಿಕ ನಯನಾ ಪತಿ ಶರತ್​​ನನ್ನ ಪೊಲೀಸರು ಅರೆಸ್ಟ್ ಮಾಡಿದ್ದು, ಪತಿ ಶರತ್, ಅತ್ತೆ ಸೀತಮ್ಮ, ಮಾವ ಹಾಲೇಶ್ ವಿರುದ್ಧ ಸೊರಬ ಠಾಣೆಯಲ್ಲಿ ಕೇಸ್ ದಾಖಲು ಮಾಡಿಕೊಂಡಿದ್ದಾರೆ. ಸೊರಬ ಪೊಲೀಸರು ಪತಿ ಶರತ್ ನನ್ನು ಬಂಧಿಸಿದ್ದಾರೆ.

Published On - 6:49 pm, Sun, 17 July 22