Gadag News: ಗ್ರಾಮೀಣ ಭಾಗದ ಜನ್ರ ಮುಗ್ಧತೆ ದುರುಪಯೋಗ: ಕ್ರೇಡಿಟ್ ಕಾರ್ಡ್ ಬಳಸಿ 6 ಲಕ್ಷ ರೂ. ದೋಚಿದ ಸೇಲ್ಸ್ ಮನ್

ಗ್ರಾಹಕರ ಕ್ರೇಡಿಟ್ ಕಾರ್ಡ್ ಬಳಸಿ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿರುವಂತಹ ಘಟನೆ ಬೆಳಕಿಗೆ ಬಂದಿದೆ.

Gadag News: ಗ್ರಾಮೀಣ ಭಾಗದ ಜನ್ರ ಮುಗ್ಧತೆ ದುರುಪಯೋಗ: ಕ್ರೇಡಿಟ್ ಕಾರ್ಡ್ ಬಳಸಿ 6 ಲಕ್ಷ ರೂ. ದೋಚಿದ ಸೇಲ್ಸ್ ಮನ್
ಸಂತೋಷಕುಮಾರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Dec 28, 2022 | 8:43 PM

ಗದಗ: ಎಲ್ಲಿವರೆಗೂ ಮೋಸ (cheating) ಹೋಗುವ ಜನರು ಇರ್ತಾರೋ ಅಲ್ಲಿವರೆಗೂ ಮೋಸ ಮಾಡೋ ಖದೀಮರು ಇದ್ದೇ ಇರ್ತಾರೆ. ಈಗ ಗದಗ ಜಿಲ್ಲೆಯಲ್ಲೂ ಆಗಿದ್ದೂ ಅದೇ. ಗ್ರಾಹಕರ ಕ್ರೇಡಿಟ್ ಕಾರ್ಡ್ ಬಳಸಿ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿರುವಂತಹ ಘಟನೆ ಬೆಳಕಿಗೆ ಬಂದಿದೆ. ಜಿಲ್ಲೆಯ ಮುಳಗುಂದ ಪಟ್ಟಣದ ಕರ್ಣಾಟಕ ಬ್ಯಾಂಕ್ ಶಾಖೆ ಸಹಯೋಗದಲ್ಲಿ ಎಸ್.ಬಿ.ಐ (ಸ್ಟೆಟ್ ಬ್ಯಾಂಕ್ ಆಪ್ ಇಂಡಿಯಾ) ನವರು ಕ್ರೇಡಿಟ್ ಕಾರ್ಡ್ ವಿತರಿಸಿದ್ದಾರೆ. ಗ್ರಾಮೀಣ ಭಾಗದ ಜನರ ಮುಗ್ದತೆ ದುರಪಯೋಗ ಪಡಿಸಿಕೊಂಡು ಸೇಲ್ಸ್ ಮನ್ (salesman) ಜನರ ಕ್ರೆಡಿಟ್ ಕಾರ್ಡ್ ಬಳಸಿ 15ಕ್ಕೂ ಹೆಚ್ಚು ಗ್ರಾಹಕರ ಖಾತೆಯಿಂದ ಲಕ್ಷಾಂತರ ರೂಪಾಯಿ ಹಣ ದೋಚಿದ್ದಾನೆ.

ಕಾರ್ಡ ಆಕ್ಟಿವ್ ಮಾಡುವ ನೆಪದಲ್ಲಿ ಖಾತೆಗೆ ಕನ್ನ

ಹಣ ಕಳೆದುಕೊಂಡ ಗ್ರಾಹಕರು ಕರ್ಣಾಟಕ ಬ್ಯಾಂಕ್​ಗೆ ಸೋಮವಾರ ಹೋಗಿ ಪ್ರಶ್ನೆ ಮಾಡಿದ್ದಾರೆ. ಕಳೆದ ಒಂದು ವರ್ಷದಿಂದ ಎಸ್.ಬಿ.ಐ ಕ್ರೇಡಿಟ್ ಕಾರ್ಡ್ ಸೇಲ್ಸ ಮನ್ ಆಗಿ ಕೆಲಸ ಮಾಡುತ್ತಿದ್ದ ಸಂತೋಷಕುಮಾರ ಗೋಧಿ ಹಣ ದೋಚಿದ ಆರೋಪಿ. ಈತ ಕಾರ್ಡ ಸಕ್ರಿಯ(ಆಕ್ಟಿವ್) ಮಾಡುವ ನೆಪದಲ್ಲಿ ಅಮಾಯಕರ ಆಧಾರ, ಪ್ಯಾನ್ ಮಾಹಿತಿ ಪಡೆದು ನಂತರ ತನ್ನ ಖಾತೆಗೆ ಅಂದಾಜು 6 ಲಕ್ಷ ಹಣ ವರ್ಗಾಯಿಸಿಕೊಂಡಿರುವುದು ತಿಳಿದುಬಂದಿದೆ.

ಇದನ್ನೂ ಓದಿ: Devadasi System: ಕೊಪ್ಪಳದಲ್ಲಿ ಅಮಾನವೀಯ ಘಟನೆ; ಅನಾರೋಗ್ಯ ನಿವಾರಣೆಗೆ ಯುವತಿಗೆ ದೇವದಾಸಿ ಪಟ್ಟ

ಕರ್ಣಾಟಕ ಬ್ಯಾಂಕ್ ಶಾಖೆಯ ಗ್ರಾಹಕರ ಖಾತೆಯಲ್ಲಿನ ಹಣ ಕಡಿತಗೊಂಡ ನಂತರ ಗೊತ್ತಾಗಿದೆ. ಬ್ಯಾಂಕ್ ವ್ಯವಸ್ಥಾಪಕರ ಬಳಿ ಹಣ ಕಡಿತವಾಗಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಇದು ಕ್ರೇಡಿಟ್ ಕಾರ್ಡಗೆ ಜಮೆ ಆಗಿದೆ ಎನ್ನುವ ಮಾಹಿತಿ ನೀಡಿದ್ದಾರೆ. ನಾವು ಯಾವುದೇ ವಸ್ತು ಖರೀದಿ ಮಾಡಿಲ್ಲ. ಎಲ್ಲೂ ಕಾರ್ಡ್ ಬಳಕೆ ಮಾಡಿಲ್ಲ ಹೇಗೆ ಹಣ ಹೋಯಿತು ಎಂದು ಪ್ರಶ್ನಿಸಿದಾಗ ಕ್ರೇಡಿಟ್ ಸೇಲ್ಸ ಮನ್ ಸಂತೋಷ ಮಾಡಿರುವ ವಂಚನೆ ಗೊತ್ತಾಗಿದೆ.

ಗ್ರಾಹಕರ ವಿಶ್ವಾಸಕ್ಕೆ ದ್ರೋಹ

ನಾವು ಕರ್ಣಾಟಕ ಬ್ಯಾಂಕ್ ಮೇಲೆ ವಿಶ್ವಾಸವಿಟ್ಟು ಕಾರ್ಡ ತೆಗೆದುಕೊಂಡಿದ್ದೇವೆ. ಆದರೆ ನಮಗೆ ವಂಚನೆ ಆಗಿದೆ. ಬ್ಯಾಂಕ್ ನವರು ನಮ್ಮ ಹಣವನ್ನ ಹಿಂದಕ್ಕೆ ಕೊಡಬೇಕು ಅಂತ ಒತ್ತಾಯಿಸಿದ್ದಾರೆ. ಈಗಾಗಲೇ ಹಲವರ ಖಾತೆಗಳ ಮೇಲೆ ಕ್ರೇಡಿಟ್ ಸಾಲವಿದೆ. ಹಣ ಹಾಕಿದರೆ ತಕ್ಷಣ ಸಾಲಕ್ಕೆ ಹೋಗುತ್ತಿದೆ. ಇದರಿಂದ ಆರ್ಥಿಕ ವ್ಯವಹಾರಗಳಿಗೆ ಸಮಸ್ಯೆಯಾಗಿದೆ, ನಮ್ಮ ಖಾತೆಗಳನ್ನ ಸರಿ ಮಾಡಬೇಕು ಅಂತ ವಂಚನೆಗೆ ಒಳಗಾದ ಗ್ರಾಹಕ ಶರತ ಸೋನಗೋಜಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ: Gadag: ವಂಚಕರು ಕಳುಹಿಸಿದ ಲಿಂಕ್ ಓಪನ್ ಮಾಡಿ ಲಕ್ಷಾಂತರ ರೂ. ಹಣ ಕಳೆದುಕೊಂಡ ನೌಕರ

ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಸಂತೋಷಕುಮಾರ ವಿರುದ್ದ ದೂರು ನೀಡಿದ್ದಾರೆ. ಆರೋಪಿ ವಿರುದ್ದ ಹಣ ವಂಚನೆ ಹಾಗೂ ಆರ್ಥಿಕ ಅಪರಾಧಗಳ ಅಡಿ ಮುಳಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ಸಂಜೀವ ಪಾಂಡ್ರೆ ಟಿವಿ9, ಗದಗ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:41 pm, Wed, 28 December 22