AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gadag: ವಂಚಕರು ಕಳುಹಿಸಿದ ಲಿಂಕ್ ಓಪನ್ ಮಾಡಿ ಲಕ್ಷಾಂತರ ರೂ. ಹಣ ಕಳೆದುಕೊಂಡ ನೌಕರ

ಸರಕಾರಿ ನೌಕರರೊಬ್ಬರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕೆವೈಸಿ ಅಪ್ಡೇಟ್ ಮಾಡುವಂತೆ ಲಿಂಕ್ ಕಳುಹಿಸಿ ಲಕ್ಷಾಂತರ ರೂಪಾಯಿ ಹಣ ಲಪಟಾಯಿಸಿರುವಂತಹ ಘಟನೆ ಜಿಲ್ಲೆಯಲ್ಲಿ ನಡೆದಿದೆ.

Gadag: ವಂಚಕರು ಕಳುಹಿಸಿದ ಲಿಂಕ್ ಓಪನ್ ಮಾಡಿ ಲಕ್ಷಾಂತರ ರೂ. ಹಣ ಕಳೆದುಕೊಂಡ ನೌಕರ
ಪ್ರಾತಿನಿಧಿಕ ಚಿತ್ರImage Credit source: theconversation.com
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Dec 26, 2022 | 6:59 PM

Share

ಗದಗ: ಸರಕಾರಿ ನೌಕರರೊಬ್ಬರಿಗೆ ಅಪರಿಚಿತ ವ್ಯಕ್ತಿಯೊಬ್ಬ (fraudsters) ಕೆವೈಸಿ ಅಪ್ಡೇಟ್ ಮಾಡುವಂತೆ ಲಿಂಕ್ ಕಳುಹಿಸಿ ಲಕ್ಷಾಂತರ ರೂಪಾಯಿ ಹಣ (money) ಲಪಟಾಯಿಸಿರುವಂತಹ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಮುಂಡರಗಿ ತಾಲೂಕಿನ ಹಳ್ಳಿಯೊಂದರಲ್ಲಿ ವಾಸವಾಗಿರುವ ಬಸವರಾಜ್ ಎಂಬ ನೌಕರ ಫೇಕ್ ಲಿಂಕ್ ನಂಬಿ ತನ್ನ ಎಸ್​ಬಿಐ ಬ್ಯಾಂಕ್ ಖಾತೆಯಲ್ಲಿನ 2, 24, 997 ರೂಪಾಯಿ ಹಣ ಕಳೆದುಕೊಂಡಿದ್ದಾರೆ. ಮೊಬೈಲ್ ನಂಬರ್​ನಿಂದ ಯಿನೋ ಆ್ಯಪ್ ಕೆವೈಸಿ ಅಪ್ಡೇಟ್ ಮಾಡುವಂತೆ ಲಿಂಕ್ ಕಳುಹಿಸಿದ್ದಾನೆ. ನಂತರ ಲಿಂಕ್ ಓಪನ್ ಮಾಡಿ ಅದರಲ್ಲಿ ಕೇಳಿದ ಮಾಹಿತಿ ಫಿಲ್ ಮಾಡಿದ ನಂತರ ಬಸವರಾಜ್ ಅವರ ಖಾತೆಯಲ್ಲಿನ ರೂ. 24,998 ಹಾಗೂ 1.99.999 ರಂತೆ ಒಟ್ಟು 2ಲಕ್ಷ 24ಸಾವಿರದ 997 ರೂಪಾಯಿಗಳನ್ನು ಆರೋಪಿ ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡು ಮೋಸ ಮಾಡಿದ್ದಾನೆ. ಈ ಕುರಿತು ಗದಗ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಬಸವರಾಜ್​ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಸೈಬರ್ ಪೊಲೀಸರು ಮೋಸ ಮಾಡಿದ ಖದೀಮನ ಬಂಧನಕ್ಕೆ ಜಾಲ ಬೀಸಿದ್ದಾರೆ.

ಇನ್ಸ್ಟಾಗ್ರಾಂ ಮೂಲಕ‌ ಲವ್ ಜಿಹಾದ್? ಮುಸ್ಲಿಂ ಸಂಪ್ರದಾಯದಂತೆ ಮದುವೆದ ಹಿಂದೂ ಯುವತಿ

ಕೊಪ್ಪಳ: ಇಂದಿನ ಸಾಮಾಜಿಕ ಜಾಲತಾಣ ಜಮಾನಾಗೆ ತಕ್ಕಂತೆ ಇನ್ಸ್ಟಾಗ್ರಾಂ ಮೂಲಕ‌ ನಡೆಯಿತಾ ಲವ್ ಜಿಹಾದ್ ಎಂಬ ಶಂಕೆ ವ್ಯಕ್ತವಾಗಿದೆ. ಇನ್ಸ್ಟಾಗ್ರಾಂನಲ್ಲಿ ಹಿಂದೂ ಯುವತಿ ಮುಸ್ಲಿಂ  ಯುವಕ ನಡುವೆ ಪ್ರೀತಿ ಮೊಳಕೆಯೊಡೆದಿದೆ . ಕೊಪ್ಪಳ ಜಿಲ್ಲೆ ಕುಷ್ಟಗಿಯಲ್ಲಿ ಈ ಇನ್ಸ್​ಟೆಂಟ್​​ ಇನ್ಸ್ಟಾಗ್ರಾಂ ಲವ್ ಪ್ರಕರಣ ವರದಿಯಾಗಿದೆ. ಹೈದ್ರಾಬಾದ್ ಮೂಲದ ಯುವಕ ಶೇಕ್ ವಹಿದ್ ಹಾಗೂ ಕೊಪ್ಪಳ ಜಿಲ್ಲೆಯ ಕುಷ್ಟಗಿ  ಪಟ್ಟಣದ ಇಂದಿರಾನಗರದ ಯುವತಿ ಮದುವೆಯಾದ ಜೋಡಿ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಹೊಳೆನರಸೀಪುರ: ಮಹಿಳೆಯನ್ನು ಬರ್ಬರ ಹತ್ಯೆಗೈದು ಪರಾರಿಯಾದ ದುಷ್ಕರ್ಮಿಗಳು

ಕಳೆದ ನಾಲ್ಕು ವರ್ಷಗಳ ಹಿಂದೆ ಇನ್ಸ್ಟಾಗ್ರಾಂನಲ್ಲಿ ಈ ಜೋಡಿ ಪರಿಚಯವಾಗಿದೆ. ಮೊದಲು ಸ್ನೇಹ ಬೆಳೆದು, ಬಳಿಕ‌ ಪ್ರೀತಿಗೆ ತಿರುಗಿದೆ ಆ ಸ್ನೇಹ. ಸದ್ಯ ಪ್ರೇಮ ವಿವಾಹವಾಗಿರುವ ಜೋಡಿ. ಮುಸ್ಲಿಂ ಸಾಂಪ್ರದಾಯದಂತೆ ಯುವತಿ ಮದುವೆಯಾಗಿದ್ದಾರೆ. ಯವತಿ, ಮನೆ ಬಿಟ್ಟು ಹೋಗಿ ಮದುವೆಯಾಗಿದ್ದಾರೆ. ಕುಷ್ಟಗಿ ಪಟ್ಟಣದಲ್ಲಿ ಲವ್ ಜಿಹಾದ್ ಪ್ರಕರಣ  ನಡೆದಿದೆ ಎನ್ನೋ ಆರೋಪ ಎದುರಾಗುತ್ತಿದ್ದಂತೆ ಇಬ್ಬರೂ ಪ್ರೇಮಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಲವಂತದ ಮತಾಂತರದ ಕುರಿತು ಸಹ ಪೊಲೀಸರು ತನಿಖೆ ನಡೆಸಿದ್ದಾರೆ. ಮನಪೂರ್ವಕವಾಗಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿ, ವಿವಾಹ ಆಗಿರುವುದಾಗಿ ಪೊಲೀಸರ ಎದುರು ಯುವತಿ ಹೇಳಿಕೆ‌ ನೀಡಿದ್ದಾರೆ.

ಇದನ್ನೂ ಓದಿ: Crime News ಅಪರಾಧ ಸುದ್ದಿ ರೌಂಡಪ್: ರೈಲಿಗೆ ತಲೆ ಕೊಟ್ಟ ಪ್ರೇಮಿಗಳು, ಡ್ರಗ್ಸ್ ಪೆಡ್ಲರ್ ಅರೆಸ್ಟ್

ಅಪಘಾತದಲ್ಲಿ ಇಬ್ಬರು ಖೋ ಖೋ ಕ್ರೀಡಾಪಟುಗಳ ಸಾವು

ಯಾದಗಿರಿ: ಟಂಟಂ ವಾಹನಕ್ಕೆ ಟ್ರ್ಯಾಕ್ಟರ್​​​ ಡಿಕ್ಕಿ (Accident) ಹೊಡೆದು ಇಬ್ಬರು ದುರ್ಮರಣ ಹೊಂದಿದ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಸಿದ್ದಾಪುರ ಬಳಿ ನಡೆದಿದೆ. ದೇವರಗೋನಾಲ್ ನಿವಾಸಿ ವೆಂಕಟೇಶ (21) ಮತ್ತು ನಾರಾಯಣ (20) ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ. ವೆಂಕಟೇಶ ಮತ್ತು ನಾರಾಯಣ ಅವರು ನಿನ್ನೆ ರಾತ್ರಿ ಸುರಪುರದಿಂದ ತಮ್ಮ ಗ್ರಾಮಕ್ಕೆ ತರಳುತ್ತಿದ್ದಾಗ ಈ ಅವಘಡ ಸಂಭವಿಸಿದ್ದು, ಗಾಯಗೊಂಡ ಐವರನ್ನು ಕಲಬುರಗಿ ಜಿಲ್ಲಾಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದುರ್ಘಟನೆಯಲ್ಲಿ ಮೃತಮಟ್ಟ ಇಬ್ಬರು ಯುವಕರು ಖೋ ಖೋ ಕ್ರೀಡಾಪಟುಗಳಾಗಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ