ಗಣರಾಜ್ಯೋತ್ಸದಲ್ಲಿ ಭದ್ರತಾ ಲೋಪ: ಏಕಾಏಕಿ ಸಿಎಂ ಸಿದ್ದರಾಮಯ್ಯ ಬಳಿ ನುಗ್ಗಿದ ವ್ಯಕ್ತಿ ವಿರುದ್ಧ FIR

| Updated By: Rakesh Nayak Manchi

Updated on: Jan 27, 2024 | 3:13 PM

ಬೆಂಗಳೂರು ನಗರದಲ್ಲಿರುವ ಮಾನಿಕ್ ಷಾ ಪರೇಡ್ ಮೈದಾನದಲ್ಲಿ ನಿನ್ನೆ ಗಣರಾಜ್ಯೋತ್ಸವ ಆಚರಣೆ ವೇಳೆ ಭದ್ರತಾ ಲೋಪ ನಡೆದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರತ್ತ ವ್ಯಕ್ತಿಯೊಬ್ಬ ಏಕಾಏಕಿ ನುಗ್ಗಲು ಯತ್ನಿಸಿದ ಘಟನೆ ನಡೆದಿತ್ತು. ಕೂಡಲೇ ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು, ಇದೀಗ ಆತನ ವಿರುದ್ಧ ಎಫ್​ಐಆರ್ ದಾಖಲಿಸಿದ್ದಾರೆ.

ಗಣರಾಜ್ಯೋತ್ಸದಲ್ಲಿ ಭದ್ರತಾ ಲೋಪ: ಏಕಾಏಕಿ ಸಿಎಂ ಸಿದ್ದರಾಮಯ್ಯ ಬಳಿ ನುಗ್ಗಿದ ವ್ಯಕ್ತಿ ವಿರುದ್ಧ FIR
ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಭದ್ರತಾ ಲೋಪ; ಏಕಾಏಕಿ ಸಿಎಂ ಸಿದ್ದರಾಮಯ್ಯ ಬಳಿ ನುಗ್ಗಿದ ವ್ಯಕ್ತಿ ವಿರುದ್ಧ FIR
Image Credit source: PTI
Follow us on

ಬೆಂಗಳೂರು, ಜ.27: ನಗರದ ಮಾನಿಕ್ ಷಾ ಪರೇಡ್ ಮೈದಾನದಲ್ಲಿ ನಿನ್ನೆ ಗಣರಾಜ್ಯೋತ್ಸವ ಆಚರಣೆ ವೇಳೆ ಭದ್ರತೆ ಭೇದಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರತ್ತ ನುಗ್ಗಲು ಯತ್ನಿಸಿದ ವ್ಯಕ್ತಿ ವಿರುದ್ಧ ಕಬ್ಬನ್ ಪಾರ್ಕ್ ಠಾಣಾ ಪೊಲೀಸರು ಎಫ್​ಐಆರ್ (FIR) ದಾಖಲಿಸಿದ್ದಾರೆ. ಸಾರ್ವಜನಿಕರಲ್ಲಿ ಆತಂಕ ಉಂಟುಮಾಡುವುದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.

ಮೈಸೂರು ಮೂಲದ ಪರಶುರಾಮ್​​ 1993ರಲ್ಲಿ ಕೆಪಿಎಸ್​​ಸಿ ಪರೀಕ್ಷೆ ಬರೆದಿದ್ದರು. ಆದರೆ, ಪರೀಕ್ಷೆ ಫಲಿತಾಂಶವನ್ನು ಸರ್ಕಾರ ತಡೆಹಿಸಿದಿದೆ. ಇದರಿಂದ ಬೇಸತ್ತು ಮನವಿ ಕೊಡಲು ಪ್ರೆಸ್ ಪಾಸ್ ಹಿಡಿದು ಸಿದ್ದರಾಮಯ್ಯರತ್ತ ನುಗ್ಗಲು ಯತ್ನಿಸಿದ್ದರು. ಮೊದಲು ಸಿದ್ದರಾಮಯ್ಯ ಅವರ ಗಮನ ಸೆಳೆಯಲು ಪತ್ರ ಪ್ರದರ್ಶಿಸಿದ್ದರು. ಸಿದ್ದರಾಮಯ್ಯ ಅವರು ಗಮನಿಸಿದಿದ್ದಾಗ ಮೈದಾನಕ್ಕೆ ನುಗ್ಗಲು ಪ್ರಯತ್ನಿಸಿದ್ದರು. ಕೂಡಲೇ ಎಚ್ಚೆತ್ತ ಪೊಲೀಸರು, ಪರುಶರಾಮನನ್ನು ವಶಕ್ಕೆ ಪಡೆದಿದ್ದರು.

ಇದನ್ನೂ ಓದಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ಸಿದ್ದರಾಮಯ್ಯ ಖಡ್ಗ ಝಳಪಳಿಸಿದರು!

ಏನಿದು ಪ್ರಕರಣ?

ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್ ವೇಳೆ ಅಪರಿಚಿತ ವ್ಯಕ್ತಿಯೋರ್ವ ಸಿಎಂ ಸಿದ್ದರಾಮಯ್ಯ ಬಳಿ ನುಗ್ಗಲು ಯತ್ನಿಸಿರುವ ಘಟನೆ ನಿನ್ನೆ ನಡೆದಿತ್ತು. ತಮ್ಮ KPSC ಆರ್ಡರ್ ವಿಳಂಬದ ಬಗ್ಗೆ ಸಿಎಂಗೆ ಮನವಿ ಸಲ್ಲಿಸಲು ಪರಶುರಾಮ್ ಬಂದಿದ್ದರು. ಆದರೆ ಸಿಎಂ ಸಿದ್ದರಾಮಯ್ಯ ಅವರ ಬಳಿ ಹೋಗಲು ಪೊಲೀಸರು ಬಿಡದಿದ್ದಾಗ ಪರಶುರಾಮ್ ಗಣರಾಜ್ಯೋತ್ಸವ ಪರೇಡ್ ನಡೆಯುತ್ತಿರುವಾಗಲೇ ನುಗ್ಗಲು ಯತ್ನಿಸಿದ್ದರು. ಗಣರಾಜ್ಯೋತ್ಸವ ಪರೇಡ್ ನಡೆಯುತ್ತಿರುವಾಗ ಮನವಿ ಪತ್ರ ಪ್ರದರ್ಶಿಸಿದ್ದರೆ. ಪರಶುರಾಮ್ ಮನವಿ ಪತ್ರ ಪ್ರದರ್ಶಿಸುತ್ತಿದ್ದ ಹಾಗೇ ಪೊಲೀಸರು ಅವರನ್ನ ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:12 pm, Sat, 27 January 24