ಅನ್ನ ಹಾಕಿದ ಮನೆಗೇ ಕನ್ನ ಹಾಕಿದ.. ನಂತರ ಕದ್ದ ಒಡವೆಯನ್ನು ಏನು ಮಾಡಿದ ಗೊತ್ತಾ?
ಬೆಂಗಳೂರು: ಜೂಜಾಡುವ ಚಟಕ್ಕೆ ಬಿದ್ದು, ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕಳ್ಳತನ ಮಾಡಿದ್ದ ಆರೋಪಿಯನ್ನು ಗಿರಿನಗರದ ಪೊಲೀಸರು ಬಂಧಿಸಿದ್ದಾರೆ. ಶಂಕರಪ್ಪ ಬಂಧಿತ ಆರೋಪಿ. ಆರೋಪಿ ಕೆಲ ವರ್ಷಗಳಿಂದ ಗಿರಿನಗರದ ಉದ್ಯಮಿಯೊಬ್ಬರ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ಮನೆಯಲ್ಲಿ ಯಾರು ಇಲ್ಲದ ವೇಳೆ ಸುಮಾರು 15 ಲಕ್ಷ ರೂಪಾಯಿ ಮೌಲ್ಯದ 320 ಗ್ರಾಂ ಚಿನ್ನಾಭರಣ ಎಗರಿಸಿದ್ದ. ನಂತರ ಶಂಕರಪ್ಪ ಕಳುವು ಮಾಡಿದ ಚಿನ್ನಾಭರಣವನ್ನು ಹೊಸದುರ್ಗದಲ್ಲಿ ಅಡವಿಟ್ಟಿದ್ದ. ಮನೆಯಲಿದ್ದ ಚಿನ್ನಾಭರಣ ಕಾಣದೆ ಇದ್ದಾಗ ಚಿಂತಿತರಾದ ಮನೆಯ ಯಜಮಾನ, ಗಿರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ದೂರಿನನ್ವಯ […]
ಬೆಂಗಳೂರು: ಜೂಜಾಡುವ ಚಟಕ್ಕೆ ಬಿದ್ದು, ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕಳ್ಳತನ ಮಾಡಿದ್ದ ಆರೋಪಿಯನ್ನು ಗಿರಿನಗರದ ಪೊಲೀಸರು ಬಂಧಿಸಿದ್ದಾರೆ. ಶಂಕರಪ್ಪ ಬಂಧಿತ ಆರೋಪಿ. ಆರೋಪಿ ಕೆಲ ವರ್ಷಗಳಿಂದ ಗಿರಿನಗರದ ಉದ್ಯಮಿಯೊಬ್ಬರ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ಮನೆಯಲ್ಲಿ ಯಾರು ಇಲ್ಲದ ವೇಳೆ ಸುಮಾರು 15 ಲಕ್ಷ ರೂಪಾಯಿ ಮೌಲ್ಯದ 320 ಗ್ರಾಂ ಚಿನ್ನಾಭರಣ ಎಗರಿಸಿದ್ದ. ನಂತರ ಶಂಕರಪ್ಪ ಕಳುವು ಮಾಡಿದ ಚಿನ್ನಾಭರಣವನ್ನು ಹೊಸದುರ್ಗದಲ್ಲಿ ಅಡವಿಟ್ಟಿದ್ದ.
ಮನೆಯಲಿದ್ದ ಚಿನ್ನಾಭರಣ ಕಾಣದೆ ಇದ್ದಾಗ ಚಿಂತಿತರಾದ ಮನೆಯ ಯಜಮಾನ, ಗಿರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ದೂರಿನನ್ವಯ ತನಿಖೆ ನಡೆಸಿದ ಪೊಲೀಸರು, ಆರೋಪಿ ಶಂಕರಪ್ಪನನ್ನು ಬಂಧಿಸಿದ್ದಾರೆ. ಶಂಕರಪ್ಪ ಹೊಸದುರ್ಗದಲ್ಲಿ ಅಡವಿಟ್ಟಿದ್ದ ಚಿನ್ನಾಭರಣಗಳನ್ನ ಹಣದಲ್ಲಿ ಜೂಜಾಡಿ ಸೋತಿದ್ದಾನೆ ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.