ಚಾಮರಾಜನಗರ: ಜಮೀನಿನಲ್ಲಿ ವಿದ್ಯುತ್ ಲೈನ್ ಮತ್ತು ಟ್ರಾನ್ಸಫಾರ್ಮರ್ ಅಳವಡಿಕೆಗೆ ಸೆಸ್ಕ್ (CESCOM) ಜೆಇ ಅವರು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಜಿಲ್ಲೆಯ ಯಳಂದೂರು ವಿಭಾಗದ ಸೆಸ್ಕ್ ಜೆಇ (JE) ಮದನ್ ವಿರುದ್ಧ ಈ ಆರೋಪ ಕೇಳಿಬಂದಿದೆ. ಯರಗಂಬಳ್ಳಿ ರೈತ (Farmer) ಮಹೇಶ್ ಕುಮಾರ್ ಅವರು ತಮ್ಮ ಜಮೀನಿನಲ್ಲಿ ಟ್ರಾನ್ಸಫಾರ್ಮರ್ ಅಳವಡಿಕೆಗೆ ಮತ್ತು ವಿದ್ಯುತ್ ಲೈನ್ ಸಂಪರ್ಕಕ್ಕೆ ಜೆಇ ಮದನ್ ಅವರು ಲೈನ್ ಮ್ಯಾನ್ ಮೂಲಕ ಲಂಚಕ್ಕೆ ಬೇಡಿಕೆ (Demand for bribes) ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ಲೈನ್ ಮ್ಯಾನ್ಗಳಾದ ಜಗನ್ನಾಥ್, ಪುಟ್ಟಸ್ವಾಮಿ ಹಾಗೂ ರೈತ ಮಹೇಶ್ ಕುಮಾರ್ ನಡುವಿನ ಸಂಭಾಷಣೆ ಮೊಬೈಲ್ನಲ್ಲಿ ರೆಕಾರ್ಡ್ ಆಗಿದೆ. ಅದರಂತೆ ನೇರವಾಗಿ ಬೇಡ ಪೋನ್ ಪೇ ಅಥವಾ ಗೂಗಲ್ ಪೇ ಮೂಲಕ 4ಸಾವಿರ ರೂಪಾಯಿ ಹಾಕಿ ಎಂದು ಲೈನ್ ಮ್ಯಾನ್ ಹೇಳಿದ್ದಾರೆ. ಜಮೀನಿನಲ್ಲಿ ಟ್ರಾನ್ಸಫಾರ್ಮರ್ ಅಳವಡಿಕೆಗೆ 22 ಸಾವಿರ ರೂ. ಪಾವತಿಸಿದ್ದೇನೆ, ಲೈನ್ ಎಳೆಯಲು 13 ಸಾವಿರ ರೂ. ಪಾವತಿಸಿದ್ದೇನೆ. ನಿಗದಿತ ಶುಲ್ಕ ಪಾವತಿಸಿದರೂ ಲಂಚ ಕೇಳುತ್ತಿದ್ದಾರೆ ಎಂದು ಮಹೇಶ್ ಕುಮಾರ್ ಆರೋಪಿಸಿದ್ದಾರೆ. ಸೆಸ್ಕ್ ಅಧಿಕಾರಿಗಳ ಲಂಚಾವತಾರಕ್ಕೆ ಕಡಿವಾಣ ಹಾಕುವಂತೆ ಸೆಸ್ಕ್ ಮೇಲಧಿಕಾರಿಗಳಿಗೆ ರೈತ ಮಹೇಶ್ ಕುಮಾರ್ ಪತ್ರ ಬರೆದಿದ್ದಾರೆ.
ಇದನ್ನೂ ಓದಿ: Shadow Killings: ಪಾಕಿಸ್ತಾನದ ಜನರ ದಾರಿ ತಪ್ಪಿಸಲು ಕಾಶ್ಮೀರದಲ್ಲಿ ಹಿಂದೂಗಳ ಕೊಲೆ; ಗುಪ್ತಚರ ವರದಿಯಲ್ಲಿ ಮಾಹಿತಿ
ಅತ್ತೆಯನ್ನು ಕೊಂದ ಪಾಪಿ ಅಳಿಯ
ಯಾದಗಿರಿ: ಹೊಟ್ಟೆಗೆ ಚಾಕುವಿನಿಂದ ಇರಿದು ಅತ್ತೆಯನ್ನೇ ಅಳಿಯ ಕೊಲೆ ಮಾಡಿದ ಘಟನೆ ಯಾದಗಿರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಶೀದಾ (45) ಕೊಜೆಯಾದ ಮಹಿಳೆ. ಮಹಾರಾಷ್ಟ್ರದ ಮುಂಬೈ ಮೂಲದ ರಫೀಕ್ ಕೊಲೆ ಆರೋಪಿಯಾಗಿದ್ದಾನೆ. ಕಳೆದ 8 ವರ್ಷಗಳ ಹಿಂದೆ ರಶೀದಾ ಅವರ ಮಗಳನ್ನು ರಫೀಕ್ ವಿವಾಹವಾಗಿದ್ದನು. ಆದರೆ ಅತ್ತೆ ಮತ್ತು ಅಳಿಯನ ನಡುವೆ ಕೌಟುಂಬಿಕ ಕಲಹ ಏರ್ಪಟ್ಟಿತ್ತು. ಅದರಂತೆ ಮುಂಬೈನಿಂದ ಇಂದು ಬೆಳಕ್ಕೆ ಬಂದ ರಫೀಕ್, ಅತ್ತೆ ರಶೀದಾಳನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿರುವ ಪೊಲೀಸರು, ಆರೋಪಿಯ ಬಂಧನಕ್ಕೆ ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: ಮಕ್ಕಳ ಬಿಸಿಯೂಟದ 4.42 ಲಕ್ಷ ರೂ. ದುರುಪಯೋಗ ಆರೋಪ: ಹನಗೋಡು ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಅಮಾನತು
ನವವಿವಾಹಿತೆ ಅನುಮಾನಾಸ್ಪದ ಸಾವು
ಚಿಕ್ಕಬಳ್ಳಾಪುರ: ನವವಿವಾಹಿತೆಯೊಬ್ಬಳು ಗಂಡನ ಮನೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಳೆದ ವರ್ಷ ಅಭಿಲಾಷ್ನನ್ನು ಪ್ರೀತಿಸಿ ವಿವಾಹವಾಗಿದ್ದ ವಿದ್ಯಾರ್ಥಿನಿ ಅನುಷಾ (19) ಒಂದೇ ವರ್ಷದಲ್ಲಿ ಸಾವು ಕಂಡಿದ್ದಾಳೆ. ಅಭಿಲಾಷ್ ಮನೆಯಲ್ಲಿ ಅನುಷಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆದರೆ ಮೃತಳ ಕಿವಿ ತುಂಡಾಗಿದ್ದು, ಕೈ ಮೇಲೆ ಗಾಯಗಳಾಗಿರುವುದು ಪತ್ತೆಯಾಗಿದೆ. ಇತ್ತ ಅಭಿಲಾಷ್ ತನ್ನ ಪತ್ನಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವುದಾಗಿ ಹೇಳಿಕೆ ನೀಡಿದ್ದಾರೆ. ಆದರೆ ಮೃತೆಯ ಕುಟುಂಬಸ್ಥರು ಅಭಿಲಾಷ್ ವಿರುದ್ಧ ಕೊಲೆ ಆರೋಪ ಮಾಡಿದ್ದು, ಅಭಿಲಾಷ್ನನ್ನು ಚಿಕ್ಕಬಳ್ಳಾಪುರ ನಗರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಮಕ್ಕಳ ಬಿಸಿಯೂಟದ 4.42 ಲಕ್ಷ ರೂ. ದುರುಪಯೋಗ ಆರೋಪ: ಹನಗೋಡು ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಅಮಾನತು
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ