Shivamogga: ತೀರ್ಥಹಳ್ಳಿ ಅರಣ್ಯ ಇಲಾಖೆ ಅಧಿಕಾರಿಗೆ ಹನಿಟ್ರ್ಯಾಪ್; ಮೂವರ ಬಂಧನ

| Updated By: Ganapathi Sharma

Updated on: Jun 26, 2023 | 6:21 PM

ಅರಣ್ಯ ಇಲಾಖೆಯ ಡಿಆರ್​​ಎಫ್​ಒ‌ ಅಧಿಕಾರಿಗೆ ಕರೆ ಮಾಡಿದ ಮಹಿಳೆಯೋರ್ವಳು ನೀವು ನಮ್ಮ ಸ್ಟುಡಿಯೋದಲ್ಲಿ ಫೋಟೊ ತೆಗೆಸಿಕೊಂಡಿದ್ದು ಫೋಟೋ ತೆಗೆದುಕೊಂಡು ಹೋಗಿ ಎಂದು ಕರೆ ಮಾಡಿರುತ್ತಾಳೆ. ಮುಂದೇನಾಯ್ತು? ಓದಿ.

Shivamogga: ತೀರ್ಥಹಳ್ಳಿ ಅರಣ್ಯ ಇಲಾಖೆ ಅಧಿಕಾರಿಗೆ ಹನಿಟ್ರ್ಯಾಪ್; ಮೂವರ ಬಂಧನ
ಸಾಂದರ್ಭಿಕ ಚಿತ್ರ
Follow us on

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಆಮಿಷವೊಡ್ಡಿ ಅಧಿಕಾರಿಗಳಿಂದ ಹಣ ವಸೂಲಿ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಇದೊಂದು ಹನಿಟ್ರ್ಯಾಪ್ (Honey trap) ಕೃತ್ಯ ಎನ್ನಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಅರಣ್ಯ ಇಲಾಖೆಯ ಡಿಆರ್​​ಎಫ್​ಒ‌ (DRFO) ಅಧಿಕಾರಿಗೆ ಕರೆ ಮಾಡಿದ ಮಹಿಳೆಯೋರ್ವಳು ನೀವು ನಮ್ಮ ಸ್ಟುಡಿಯೋದಲ್ಲಿ ಫೋಟೊ ತೆಗೆಸಿಕೊಂಡಿದ್ದು ಫೋಟೋ ತೆಗೆದುಕೊಂಡು ಹೋಗಿ ಎಂದು ಕರೆ ಮಾಡಿರುತ್ತಾಳೆ.

ಈ ಫೋನ್ ಕರೆಯು ಅಧಿಕಾರಿ ಮತ್ತು ಮಹಿಳೆಯ ಜತೆ ಸಲುಗೆಗೆ ಕಾರಣವಾಗಿದೆ. ಹತ್ತಿರಕ್ಕೆ ಕರೆಸಿದೆ. ಒಂದು ದಿನ ಅಧಿಕಾರಿ ಮನೆಯಲ್ಲಿದ್ದಾಗ ಈ ಮಹಿಳೆಯ ಗ್ಯಾಂಗ್ ಮನೆಗೆ ಬಂದು ಕದ ತಟ್ಟಿದ್ದಾರೆ. ಆಗ ಅಧಿಕಾರಿಯ ನಗ್ನ ಫೋಟೊ ತೆಗೆದು ಅಧಿಕಾರಿಗೆ ಹಣದ ಬೇಡಿಕೆ ಇಟ್ಟಿದೆ.

ಹಂತ ಹಂತವಾಗಿ ಅಧಿಕಾರಿಗಳು ಹಣ ನೀಡಿದ್ದಾರೆ. ಗ್ಯಾಂಗ್​​ನ ಹಣದ ವಸೂಲಿ ಅಧಿಕಾರಿಯನ್ನು ಜಿಗುಪ್ಸೆಗೆ ಒಳಪಡಿಸಿದೆ. ನಂತರ ತೀರ್ಥಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವಿಚಾರದಲ್ಲಿ ಧನುಷ್, ಅನ್ಸರ್, ಕಾರ್ತಿಕ್, ಪುಂಡ, ಸಿದ್ದಿಕಿ ಮೋಹಿತೆ ಗೌಡ ಹಾಗೂ ಅನನ್ಯ ಯಾನೆ ಸೌರಭ ಎಂಬುವರ ವಿರುದ್ಧ ದೂರು ದಾಖಲಾಗಿದೆ.

ಇದನ್ನೂ ಓದಿ: Shivamogga Airport: ಶಿವಮೊಗ್ಗ ವಿಮಾನ ನಿಲ್ದಾಣದಿಂದ ಆಗಸ್ಟ್​ 11ರಿಂದ ವಿಮಾನ ಸಂಚಾರ; ಸಂಸದ ರಾಘವೇಂದ್ರ ಮಾಹಿತಿ

ಅನನ್ಯ, ಮೋಹಿತೆ ಗೌಡ ಹಾಗೂ ಸಿದ್ದಿಕ್ ಎಂಬುವರನ್ನು ಬಂಧಿಸಲಾಗಿದೆ. ಏಳುಜನರಲ್ಲಿ ಮೂವರು ಬಂಧಿತರಾಗಿದ್ದು ಉಳಿದ ನಾಲ್ವರು ತಲೆಮರೆಸಿಕೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:16 pm, Mon, 26 June 23