AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಹಾರ: ಸಿಗರೇಟ್ ಸೇದಿದ್ದಕ್ಕೆ ಬೆಲ್ಟ್​​​ನಿಂದ ಹೊಡೆದ ಶಾಲಾ ಶಿಕ್ಷಕ, 10ನೇ ತರಗತಿ ವಿದ್ಯಾರ್ಥಿ ಸಾವು

ಮಧುಬನ್ ರೈಸಿಂಗ್ ಸ್ಟಾರ್ ಪ್ರಿಪರೇಟರಿ ಸ್ಕೂಲ್ ಎಂಬ ಖಾಸಗಿ ವಸತಿ ಶಾಲೆಯಲ್ಲಿ ಬಜರಂಗಿ ಎಂಬ ಬಾಲಕ 10 ನೇ ತರಗತಿ ವಿದ್ಯಾರ್ಥಿಯಾಗಿದ್ದ. ಅದೇ ಶಾಲೆಯ ಅಧ್ಯಕ್ಷ ವಿಜಯ್ ಕುಮಾರ್ ಯಾದವ್ ಅವರು ಬಾಲಕ ಧೂಮಪಾನ ಮಾಡುವುದನ್ನುನೋಡಿ ಕೋಪಗೊಂಡಿದ್ದರು.

ಬಿಹಾರ: ಸಿಗರೇಟ್ ಸೇದಿದ್ದಕ್ಕೆ ಬೆಲ್ಟ್​​​ನಿಂದ ಹೊಡೆದ ಶಾಲಾ ಶಿಕ್ಷಕ, 10ನೇ ತರಗತಿ ವಿದ್ಯಾರ್ಥಿ ಸಾವು
ಪ್ರಾತಿನಿಧಿಕ ಚಿತ್ರ
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ|

Updated on: Jun 26, 2023 | 2:01 PM

Share

ಪಾಟ್ನಾ: ಬಿಹಾರದಲ್ಲಿ 15 ವರ್ಷದ ವಿದ್ಯಾರ್ಥಿಯೊಬ್ಬ ಸಾರ್ವಜನಿಕವಾಗಿ ಧೂಮಪಾನ (Smoking) ಮಾಡುತ್ತಿದ್ದನ್ನು ಕಂಡ ಶಿಕ್ಷಕರೊಬ್ಬರು ಬೆಲ್ಟ್ ನಿಂದ ಅಮಾನುಷವಾಗಿ ಥಳಿಸಿದ್ದು, ಏಟು ತಿಂದ ಬಾಲಕ ಸಾವಿಗೀಡಾಗಿದ್ದಾನೆ. ಬಿಹಾರದ (Bihar) ಪೂರ್ವ ಚಂಪಾರಣ್ ಜಿಲ್ಲೆಯ ಬಜರಂಗಿ ಕುಮಾರ್ ಎಂಬ ಬಾಲಕ, ಮಧುಬನ್ ಪ್ರದೇಶದಲ್ಲಿ ತನ್ನ ತಾಯಿಯ ಮೊಬೈಲ್ ಫೋನ್ ರಿಪೇರಿ ಮಾಡಿಸಿ ಹಿಂತಿರುಗುತ್ತಿದ್ದಾಗ, ಶನಿವಾರ ಬೆಳಗ್ಗೆ 11.30ರ ಹೊತ್ತಿಗೆ ಹಾರ್ದಿಯಾ ಸೇತುವೆಯ ಕೆಳಗೆ ತನ್ನ ಸ್ನೇಹಿತರೊಂದಿಗೆ ಸಿಗರೇಟ್ ಸೇದಿದ್ದಾನೆ ಎಂದು ಮೃತ ವಿದ್ಯಾರ್ಥಿಯ ಸಂಬಂಧಿಕರು ಹೇಳಿದ್ದಾರೆ.

ಮಧುಬನ್ ರೈಸಿಂಗ್ ಸ್ಟಾರ್ ಪ್ರಿಪರೇಟರಿ ಸ್ಕೂಲ್ ಎಂಬ ಖಾಸಗಿ ವಸತಿ ಶಾಲೆಯಲ್ಲಿ ಬಜರಂಗಿ ಎಂಬ ಬಾಲಕ 10 ನೇ ತರಗತಿ ವಿದ್ಯಾರ್ಥಿಯಾಗಿದ್ದ. ಅದೇ ಶಾಲೆಯ ಅಧ್ಯಕ್ಷ ವಿಜಯ್ ಕುಮಾರ್ ಯಾದವ್ ಅವರು ಬಾಲಕ ಧೂಮಪಾನ ಮಾಡುವುದನ್ನುನೋಡಿ ಕೋಪಗೊಂಡಿದ್ದರು. ಬಾಲಕನ ಸಂಬಂಧಿಯಾಗಿರುವ ಶಾಲೆಯ ಶಿಕ್ಷಕರೊಬ್ಬರು ಸಹ ಅಧ್ಯಕ್ಷರ ಜೊತೆಯಲ್ಲಿದ್ದರು. ನಂತರ ಅಧ್ಯಕ್ಷರು ಬಾಲಕನ ತಂದೆಯನ್ನು ಕರೆ ಮಾಡಿದ್ದು, ಬಾಲಕನ್ನು ಶಾಲೆಯ ಕಾಂಪೌಂಡ್‌ಗೆ ಎಳೆದೊಯ್ದರು. ಅಲ್ಲಿ ಅವರು ಇತರ ಶಿಕ್ಷಕರೊಂದಿಗೆ ಸೇರಿ ಆತನನ್ನು ನಿರ್ದಯವಾಗಿ ಥಳಿಸಿದ್ದಾರೆ ಎಂದು ಬಜರಂಗಿ ತಾಯಿ ಮತ್ತು ಸಹೋದರಿ ಆರೋಪಿಸಿದ್ದಾರೆ. ಶಿಕ್ಷಕರು ಬಾಲಕನನ್ನು ವಿವಸ್ತ್ರಗೊಳಿಸಿ ಬೆಲ್ಟ್‌ಗಳಿಂದ ಹೊಡೆದಿದ್ದಾರೆ ಎಂದು ಅವರು ಹೇಳಿದರು.

ಬಜರಂಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಾಗ, ಅವರನ್ನು ಮಧುಬನ್‌ನಲ್ಲಿರುವ ಖಾಸಗಿ ನರ್ಸಿಂಗ್ ಹೋಮ್‌ಗೆ ಕರೆದೊಯ್ಯಲಾಯಿತು. ಆದರೆ ಆರೋಗ್ಯ ಸ್ಥಿತಿ ಗಂಭೀರವಾದ ಕಾರಣ ಮುಜಾಫರ್‌ಪುರಕ್ಕೆ ಕಳುಹಿಸಲಾಯಿತು. ಅಲ್ಲಿ ಚಿಕಿತ್ಸೆ ವೇಳೆ ಬಾಲಕ ಮೃತಪಟ್ಟಿದ್ದಾನೆ . ಬಜರಂಗಿಯ ಕುತ್ತಿಗೆ ಮತ್ತು ತೋಳುಗಳ ಮೇಲೆ ಆಳವಾದ ಗಾಯಗಳಾಗಿವೆ ಎಂದು ಸಂಬಂಧಿಕರು ಹೇಳುತ್ತಾರೆ. ಅವರ ಖಾಸಗಿ ಭಾಗಗಳಲ್ಲಿ ರಕ್ತಸ್ರಾವವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಶಾಲೆಯ ಅಧ್ಯಕ್ಷರು ಕುಟುಂಬದವರ ಹೇಳಿಕೆಳನ್ನು ತಿರಸ್ಕರಿಸಿದ್ದು ಹುಡುಗನಿಗೆ ಥಳಿಸಿಲ್ಲ. ಧೂಮಪಾನ ಮಾಡುತ್ತಿದ್ದ ವಿಷಯಅವನ ಕುಟುಂಬಕ್ಕೆ ತಿಳಿಯಬಹುದೆಂಬ ಭಯದಿಂದ ವಿಷ ಸೇವಿಸಿದ್ದಾನೆ ಎಂದು ಹೇಳಿದರು. ಬಾಲಕನನ್ನು ಮುಜಾಫರ್‌ಪುರಕ್ಕೆ ಕರೆದೊಯ್ಯಲಾಯಿತು, ಆದರೂ ಅವ ಬದುಕುಳಿಯಲಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ನವದೆಹಲಿ: ಸುರಂಗದಲ್ಲಿ ಅಡ್ಡಗಟ್ಟಿ ಹಾಡಹಗಲೇ ದರೋಡೆ; ಎಲ್​​ಜಿ ರಾಜೀನಾಮೆ ನೀಡಬೇಕೆಂದು ಕೇಜ್ರಿವಾಲ್ ಪಟ್ಟು

ಎರಡು ತಿಂಗಳ ಹಿಂದೆ ಬಜರಂಗಿ ಶಾಲೆಯ ಹಾಸ್ಟೆಲ್‌ಗೆ ಪ್ರವೇಶ ಪಡೆದಿದ್ದು, ಬೇಸಿಗೆ ರಜೆಗಾಗಿ ಮನೆಗೆ ಮರಳಿದ್ದರು. ಬಾಲಕನ ಸಾವಿನ ಸುದ್ದಿ ತಿಳಿದ ನಂತರ ಕುಟುಂಬ ಕಂಗಾಲಾಗಿದೆ. ಬಜರಂಗಿಯ ಅಪ್ಪ ಹರಿ ಕಿಶೋರ್ ರೈ ಐದು ದಿನಗಳ ಹಿಂದೆ ಪಂಜಾಬ್‌ಗೆ ಕೂಲಿ ಕೆಲಸಕ್ಕೆ ತೆರಳಿದ್ದರು.ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮೋತಿಹಾರಿಗೆ ಕಳುಹಿಸಲಾಗಿದ್ದು, ಶಾಲೆಗೆ ಮೊಹರು ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್