ನವದೆಹಲಿ: ಸುರಂಗದಲ್ಲಿ ಅಡ್ಡಗಟ್ಟಿ ಹಾಡಹಗಲೇ ದರೋಡೆ; ಎಲ್​​ಜಿ ರಾಜೀನಾಮೆ ನೀಡಬೇಕೆಂದು ಕೇಜ್ರಿವಾಲ್ ಪಟ್ಟು

ಎರಡು ದ್ವಿಚಕ್ರವಾಹನಗಳಲ್ಲಿ ಬಂದ ನಾಲ್ವರು ಭಾನುವಾರ ಮಧ್ಯಾಹ್ನ ಪ್ರಗತಿ ಮೈದಾನದ ಸುರಂಗದೊಳಗೆ ಟ್ಯಾಕ್ಸಿಗೆ ನುಗ್ಗಿ ಕ್ಯಾಬ್‌ನ ಪ್ರಯಾಣಿಕರಿಂದ ಸುಮಾರು ₹ 2 ಲಕ್ಷ ನಗದು ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ

ನವದೆಹಲಿ: ಸುರಂಗದಲ್ಲಿ ಅಡ್ಡಗಟ್ಟಿ ಹಾಡಹಗಲೇ ದರೋಡೆ; ಎಲ್​​ಜಿ ರಾಜೀನಾಮೆ ನೀಡಬೇಕೆಂದು ಕೇಜ್ರಿವಾಲ್ ಪಟ್ಟು
ದೆಹಲಿಯಲ್ಲಿ ಹಾಡಹಗಲೇ ದರೋಡೆ
Follow us
ರಶ್ಮಿ ಕಲ್ಲಕಟ್ಟ
|

Updated on:Jun 26, 2023 | 1:16 PM

ದೆಹಲಿ: ಪ್ರಗತಿ ಮೈದಾನದ ಸುರಂಗದೊಳಗೆ ಹಗಲು ಹೊತ್ತಿನಲ್ಲಿ ಇಬ್ಬರು ವ್ಯಕ್ತಿಗಳನ್ನು  ದರೋಡೆ ಮಾಡಿದ ಒಂದು ದಿನದ ನಂತರ, ರಾಷ್ಟ್ರ ರಾಜಧಾನಿಯಲ್ಲಿ ಅಪರಾಧದ ಹೆಚ್ಚಳಕ್ಕಾಗಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ (VK Saxena) ರಾಜೀನಾಮೆ ನೀಡಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಒತ್ತಾಯಿಸಿದ್ದಾರೆ. ದೆಹಲಿಯ (Delhi) ನಿವಾಸಿಗಳ ಸುರಕ್ಷತೆ ಮತ್ತು ಭದ್ರತೆಯನ್ನು ಖಾತ್ರಿಪಡಿಸುವ ವ್ಯಕ್ತಿಗಳಿಗೆ ಸಕ್ಸೇನಾ ದಾರಿ ಮಾಡಿಕೊಡಬೇಕು ಎಂದ ಕೇಜ್ರಿವಾಲ್, ಎಎಪಿ ನೇತೃತ್ವದ ಸರ್ಕಾರಕ್ಕೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಹಸ್ತಾಂತರಿಸುವಂತೆ ಕೇಂದ್ರ ಸರ್ಕಾರಕ್ಕೆ ಕರೆ ನೀಡಿದರು.

ಎಲ್‌ಜಿ ರಾಜೀನಾಮೆ ಕೊಡಲಿ. ದೆಹಲಿಯ ಜನರಿಗೆ ಸುರಕ್ಷತೆ ಮತ್ತು ಭದ್ರತೆಯನ್ನು ಒದಗಿಸುವ ಯಾರಿಗಾದರೂ ದಾರಿ ಮಾಡಿಕೊಡಿ. ದೆಹಲಿಯನ್ನು ಸುರಕ್ಷಿತವಾಗಿಡಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗದಿದ್ದರೆ ಅದನ್ನು ನಮಗೆ ಒಪ್ಪಿಸಿ. ನಗರವನ್ನು ಅದರ ನಾಗರಿಕರಿಗೆ ಹೇಗೆ ಸುರಕ್ಷಿತವಾಗಿಸುವುದು ನಾವು ನಿಮಗೆ ತೋರಿಸುತ್ತೇವೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ಎರಡು ದ್ವಿಚಕ್ರವಾಹನಗಳಲ್ಲಿ ಬಂದ ನಾಲ್ವರು ಭಾನುವಾರ ಮಧ್ಯಾಹ್ನ ಪ್ರಗತಿ ಮೈದಾನದ ಸುರಂಗದೊಳಗೆ ಟ್ಯಾಕ್ಸಿಗೆ ನುಗ್ಗಿ ಕ್ಯಾಬ್‌ನ ಪ್ರಯಾಣಿಕರಿಂದ ಸುಮಾರು ₹ 2 ಲಕ್ಷ ನಗದು ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತರು ತಕ್ಷಣ ಪೊಲೀಸರಿಗೆ ತಿಳಿಸಲಿಲ್ಲ. ಅವರು ಸಂಜೆಯ ನಂತರ ತಿಲಕ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಹೆಸರು ಹೇಳಲು ಬಯಸದ ಪೊಲೀಸ್ ಅಧಿಕಾರಿ ತಿಳಿಸಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಡೆಪ್ಯುಟಿ ಕಮಿಷನರ್ ಆಫ್ ಪೋಲೀಸ್ (ನವದೆಹಲಿ) ಪ್ರಣವ್ ತಯಾಲ್, ದೂರುದಾರನನ್ನು ಪಟೇಲ್ ಸಜನ್ ಕುಮಾರ್ ಎಂದು ಗುರುತಿಸಲಾಗಿದ್ದು, ಎಂದು ಲಿಖಿತ ದೂರನ್ನು ನೀಡಿದ್ದು, ಅದರಲ್ಲಿ ತಾನು ತನ್ನ ಸಹವರ್ತಿ ಜಿಗರ್ ಪಟೇಲ್ ಜೊತೆ ಸೇರಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ. ಗ್ರಾಹಕನಿಗೆ ನಗದು ತಲುಪಿಸಲು ಗುರುಗ್ರಾಮ್‌ಗೆ ಹೋಗುತ್ತಿದ್ದ.

ಚಾಂದಿನಿ ಚೌಕ್‌ನಲ್ಲಿರುವ ಖಾಸಗಿ ಸಂಸ್ಥೆಯೊಂದರಲ್ಲಿ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುತ್ತಿರುವ ಪಟೇಲ್ ಸಜನ್ ಕುಮಾರ್ ಎಂಬ ದೂರುದಾರರು ಲಿಖಿತ ದೂರು ನೀಡಿದ್ದಾರೆ ಎಂದು ಡೆಪ್ಯುಟಿ ಕಮಿಷನರ್ ಆಫ್ ಪೋಲೀಸ್ (ನವದೆಹಲಿ) ಪ್ರಣವ್ ತಯಾಲ್ ಹೇಳಿದ್ದಾರೆ. ಕುಮಾರ್ ಮತ್ತು ಅವರ ಸಹವರ್ತಿ ಜಿಗರ್ ಪಟೇಲ್ ಗ್ರಾಹಕರೊಬ್ಬರಿಗೆ ನಗದು ತಲುಪಿಸಲು ಗುರುಗ್ರಾಮಕ್ಕೆ ಹೋಗುತ್ತಿದ್ದಾಗ ದರೋಡೆ ನಡೆದಿದೆ.

ದೂರಿನ ಪ್ರಕಾರ, ಇಬ್ಬರು ಕೆಂಪು ಕೋಟೆಯ ಬಳಿ ಓಲಾ ಕ್ಯಾಬ್ ಅನ್ನು ಬಾಡಿಗೆಗೆ ಪಡೆದರು. ಅವರು ರಿಂಗ್ ರೋಡ್‌ನಿಂದ ಪ್ರಗತಿ ಮೈದಾನದ ಸುರಂಗವನ್ನು ಪ್ರವೇಶಿಸುತ್ತಿದ್ದಂತೆ, ಎರಡು ಮೋಟಾರ್‌ಸೈಕಲ್‌ಗಳಲ್ಲಿ ಬಂದ ನಾಲ್ವರು ಕ್ಯಾಬ್ ಅಡ್ಡಗಟ್ಟಿ, ಬಂದೂಕು ತೋರಿಸಿ ನಗದು ಚೀಲವನ್ನು ದೋಚಿದರು ಎಂದು ತಯಾಲ್ ಹೇಳಿದರು.

ಸುರಂಗದೊಳಗೆ ಅಳವಡಿಸಲಾದ ಸಿಸಿಟಿವಿಯಿಂದ ಪಡೆದ ವಿಡಿಯೊದಲ್ಲಿ ನಾಲ್ವರು ದರೋಡೆಕೋರರಲ್ಲಿ ಒಬ್ಬರು ಇಬ್ಬರು ಪ್ರಯಾಣಿಕರತ್ತ ಗನ್ ತೋರಿಸುತ್ತಿರುವುದು ತೋರಿಸುತ್ತದೆ. ಇನ್ನೊಬ್ಬ ದರೋಡೆಕೋರ ನಗದು ತುಂಬಿದ ಚೀಲವನ್ನು ಕಸಿದುಕೊಂಡಿದ್ದಾನೆ. ಇನ್ನಿಬ್ಬರು ದರೋಡೆಕೋರರು ಕ್ಯಾಬ್ ವೇಗವಾಗಿ ಓಡದಂತೆ ತಡೆದರು. ನಂತರ ದರೋಡೆಕೋರರು ಸುರಂಗದೊಳಗೆ ವೇಗವಾಗಿ ಓಡಿ ಪುರಾನಾ ಕಿಲಾ ಬಳಿ ಮಥುರಾ ರಸ್ತೆಯತ್ತ ಹೋಗಿ ತಪ್ಪಿಸಿಕೊಂಡರು.

ಇದನ್ನೂ ಓದಿ: ಕಾಂಗ್ರೆಸ್ ಪಕ್ಷವು ಸಂವಿಧಾನವನ್ನೇ ಬುಡಮೇಲು ಮಾಡುವ ಪಾಪ ಮಾಡಿತ್ತು: ಧಮೇಂದ್ರ ಪ್ರಧಾನ್

ನಾವು ಮಥುರಾ ರಸ್ತೆಯಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದೇವೆ, ಶಂಕಿತರು ದಕ್ಷಿಣ ದೆಹಲಿಯ ಕಡೆಗೆ ಪರಾರಿಯಾಗುತ್ತಿರುವುದನ್ನು ತೋರಿಸಿದೆ. ವಿತರಣಾ ಏಜೆಂಟ್‌ಗಳು ಹೊರಟುಹೋದ ಪ್ರದೇಶದ ಮೇಲೆ ಶಂಕಿತರು ಕಣ್ಣಿಟ್ಟಿರುವ ದೃಶ್ಯಗಳು ಕೂಡಾ ಸಿಕ್ಕಿದೆ ಪೊಲೀಸ್ ಅಧಿಕಾರಿ ಹೇಳಿದರು.ಶಂಕಿತರಿಗೆ ಸಂಬಂಧಿಸಿದಂತೆ ಕೆಲವು ಖಚಿತವಾದ ಸುಳಿವುಗಳಿವೆ. ಅವರನ್ನು ಶೀಘ್ರದಲ್ಲಿ ಗುರುತಿಸಿ ಬಂಧಿಸಲಾಗುವುದು ಎಂದು ಅಧಿಕಾರಿ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:14 pm, Mon, 26 June 23