ಜಗಳದ ವೇಳೆ ಮರ್ಮಾಂಗ ಹಿಸುಕಿದ ಕೃತ್ಯ ಕೊಲೆ ಯತ್ನವಲ್ಲ: ಆರೋಪಿಯ ಶಿಕ್ಷೆ ಕಡಿತಗೊಳಿಸಿದ ಹೈಕೋರ್ಟ್
ಜಗಳ ತೆಗೆದು ಮರ್ಮಾಂಗ ಹಿಸುಕಿದ್ದ ಪ್ರಕರಣವನ್ನು ಚಿಕ್ಕಮಗಳೂರಿನ ಸೆಷನ್ಸ್ ಕೋರ್ಟ್ ಕೊಲೆಯತ್ನವೆಂದು ತೀರ್ಪು ನೀಡಿತ್ತು. ಆದೇಶ ಪ್ರಶ್ನಿಸಿ ಆರೋಪಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್, ಪ್ರಕರಣವನ್ನು ಗಾಯದ ಕೇಸ್ ಎಂದು ಪರಿಗಣಿಸಿದೆ.
ಬೆಂಗಳೂರು: ಜಗಳದ ವೇಳೆ ಮರ್ಮಾಂಗ ಹಿಸುಕಿದ ಕೃತ್ಯ ಕೊಲೆ ಯತ್ನವಲ್ಲ ಎಂದು ಪರಿಗಣಿಸಿದ ಕರ್ನಾಟಕ ಹೈಕೋರ್ಟ್ (Karnataka High Court), ಚಿಕ್ಕಮಗಳೂರಿನ (Chikkamagaluru) ಸೆಷನ್ಸ್ ಕೋರ್ಟ್ ಆರೋಪಿಗೆ ವಿಧಿಸಿದ್ದ 7 ವರ್ಷಗಳ ಶಿಕ್ಷೆಯ ಪ್ರಮಾಣವನ್ನು 3 ವರ್ಷಕ್ಕೆ ಕಡಿತಗೊಳಿಸಿ ಆದೇಶಿಸಿದೆ. ಹೈಕೋರ್ಟ್ ಪ್ರಕರಣವನ್ನು ತೀವ್ರ ಗಾಯದ ಕೇಸ್ ಎಂದು ಪರಿಗಣಿಸಿ ಈ ತೀರ್ಪು ನೀಡಿದೆ.
ನರಸಿಂಹಸ್ವಾಮಿ ಉತ್ಸವದ ವೇಳೆ ಓಂಕಾರಪ್ಪ ಎಂಬವರು ನೃತ್ಯ ಮಾಡುತ್ತಿದ್ದ. ಈ ವೇಳೆ ಪರಮೇಶ್ವರಪ್ಪ ಸ್ಥಳಕ್ಕೆ ಆಗಮಿಸಿ ಜಗಳ ತೆಗೆದು ಮರ್ಮಾಂಗ ಹಿಸುಕಿದ್ದ. ಪ್ರಕರಣ ಸಂಬಂಧ ಓಂಕಾರಪ್ಪ ಅವರು ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ್ದ ಚಿಕ್ಕಮಗಳೂರಿನ ಸೆಷನ್ಸ್ ಕೋರ್ಟ್, ಕೊಲೆಯತ್ನವೆಂದು ತೀರ್ಪು ನೀಡಿ 7 ವರ್ಷ ಜೈಲು ಶಿಕ್ಷೆ ವಿಧಿಸಿತ್ತು.
ಇದನ್ನೂ ಓದಿ: ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದಾನೆಂದು ವಿವಾಹಿತೆ ಆರೋಪಿಸುವಂತಿಲ್ಲ; ಕರ್ನಾಟಕ ಹೈಕೋರ್ಟ್ ತೀರ್ಪು
ಚಿಕ್ಕಮಗಳೂರಿನ ಸೆಷನ್ಸ್ ಕೋರ್ಟ್ ಆದೇಶ ಪ್ರಶ್ನಿಸಿ ಪರಮೇಶ್ವರಪ್ಪ ಮೇಲ್ಮನವಿ ಸಲ್ಲಿಸಿದ್ದ. ಅದರಂತೆ ವಿಚಾರಣೆ ನಡೆಸಿದ ನ್ಯಾ. ಜೆ.ನಟರಾಜನ್ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ, ಪ್ರಕರಣವನ್ನು ಕೊಲೆ ಯತ್ನವಲ್ಲ, ಗಾಯಗೊಳಿಸಿದ ಕೃತ್ಯ ಎಂದು ಪರಿಗಣಿಸಿ 7 ವರ್ಷಗಳ ಶಿಕ್ಷೆಯನ್ನು 3 ವರ್ಷಕ್ಕೆ ಕಡಿತ ಮಾಡಿ ಆದೇಶಿಸಿದೆ.
ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ