ಬೆಂಗಳೂರು: ಕಳೆದ ನವೆಂಬರ್ನಲ್ಲಿ ಬೆಂಗಳೂರಿನ ಗಾಂಧಿನಗರದ ಮೊಬೈಲ್ ಶೋರೂಂನಲ್ಲಿ ಗಲಾಟೆಯೊಂದು ನಡೆದಿತ್ತು. ಈ ಗಲಾಟೆ ವೇಳೆ ಹೆಡ್ಫೋನ್ ಕದ್ದು ಪರಾರಿಯಾದ ವ್ಯಕ್ತಿಯನ್ನು ಬಂಧಿಸಿದಾಗ ಶಾಕಿಂಗ್ ವಿಚಾರವೊಂದು ಹೊರ ಬಿದ್ದಿದೆ.
ನವೆಂಬರ್ 25ರಂದು ಗಾಂಧಿನಗರದ ಮೊಬೈಲ್ ಶೋರೂಂಗೆ ತೌಫೀಕ್ ಪಾಷಾ ಅಲಿಯಾಸ್ ತೌಫೀಕ್ ಎಂಬಾತ ತೆರಳಿದ್ದ. ಅಲ್ಲಿ ಅಂಗಡಿಯವರ ಬಳಿ ಆತ ಹೆಡ್ಫೋನ್ ಕೇಳಿದ್ದಾನೆ. ಅವರು ಹೆಡ್ಫೋನ್ ಇಲ್ಲ ನಾಳೆ ಬನ್ನಿ ಎಂದಿದ್ದಕ್ಕೆ ಗಲಾಟೆ ಮಾಡಿದ್ದ. ಈ ವೇಳೆ ಅಂಗಡಿಯವನ ಮೇಲೆ ಹಲ್ಲೆ ನಡೆಸಿ ಬ್ಲೂಟೂತ್ ಹೆಡ್ಫೋನ್ ಕಸಿದು ಪರಾರಿಯಾಗಿದ್ದ.
ಈ ಪ್ರಕರಣದಲ್ಲಿ ತೌಫೀಕ್ ಬಂಧಿಸಿದ ವೇಳೆ ಆಘಾತಕಾರಿ ವಿಚಾರ ಒಂದು ಹೊರ ಬಿದ್ದಿದೆ. ಅದೇನೆಂದರೆ, ಈತ ಸರಗಳ್ಳತನ ಹಾಗ ಮನೆಗಳ್ಳತನ ಮಾಡಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಈವರೆಗೆ ಒಟ್ಟು 3 ಸರಗಳ್ಳತನ ಹಾಗೂ 2 ಕನ್ನ ಕಳವು ಕೇಸ್ನಲ್ಲಿ ಈತನ ಕೈವಾಡ ಇರುವ ವಿಚಾರ ಬೆಳಕಿಗೆ ಬಂದಿದೆ. ಬಂಧಿತನಿಂದ 13 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಉಪ್ಪಾರಪೇಟೆ ಠಾಣೆ ಪೊಲೀಸರಿಂದ ತನಿಖೆ ಮುಂದುವರಿದಿದೆ.
Published On - 4:51 pm, Sat, 2 January 21