Shocking News: ವಿಷದ ಇಂಜೆಕ್ಷನ್ ಚುಚ್ಚಿ 300 ನಾಯಿಗಳ ಕೊಲೆ; ಶವಗಳನ್ನು ಕೆರೆಗೆ ಸುರಿದ ಪಾಪಿಗಳು

| Updated By: ಸುಷ್ಮಾ ಚಕ್ರೆ

Updated on: Aug 02, 2021 | 9:36 PM

ಆಂಧ್ರಪ್ರದೇಶದಲ್ಲಿ ಪಂಚಾಯತ್ ಸಿಬ್ಬಂದಿಯ ಆದೇಶದ ಮೇರೆಗೆ ಜುಲೈ 24ರಂದು 300ಕ್ಕೂ ಹೆಚ್ಚು ನಾಯಿಗಳನ್ನು ಕೊಲ್ಲಲಾಗಿದ್ದು, ಬಳಿಕ ಆ ನಾಯಿಗಳ ಶವಗಳನ್ನು ಕೆರೆಗೆ ಎಸೆಯಲಾಗಿದೆ.

Shocking News: ವಿಷದ ಇಂಜೆಕ್ಷನ್ ಚುಚ್ಚಿ 300 ನಾಯಿಗಳ ಕೊಲೆ; ಶವಗಳನ್ನು ಕೆರೆಗೆ ಸುರಿದ ಪಾಪಿಗಳು
ಸಾಂದರ್ಭಿಕ ಚಿತ್ರ
Follow us on

ಹೈದರಾಬಾದ್: ನಿಯತ್ತಿಗೆ ಮತ್ತೊಂದು ಹೆಸರಾಗಿರುವ ನಾಯಿಯೆಂದರೆ ಯಾರಿಗೆ ತಾನೇ ಇಷ್ಟವಿಲ್ಲ? ಶ್ವಾನವನ್ನೂ ಮನೆಯ ಸದಸ್ಯರಂತೆಯೇ ನೋಡಿಕೊಳ್ಳುವ ಅದೆಷ್ಟೋ ಜನರಿದ್ದಾರೆ. ಒಮ್ಮೆ ಪ್ರೀತಿ ತೋರಿಸಿ, ಊಟ ಹಾಕಿದರೆ ನಾಯಿ ಎಂದಿಗೂ ಆತನನ್ನು ಮರೆಯುವುದಿಲ್ಲ. ಆದರೆ, ಆಂಧ್ರಪ್ರದೇಶದಲ್ಲಿ ನಾಯಿಗಳ ಮಾರಣಹೋಮ ನಡೆದಿರುವ ಆಘಾತಕಾರಿ ಘಟನೆ ನಡೆದಿದೆ. ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ಸಾಮೂಹಿಕವಾಗಿ ವಿಷವುಣಿಸಿ ಕೊಂದಿರುವ ಕೃತ್ಯ ಬೆಳಕಿಗೆ ಬಂದಿದೆ.

ಪಂಚಾಯತ್ ಸಿಬ್ಬಂದಿಯ ಆದೇಶದ ಮೇರೆಗೆ ಜುಲೈ 24ರಂದು 300ಕ್ಕೂ ಹೆಚ್ಚು ನಾಯಿಗಳನ್ನು ಕೊಲ್ಲಲಾಗಿದ್ದು, ಬಳಿಕ ಆ ನಾಯಿಗಳ ಶವಗಳನ್ನು ಕೆರೆಗೆ ಎಸೆಯಲಾಗಿದೆ. ಈ ಅಮಾನವೀಯ ಘಟನೆಗೆ ಸಾಮಾಜಿಕ ಜಾಲತಾಣಗಳಲ್ಲೀ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ರೀತಿಯ ಆದೇಶ ಹೊರಡಿಸಿದ ಪಂಚಾಯತ್ ಸದಸ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯವೂ ಕೇಳಿಬಂದಿದೆ.

ತಮ್ಮ ಏರಿಯಾದಲ್ಲಿ ಬೀದಿ ನಾಯಿಗಳು ಹೆಚ್ಚಾಗಿದ್ದರಿಂದ ಈ ಬಗ್ಗೆ ನಗರ ಪಂಚಾಯತ್​ಗೆ ಜನರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪಂಚಾಯತ್ ಸಿಬ್ಬಂದಿ 300ಕ್ಕೂ ಹೆಚ್ಚು ನಾಯಿಗಳು ತಿನ್ನುವ ಊಟದಲ್ಲಿ ವಿಷ ಬೆರೆಸಿ ಕೊಂದಿದ್ದಾರೆ. ಇನ್ನು ಕೆಲವಕ್ಕೆ ವಿಷದ ಇಂಜೆಕ್ಷನ್ ಚುಚ್ಚಲಾಗಿದೆ. ಬಳಿಕ, ಸಾವನ್ನಪ್ಪಿದ ನಾಯಿಗಳ ಶವಗಳನ್ನು ಕೆರೆಗೆ ಎಸೆದಿದ್ದಾರೆ. ಬೀದಿ ನಾಯಿಗಳ ಸಂತಾನಹರಣ ಮಾಡುವ ಬದಲು ಅವುಗಳನ್ನು ಕೊಲ್ಲಲಾಗಿದೆ ಎಂದು ಅಲ್ಲಿನ ಸಾಮಾಜಿಕ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.

ಕೆರೆಯಲ್ಲಿ ಹಾಕಿದ್ದ ನಾಯಿಗಳ ಶವಗಳು ನೀರಿನಲ್ಲಿ ಕೊಳೆತಿದ್ದು, ಸುತ್ತಲೂ ದುರ್ವಾಸನೆ ಹರಡಿದೆ. ಈ ಬಗ್ಗೆ ಪೊಲೀಸ್ ಠಾಣೆಗೆ ಸ್ಥಳೀಯರು ದೂರು ನೀಡಿದ್ದು, ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: Viral News: 2 ಲಕ್ಷ ರೂ.ಗೆ ಮಾರಾಟವಾಯ್ತು 90 ಪೈಸೆಯ ಚಮಚ! ಹರಾಜಿಗೆ ಹಾಕಿದ್ದ ಮಾಲೀಕನೇ ಶಾಕ್

Viral News | ಬರೋಬ್ಬರಿ 1 ಕೋಟಿಗೆ ಹರಾಜಾಯ್ತು ವಿಸ್ಕಿ ಬಾಟಲ್; ಇದರ ವಿಶೇಷತೆ ಕೇಳಿದರೆ ಕಿಕ್ ಏರುತ್ತೆ!

(Shocking News 300 Stray Dogs Killed With Poisonous Injections and Dumped in Pond in Andhra Pradesh)