ನೊಯ್ಡಾ: ನೊಯ್ಡಾದಲ್ಲಿ (Noida) ಕೆಲಸಕ್ಕೆ ಹೋಗುತ್ತಿದ್ದ ಮಹಿಳೆಯೊಬ್ಬರು ತಮಗಾದ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ. ಟ್ರಾಫಿಕ್ ಜಾಮ್‌ನಲ್ಲಿ (Traffic Jam) ಸಿಲುಕಿದ್ದ ಆಕೆಯ ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಆಕೆಯನ್ನು ಹೆದರಿಸಿದ್ದಾರೆ. ಟ್ರಾಫಿಕ್ ಜಾಮ್ ಆಗಿದ್ದಾಗ ಆಕೆಯ ಕಾರಿನ ಬಳಿ ಬಂದ ಇಬ್ಬರು ಪುರುಷರು ನಿಮ್ಮ ಕಾರಿನ ಹಿಂದಿನ ಚಕ್ರದ ಅಡಿಯಲ್ಲಿ ನಮ್ಮ ಮಗು ಸಿಕ್ಕಿಹಾಕಿಕೊಂಡಿದೆ. ಕಾರನ್ನು ಮುಂದೆ ಚಲಿಸಬೇಡಿ ಎಂದು ಹೇಳಿದ್ದಾರೆ. ಇದರಿಂದ ಆ ಮಹಿಳೆ ಗಾಬರಿಯಾಗಿದ್ದಾರೆ.
ನೊಯ್ಡಾದ ವಂಚಾ ಗಾರ್ಗ್ ಎಂಬ ಮಹಿಳೆ ಕಳೆದ ವಾರ ಪಾರ್ಥಲ ಚೌಕ್ ಬಳಿ ಬೆಳಿಗ್ಗೆ 10 ಗಂಟೆ ಸುಮಾರಿಗೆ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿದ್ದರು. ಆಗ ಇಬ್ಬರು ಪುರುಷರು ಆಕೆಯ ಕಾರಿನ ಎರಡು ಬದಿಗಳಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡರು. ಅವರಲ್ಲಿ ಒಬ್ಬರು ನೀವು ನಮ್ಮ ಮಗುವಿಗೆ ಡಿಕ್ಕಿ ಹೊಡೆದಿದ್ದೀರ. ನಮ್ಮ ಮಗು ನಿಮ್ಮ ಕಾರಿನ ಹಿಂದಿನ ಚಕ್ರದ ಅಡಿಯಲ್ಲಿ ಸಿಲುಕಿಕೊಂಡಿರುವುದರಿಂದ ಕಾರನ್ನು ಮುಂದೆ ಓಡಿಸದಂತೆ ಎಚ್ಚರಿಸಿದ್ದಾರೆ. ತಾನು ಮಗುವಿಗೆ ಡಿಕ್ಕಿ ಹೊಡೆದೆನಾ? ಎಂದು ಆ ಮಹಿಳೆ ಗಾಬರಿಯಾಗಿ ಕೆಳಗೆ ಇಳಿದು ಕಾರಿನಡಿ ನೋಡಲು ಪ್ರಯತ್ನಿಸಿದಾಗ ಇನ್ನೊಬ್ಬ ಬಂದು ಕಾರಿನ ಕಿಟಕಿಗೆ ಬಡಿಯಲು ಪ್ರಾರಂಭಿಸಿದ್ದಾನೆ. ಗಲಾಟೆ ಜೋರಾಗುತ್ತಿದ್ದಂತೆ ಆ ಮಹಿಳೆ ಕಾರಿನಲ್ಲೇ ಕುಳಿತಿದ್ದಾರೆ.
ಇದನ್ನೂ ಓದಿ: Viral Video: ಇವಿಎಂ ತಡವಾಗಿ ಬಂದಿದ್ದಕ್ಕೆ ಮತಯಂತ್ರಕ್ಕೆ ಬೆಂಕಿ ಹಚ್ಚಿದ ಮತದಾರ!
“ನಾನು ಯಾರಿಗೂ ಡಿಕ್ಕಿ ಹೊಡೆದಿಲ್ಲ ಎಂದು ನನಗೆ ಖಚಿತವಾಗಿ ಗೊತ್ತಿತ್ತು. ಇದನ್ನೇ ಅವರ ಬಳಿ ವಾದ ಮಾಡಿದೆ. ಆದರೆ ಅವನು ಒತ್ತಾಯಿಸುತ್ತಲೇ ಇದ್ದ. ನನ್ನ ಕಾರಿನ ಹಿಂದಿನ ಚಕ್ರದ ಕೆಳಗೆ ಒಂದು ಮಗು ಇರುವುದರಿಂದ ನಾನು ಕಾರನ್ನು ಮೂವ್ ಮಾಡಬಾರದು ಎಂದು ಅವನು ಹೇಳಿದ. ಇದರಿಂದ ನನಗೆ ಆಘಾತವಾಯಿತು. ನನ್ನ ಕಾರಿಗೆ ಸಿಕ್ಕಿ ಮಗುವಿಗೇನಾದರೂ ಆದರೆ ಎಂದು ನನಗೆ ಆತಂಕವಾಯಿತು” ಎಂದು ವಂಚಾ ಗಾರ್ಗ್ ಆ ದಿನ ನಡೆದ ಘಟನೆಯನ್ನು ವಿವರಿಸಿದ್ದಾರೆ.
ಇದನ್ನೂ ಓದಿ: Viral Video : ಅಪ್ಪ-ಅಮ್ಮನಿಗೆ ಒಂದು ಮಗು ಸಾಕು, ಆದರೆ ನನಗೆ ಒಬ್ಬ ತಮ್ಮ ಬೇಕಲ್ಲ, ನನ್ನ ಕಷ್ಟ ಯಾರಿಗೆ ಹೇಳೋದು?
“ಮಗು ನಿಜವಾಗಿಯೂ ನನ್ನ ಕಾರಿನ ಅಡಿಯಲ್ಲಿ ಸಿಲುಕಿದೆಯೇ ಎಂದು ನೋಡಲು ನಾನು ಕಾರಿನ ಕಿಟಕಿ ಗ್ಲಾಸ್ ಕೆಳಗೆ ಮಾಡಿದೆ. ಆಗ ಅಲ್ಲಿದ್ದ ವ್ಯಕ್ತಿಯೊಬ್ಬ ಕಾರಿನೊಳಗೆ ಕೈ ಹಾಕಿದ. ಆಗ ಆತನ ಕೈ ಸಿಕ್ಕಿಹಾಕಿಕೊಂಡಿತು. ತಕ್ಷಣ ಆ ಕೈಯನ್ನು ಹೊರಗೆ ತೆಗೆಯಲು ನಾನು ಕಿಟಕಿ ಇಳಿಸಿದೆ. ಈ ವೇಳೆ ನನ್ನ ಪಕ್ಕದ ಸೀಟಿನ ಮೇಲೆ ನಾನು ಇಟ್ಟಿದ್ದ ಗೋಲ್ಡನ್ ಐಫೋನ್ 14 ಪ್ರೊ ಮೊಬೈಲನ್ನು ಕದ್ದುಕೊಂಡು ಹೋಗಿದ್ದಾರೆ” ಎಂದು ಆ ಮಹಿಳೆ ಆರೋಪಿಸಿದ್ದಾರೆ.
ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ