ಬಾಳೆಹಣ್ಣಿನ ಆಮಿಷವೊಡ್ಡಿ 3 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಂದ ಯುವಕ
ಆಂಧ್ರಪ್ರದೇಶದಲ್ಲಿ ವ್ಯಕ್ತಿಯೊಬ್ಬ ಬಾಳೆಹಣ್ಣಿನ ಆಮಿಷವೊಡ್ಡಿ 3 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ, ಆತನನ್ನು ಕೊಲೆ ಮಾಡಿದ್ದಾನೆ. 3 ವರ್ಷದ ಬಾಲಕಿಗೆ ಬಾಳೆಹಣ್ಣು ಕೊಡುತ್ತೇನೆ ಎಂದು ಹೇಳಿ, ಆಕೆಯನ್ನು ಬಾಳೆ ತೋಟಕ್ಕೆ ಎಳೆದುಕೊಂಡು ಹೋಗಿ ಅತ್ಯಾಚಾರ ಮಾಡಿ, ಕೊಲೆ ಮಾಡಿದ್ದಾನೆ. ಆಕೆಯ ಸಂಬಂಧಿಕರು ಆಕೆಯ ಶವವನ್ನು ಮುಳ್ಳಿನ ಪೊಡೆಯಲ್ಲಿ ಬಿಟ್ಟು ಹೋಗಿರುವುದನ್ನು ಪತ್ತೆಹಚ್ಚಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ನಂತರ ಸ್ಥಳೀಯರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಅಮರಾವತಿ, ಮೇ 24: ಆಂಧ್ರಪ್ರದೇಶದ (Andhra Pradesh) ಕಡಪ ಜಿಲ್ಲೆಯ ಕಂಬಲದಿನ್ನೆ ಗ್ರಾಮದಲ್ಲಿ 3 ವರ್ಷದ ಬಾಲಕಿಯ ಮೇಲೆ ಕ್ರೂರವಾಗಿ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ಆ ಬಾಲಕಿಯ ಪೋಷಕರು ಸಂಬಂಧಿಕರ ಮದುವೆಗೆ ಹೋಗಿದ್ದಾಗ ಈ ಭೀಕರ ಅಪರಾಧ ನಡೆದಿದೆ. ಆರೋಪಿಯು ಬಾಲಕಿಗೆ ಬಾಳೆಹಣ್ಣಿನಿಂದ ಆಮಿಷವೊಡ್ಡಿ, ತೋಟಕ್ಕೆ ಕರೆದೊಯ್ದು ಈ ಹೇಯ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಗ್ರಾಮಸ್ಥರು ಬಾಲಕಿಯ ಶವವನ್ನು ಮುಳ್ಳಿನ ಪೊದೆಯಲ್ಲಿ ಬಿಟ್ಟು ಹೋಗಿರುವುದು ಗೊತ್ತಾದಾಗ ಈ ಘಟನೆ ಬೆಳಕಿಗೆ ಬಂದಿದೆ. ನಂತರ ಸ್ಥಳೀಯರು ಆರೋಪಿಯನ್ನು ಹಿಡಿದು ಮೈಲವರಂ ಪೊಲೀಸರಿಗೆ ಒಪ್ಪಿಸಿದ್ದಾರೆ.
ವರದಿಗಳ ಪ್ರಕಾರ, ಆ ಬಾಲಕಿಯ ಪೋಷಕರು ಆಕೆಯನ್ನು ಹಳ್ಳಿಯೊಂದರಲ್ಲಿ ಸಂಬಂಧಿಕರ ಮದುವೆಗೆ ಕರೆದುಕೊಂಡು ಹೋಗಿದ್ದರು. ಆಗ ಈ ಘಟನೆ ನಡೆದಿದೆ. ಬಾಲಕಿ ಹೊರಗೆ ಆಟವಾಡುತ್ತಿದ್ದಾಗ ಆರೋಪಿ ರಹಮತುಲ್ಲಾ ಬಾಳೆಹಣ್ಣಿನ ಆಮಿಷವೊಡ್ಡಿ ಆಕೆಯನ್ನು ತೋಟಕ್ಕೆ ಕರೆದೊಯ್ದು, ಅಲ್ಲಿ ಅತ್ಯಾಚಾರ ಮಾಡಿ ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಸಾವಿನ ಡಾಕ್ಟರ್! ಕೊಲೆ ಮಾಡಿ, ಶವಗಳನ್ನು ಮೊಸಳೆಗೆ ಹಾಕುತ್ತಿದ್ದ ಸೀರಿಯಲ್ ಕಿಲ್ಲರ್ ಬಂಧನ
ಆ ಬಾಲಕಿಯ ಪೋಷಕರು ಆಕೆಗಾಗಿ ಹುಡುಕಾಡಿದರು. ಆದರೆ ಆಕೆ ಸಿಗಲಿಲ್ಲ. ನಂತರ, ಆಕೆಯ ಶವ ಪೊದೆಯಲ್ಲಿ ಪತ್ತೆಯಾಗಿದೆ. ಪೊಲೀಸರು ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಹೆಚ್ಚಿನ ತನಿಖೆಗಾಗಿ ವಶಕ್ಕೆ ಪಡೆದಿದ್ದಾರೆ.
ಇದೇ ರೀತಿಯ ಮತ್ತೊಂದು ಪ್ರಕರಣದಲ್ಲಿ, ಮುಂಬೈನಲ್ಲಿ ಒಂದು ಪುಟ್ಟ ಮಗುವನ್ನು ಆಕೆಯ ತಾಯಿಯ ಪ್ರಿಯಕರ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾನೆ. ಆದರೆ ತಾಯಿ ಈ ಭಯಾನಕ ಕೃತ್ಯವನ್ನು ನೋಡುತ್ತಾ ನಿಂತಿದ್ದಳು. ಆಕೆ ಅದನ್ನು ತಡೆಯಲು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಆ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿರುವುದಾಗಿ ಘೋಷಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




