
ತೆಲಂಗಾಣ, ಆಗಸ್ಟ್ 7: ತೆಲಂಗಾಣದಲ್ಲಿ (Telangana) ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ಗಂಡನನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ ಆಘಾತಕಾರಿ ಘಟನೆ (Shocking News) ಬೆಳಕಿಗೆ ಬಂದಿದೆ. ಈ ಕೊಲೆಗೆ ಎಷ್ಟು ಚೆನ್ನಾಗಿ ಸಂಚು ರೂಪಿಸಲಾಗಿತ್ತೆಂದರೆ, ಅದನ್ನು ಕಾರ್ಯಗತಗೊಳಿಸಲು ಆ ಮಹಿಳೆ ಯೂಟ್ಯೂಬ್ ನಿಂದ ಸಲಹೆಗಳನ್ನು ಪಡೆದಿದ್ದಳು. ಯಾರಿಗೂ ಅನುಮಾನ ಬರಬಾರದು, ಗಂಡನ ದೇಹದಲ್ಲಿ ವಿಷದ ಅಂಶ ಸಿಗಬಾರದು ಎಂದು ಆಕೆ ಆತನ ಕಿವಿಗೆ ವಿಷ ಸುರಿದು ಕೊಲೆ ಮಾಡಿದ್ದಳು. ಮೃತನನ್ನು ಸಂಪತ್ ಎಂದು ಗುರುತಿಸಲಾಗಿದೆ.
ಸಂಪತ್ ಗ್ರಂಥಾಲಯದಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಂಪತ್ ಮದ್ಯಪಾನದ ವ್ಯಸನಿಯಾಗಿದ್ದ. ಯಾವಾಗಲೂ ಕುಡಿದು ಮನೆಗೆ ಬರುತ್ತಿದ್ದ ಆತ ಕುಡಿದ ಅಮಲಿನಲ್ಲಿ ತನ್ನ ಪತ್ನಿ ರಮಾದೇವಿಯೊಂದಿಗೆ ಜಗಳವಾಡುತ್ತಿದ್ದ. ಅವರಿಬ್ಬರಿಗೂ ಇಬ್ಬರು ಮಕ್ಕಳಿದ್ದಾರೆ. ತಿಂಡಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರಮಾದೇವಿ ಅದೇ ಹಣದಿಂದ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಳು. ಆಕೆ ಕೆಲಸ ಮಾಡುತ್ತಿದ್ದ ಅಂಗಡಿಯಲ್ಲೇ ರಮಾದೇವಿಗೆ 50 ವರ್ಷದ ಕರಣ್ ರಾಜಯ್ಯ ಎಂಬಾತನ ಭೇಟಿಯಾಗಿತ್ತು. ನಂತರ ಅವರಿಬ್ಬರ ನಡುವೆ ಅಕ್ರಮ ಸಂಬಂಧ ಬೆಳೆಯಿತು.
ಇದನ್ನೂ ಓದಿ: ಮಧ್ಯಪ್ರದೇಶ: ಯುವತಿ ಮದುವೆಯಾಗಬೇಕಿದ್ದ ಹುಡುಗನನ್ನು ಥಳಿಸಿ ಆಕೆಯ ಮೇಲೆ ನಾಲ್ವರಿಂದ ಸಾಮೂಹಿಕ ಅತ್ಯಾಚಾರ
ಪೊಲೀಸ್ ತನಿಖೆಯಲ್ಲಿ ರಮಾದೇವಿ ತನ್ನ ಗಂಡನನ್ನು ಕೊಲ್ಲಲು ಸಂಚು ಮಾಡಿದ್ದಾಳೆಂದು ತಿಳಿದುಬಂದಿದೆ. ಇದಕ್ಕಾಗಿ, ಅವಳು ಯೂಟ್ಯೂಬ್‌ನಲ್ಲಿ ಕಿವಿಗೆ ಕೀಟನಾಶಕ ಸುರಿದು ಕೊಲ್ಲುವ ವಿಧಾನವನ್ನು ವಿವರಿಸುವ ವೀಡಿಯೊವನ್ನು ನೋಡಿದ್ದಳು. ರಮಾದೇವಿ ತನ್ನ ಪ್ರಿಯಕರ ರಾಜಯ್ಯನಿಗೆ ಈ ಭಯಾನಕ ಪ್ಲಾನ್ ಬಗ್ಗೆ ಹೇಳಿದ್ದಳು. ಆತ ಆಕೆಗೆ ಕೀಟನಾಶಕ ತಂದುಕೊಟ್ಟಿದ್ದ. ಅವರಿಬ್ಬರೂ ಕೊಲೆಯನ್ನು ಪ್ಲಾನ್ ಮಾಡಿದ್ದರು.
ಇದನ್ನೂ ಓದಿ: ಅಡುಗೆ ಮಾಡೋ ಬಾಣಲೆಯಿಂದ ಹೊಡೆದು ಅಪ್ಪನನ್ನು ಕೊಂದ ಮಗಳು!
ಸಂಪತ್ ರಮಾದೇವಿಯ ಪ್ರಿಯಕರ ಮತ್ತು ಸ್ನೇಹಿತನಿಂದ ಕುಡಿದಿದ್ದ. ಸಂಪತ್ ತನ್ನ ಪ್ರಜ್ಞೆಯನ್ನು ಕಳೆದುಕೊಂಡು ಕುಡಿದು ನಿದ್ರಿಸಿದಾಗ, ರಮಾದೇವಿಯ ಪ್ರಿಯಕರ ರಾಜಯ್ಯ ಅವನ ಕಿವಿಗೆ ಕೀಟನಾಶಕ ಹಾಕಿದನು. ಇದರಿಂದ ಸಂಪತ್ ಸ್ಥಳದಲ್ಲೇ ಸಾವನ್ನಪ್ಪಿದನು. ಮರುದಿನ, ರಮಾದೇವಿ ತನ್ನ ಗಂಡನ ಬಗ್ಗೆ ಪೊಲೀಸ್ ಠಾಣೆಯಲ್ಲಿ ನಾಪತ್ತೆಯ ದೂರು ದಾಖಲಿಸಿದಳು. ಆಗಸ್ಟ್ 1ರಂದು ಸಂಪತ್ ಅವರ ಶವ ಪತ್ತೆಯಾಗಿದ್ದು, ರಮಾದೇವಿ ಮತ್ತು ರಾಜಯ್ಯ ಅವರ ಮರಣೋತ್ತರ ಪರೀಕ್ಷೆ ಮಾಡದಂತೆ ಕೇಳಿಕೊಂಡಿದ್ದರು. ಇದರಿಂದ ಪೊಲೀಸರಿಗೆ ಅನುಮಾನ ಬಂದಿತ್ತು. ಆದರೆ ರಮಾದೇವಿಯ ಮಗ ತನ್ನ ತಂದೆಯ ಸಾವನ್ನು ಅನುಮಾನಿಸಿ, ಪೊಲೀಸರಿಂದ ತನಿಖೆಗೆ ಒತ್ತಾಯಿಸಿದ್ದ. ಕೊನೆಗೆ ತನಿಖೆ ನಡೆಸಿದಾಗ ನಿಜಾಂಶ ಬಯಲಿಗೆ ಬಂದಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ