AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಡುಗೆ ಮಾಡೋ ಬಾಣಲೆಯಿಂದ ಹೊಡೆದು ಅಪ್ಪನನ್ನು ಕೊಂದ ಮಗಳು!

ದೆಹಲಿಯ ಶಹದಾರದಲ್ಲಿ 32 ವರ್ಷದ ಅವಿವಾಹಿತ ಮಗಳು ಅಡುಗೆ ಪ್ಯಾನ್‌ನಿಂದ ತಂದೆಯನ್ನು ಹೊಡೆದ ಕೊಂದ ಆರೋಪ ಕೇಳಿಬಂದಿದೆ. ಈ ಘಟನೆಯ ಸಮಯದಲ್ಲಿ ಮೃತ ವ್ಯಕ್ತಿಯ ಮಗಳು (32), ಹೆಂಡತಿ ಬಾಲಾ ದೇವಿ ಮತ್ತು ಸೊಸೆ ಪ್ರಿಯಾ (29) ಎಲ್ಲರೂ ಶಹದಾರದ ರಾಮನಗರದ ಬುಧ್ ಬಜಾರ್‌ನಲ್ಲಿರುವ ಮನೆಯಲ್ಲಿದ್ದರು. ಮೃತರ ಅವಿವಾಹಿತ ಮಗಳು ಅನು ತನ್ನ ಪೋಷಕರೊಂದಿಗೆ ವಾಸಿಸುತ್ತಿದ್ದಳು. ಆಕೆಯೇ ಈ ಕೊಲೆ ಮಾಡಿದ್ದಾಳೆ.

ಅಡುಗೆ ಮಾಡೋ ಬಾಣಲೆಯಿಂದ ಹೊಡೆದು ಅಪ್ಪನನ್ನು ಕೊಂದ ಮಗಳು!
Cooking Pan
ಸುಷ್ಮಾ ಚಕ್ರೆ
|

Updated on: Aug 06, 2025 | 10:37 PM

Share

ನವದೆಹಲಿ, ಆಗಸ್ಟ್ 6: ದೆಹಲಿಯಲ್ಲಿ ಆಘಾತಕಾರಿ ಘಟನೆಯೊಂದು (Shocking News) ನಡೆದಿದೆ. ಇಂದು (ಆಗಸ್ಟ್ 6) ಮಧ್ಯಾಹ್ನ 3.56ರ ಸುಮಾರಿಗೆ ಮಗಳೇ ಅಪ್ಪನನ್ನು ಕೊಲೆ ಮಾಡಿದ್ದಾಳೆ. ದೆಹಲಿಯ ಎಂಎಸ್ ಪಾರ್ಕ್‌ನಲ್ಲಿರುವ ಜಿಟಿಬಿ ಆಸ್ಪತ್ರೆಗೆ ಚಂದ್ ಗೋಯಲ್ ಎಂಬ 55 ವರ್ಷದ ವ್ಯಕ್ತಿಯನ್ನು ಅವರ ಮಗ ಶಿವಂ ಪ್ರಜ್ಞಾಹೀನ ಮತ್ತು ಗಾಯಗೊಂಡ ಸ್ಥಿತಿಯಲ್ಲಿ ದಾಖಲಿಸಿದ್ದರು. ಆದರೆ, ಅದಾದ ಕೆಲವೇ ನಿಮಿಷಗಳಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಈ ಘಟನೆಯ ಸಮಯದಲ್ಲಿ ಕುಟುಂಬ ಸದಸ್ಯರು ಹಾಜರಿದ್ದರು.

ಶಿವಂ ಹೇಳಿಕೆಯ ಪ್ರಕಾರ, ಈ ಘಟನೆಯ ಸಮಯದಲ್ಲಿ ಅವರ ಸಹೋದರಿ ಅನು (32 ವರ್ಷ), ಅವರ ತಾಯಿ ಬಾಲಾ ದೇವಿ ಮತ್ತು ಅವರ ಪತ್ನಿ ಪ್ರಿಯಾ (29 ವರ್ಷ) ಎಲ್ಲರೂ ಶಹದಾರಾದ ರಾಮನಗರದ ಬುಧ್ ಬಜಾರ್‌ನಲ್ಲಿರುವ ತಮ್ಮ ಮನೆಯಲ್ಲಿದ್ದರು. ಶಿವಂ ಅವರ ಅಪ್ಪನೇ ಸಾವನ್ನಪ್ಪಿದ ವ್ಯಕ್ತಿ. ಶಿವಂ ಅವರ ಅವಿವಾಹಿತ ತಂಗಿ ಅನು ತನ್ನ ಹೆತ್ತವರೊಂದಿಗೆ ವಾಸಿಸುತ್ತಿದ್ದಳು.

ಇದನ್ನೂ ಓದಿ: ರಸ್ತೆ ಬದಿ ನಿಲ್ಲಿಸಿದ್ದ ಕಾರಿನೊಳಗೆ ಇಬ್ಬರು ಪುರುಷರ ನಿಗೂಢ ಸಾವು

ಶಿವಂ ಅವರ ಪತ್ನಿ ಪ್ರಿಯಾ ಅವರ ಹೇಳಿಕೆಯ ಆಧಾರದ ಮೇಲೆ, ತಂದೆ ಟೇಕ್ ಚಂದ್ ಗೋಯಲ್ ಅವರ ಮೇಲೆ ಅವರ ಮಗಳು ಅನು ಅಡುಗೆ ಮಾಡುವ ಬಾಣಲೆಯಿಂದ ಹೊಡೆದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಹಲ್ಲೆಯಿಂದ ಚಂದ್ ಗೋಯಲ್ ಮಾರಣಾಂತಿಕ ಗಾಯಗಳಿಂದು ಕುಸಿದುಬಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಮೃತಪಟ್ಟಿದ್ದರು. ಅನು ತನ್ನ ತಂದೆಯನ್ನು ಕೊಲ್ಲಲು ಕಾರಣವೇನೆಂದು ತಿಳಿದುಬಂದಿಲ್ಲ.

ಆರೋಪಿ ಅನು ಅವರನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರಿದಂತೆ ಸೂಕ್ತ ಕಾನೂನು ಕ್ರಮಗಳನ್ನು ಪ್ರಾರಂಭಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
‘ಎಲ್ರ ಕಾಲೆಳಿತದೆ ಕಾಲ’ ಕನ್ನಡ ಸಿನಿಮಾ ಬಗ್ಗೆ ಅನುರಾಗ್ ಕಶ್ಯಪ್ ಮಾತು
‘ಎಲ್ರ ಕಾಲೆಳಿತದೆ ಕಾಲ’ ಕನ್ನಡ ಸಿನಿಮಾ ಬಗ್ಗೆ ಅನುರಾಗ್ ಕಶ್ಯಪ್ ಮಾತು
ಪತಿಗೆ ನಿದ್ದೆ ಮಾತ್ರೆ ನೀಡಿ ಪ್ರಿಯಕರನೊಂದಿಗೆ ವಿವಾಹಿತೆ ಎಸ್ಕೇಪ್​?
ಪತಿಗೆ ನಿದ್ದೆ ಮಾತ್ರೆ ನೀಡಿ ಪ್ರಿಯಕರನೊಂದಿಗೆ ವಿವಾಹಿತೆ ಎಸ್ಕೇಪ್​?
ಮಂಗಳೂರು: ಕಾಂಪೌಂಡ್ ಗೋಡೆ ಕುಸಿದು ಕಾರುಗಳು ನಜ್ಜುಗುಜ್ಜು!
ಮಂಗಳೂರು: ಕಾಂಪೌಂಡ್ ಗೋಡೆ ಕುಸಿದು ಕಾರುಗಳು ನಜ್ಜುಗುಜ್ಜು!
'ನನ್ನ ಹೆಂಡತಿ 1 ಲಕ್ಷ ರೂ., ಚಿನ್ನ ವಾಪಸ್ ಕೊಡಲಿ!' ಪತಿ ಆಕ್ರೋಶ
'ನನ್ನ ಹೆಂಡತಿ 1 ಲಕ್ಷ ರೂ., ಚಿನ್ನ ವಾಪಸ್ ಕೊಡಲಿ!' ಪತಿ ಆಕ್ರೋಶ
ಬುರ್ಖಾ ಹಾಕಿದ್ದ ಮಹಿಳೆಯನ್ನು ಎಳೆದೊಯ್ದು ಕೈ ಟ್ವಿಸ್ಟ್ ಮಾಡಿದ ವ್ಯಕ್ತಿ
ಬುರ್ಖಾ ಹಾಕಿದ್ದ ಮಹಿಳೆಯನ್ನು ಎಳೆದೊಯ್ದು ಕೈ ಟ್ವಿಸ್ಟ್ ಮಾಡಿದ ವ್ಯಕ್ತಿ
‘ತಂಗಿ ಎನ್ನುತ್ತಿದ್ದವನ ಜತೆಗೇ ಹೋಗಿ ಮದುವೆಯಾದ್ಳು!’ ಪತಿಯ ಅಳಲು
‘ತಂಗಿ ಎನ್ನುತ್ತಿದ್ದವನ ಜತೆಗೇ ಹೋಗಿ ಮದುವೆಯಾದ್ಳು!’ ಪತಿಯ ಅಳಲು
ಚನ್ನಕೇಶವನ ಪಾದ ಸೋಕಿದ ಸೂರ್ಯರಶ್ಮಿ!
ಚನ್ನಕೇಶವನ ಪಾದ ಸೋಕಿದ ಸೂರ್ಯರಶ್ಮಿ!
ಸೇಫ್ಟಿನೆಟ್ ದಾಟಿ ವೇದಿಕೆ ಎದುರಿದ್ದ ಪ್ರೇಕ್ಷಕರಿದ್ದಲ್ಲಿಗೆ ಹಾರಿದ ಹುಲಿ
ಸೇಫ್ಟಿನೆಟ್ ದಾಟಿ ವೇದಿಕೆ ಎದುರಿದ್ದ ಪ್ರೇಕ್ಷಕರಿದ್ದಲ್ಲಿಗೆ ಹಾರಿದ ಹುಲಿ
ಅಭಿಷೇಕ್ ಶರ್ಮಾ ಶತಕ ಸಿಡಿಸಿದಾಗ ತಂದೆಯ ಸೆಲೆಬ್ರೇಷನ್ ಹೇಗಿತ್ತು ನೋಡಿ
ಅಭಿಷೇಕ್ ಶರ್ಮಾ ಶತಕ ಸಿಡಿಸಿದಾಗ ತಂದೆಯ ಸೆಲೆಬ್ರೇಷನ್ ಹೇಗಿತ್ತು ನೋಡಿ
ಮಕ್ಕಳಿಗೆ ಬಾಲಗ್ರಹ ಮಂತ್ರಗಳನ್ನ ಹೇಳುವುದರ ಹಿಂದಿನ ರಹಸ್ಯವೇನು ಗೊತ್ತಾ?
ಮಕ್ಕಳಿಗೆ ಬಾಲಗ್ರಹ ಮಂತ್ರಗಳನ್ನ ಹೇಳುವುದರ ಹಿಂದಿನ ರಹಸ್ಯವೇನು ಗೊತ್ತಾ?