AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಬೆಂಗಳೂರು ಬಾಲಕನ ಕಿಡ್ನ್ಯಾಪ್-ಕೊಲೆ ಕೇಸ್​: ಕೊನೆಗೂ ರಿವೀಲ್​ ಆಯ್ತು ಹತ್ಯೆ ರಹಸ್ಯ!

ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಾಲಕನ ಕಿಡ್ನ್ಯಾಪ್ ಮತ್ತು ಭೀಕರ ಕೊಲೆ ಪ್ರಕರಣ ಕರ್ನಾಟಕವನ್ನೇ ಬೆಚ್ಚಿ ಬೀಳಿಸಿತ್ತು. ಬಾಲಕನ ಬರ್ಬರವಾಗಿ ಕೊಂದ ಆರೋಪಿಗಳ ಮೇಲೆ ಖಾಕಿ ಫೈರಿಂಗ್ ಮಾಡಿ ಬಂಧಿಸಿದ್ದರು. ಇದೀಗ ಪೊಲೀಸ್ ವಿಚಾರಣೆಯಲ್ಲಿ ಕಿಡ್ನ್ಯಾಪ್ ಮತ್ತು ಕೊಲೆಯ ಕಾರಣ ರಿವೀಲ್​ ಆಗಿದೆ.

ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಬೆಂಗಳೂರು ಬಾಲಕನ ಕಿಡ್ನ್ಯಾಪ್-ಕೊಲೆ ಕೇಸ್​: ಕೊನೆಗೂ ರಿವೀಲ್​ ಆಯ್ತು ಹತ್ಯೆ ರಹಸ್ಯ!
ಬಾಲಕ ನಿಶ್ಚಿತ್
ರಾಚಪ್ಪಾಜಿ ನಾಯ್ಕ್
| Updated By: ಗಂಗಾಧರ​ ಬ. ಸಾಬೋಜಿ|

Updated on: Aug 06, 2025 | 11:24 AM

Share

ಬೆಂಗಳೂರು, ಆಗಸ್ಟ್​ 06: ನಿಶ್ಚಿತ್ ಎಂಬ ಬಾಲಕನ ಅಪಹರಿಸಿ (kidnapped) ಬನ್ನೇರುಘಟ್ಟ ಸಮೀಪ ಕೊಲೆ (kill) ಮಾಡಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಪ್ರಕರಣದಲ್ಲಿ ಈಗಾಗಲೇ ಇಬ್ಬರ ಬಂಧನವಾಗಿದೆ. ಇದೀಗ ಬಾಲಕನ‌‌ ಕಿಡ್ನ್ಯಾಪ್ ಮತ್ತು ಕೊಲೆಯ ಕಾರಣ ರಿವೀಲ್​ ಆಗಿದೆ. ಪೊಲೀಸರ ತನಿಖೆ ವೇಳೆ ಆರೋಪಿ ಗುರುಮೂರ್ತಿಯ ಸೈಕೋ ಮನಸ್ಥಿತಿ ಗೊತ್ತಾಗಿದೆ. ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಹಾಗೆ ಬಿಟ್ಟರೆ ಮನೆಯವರಿಗೆ ವಿಷಯ ತಿಳಿಸುತ್ತಾನೆಂದು ಕೊಲೆ ಮಾಡಲಾಗಿದೆ.

ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ

ಸೈಕೋ ಮನಸ್ಥಿತಿಯ ಆರೋಪಿ ಗುರುಮೂರ್ತಿ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಬಾಲಕ ವಿರೋಧ ವ್ಯಕ್ತಪಡಿಸಿದಕ್ಕೆ ಗಂಟಲಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ ಮೃತದೇಹ ಸುಟ್ಟು ಹಾಕಿದ್ದ. ಬಳಿಕ ಕೊಲೆ ವಿಷಯ ಮರೆಮಾಚಲು ಕಿಡ್ನಾಪ್ ಕಥೆ ಕಟ್ಟಿದ್ದು, ಬಾಲಕನ ಮನೆಯವರಿಗೆ ಕರೆ ಮಾಡಿ 5 ಲಕ್ಷ ರೂ. ಗೆ ಡಿಮ್ಯಾಂಡ್​ ಮಾಡಿದ್ದ.

ಇದನ್ನೂ ಓದಿ: ಬೆಂಗಳೂರು: ಬಾಲಕ ನಿಶ್ಚಿತ್ ಅಪಹರಿಸಿ ಹತ್ಯೆ ಮಾಡಿದ ದುಷ್ಕರ್ಮಿಗಳ ಕಾಲಿಗೆ ಗುಂಡೇಟು, ಇಬ್ಬರ ಬಂಧನ

ಇದನ್ನೂ ಓದಿ
Image
ಯುವಕನ ಭೀಕರ ಕೊಲೆಗೆ ಬೆಚ್ಚಿಬಿದ್ದ ಜನ: ಮುಳುವಾಯ್ತು ಪ್ರೀತಿ!
Image
ಬಾಲಕಿಯ ಫೋಟೋ ಸ್ಟೇಟಸ್​ ಇಟ್ಟಿದ್ದಕ್ಕೆ ವಿದ್ಯಾರ್ಥಿ ಮೇಲೆ ಹಲ್ಲೆ
Image
ಬಾಲಕನ ಅಪಹರಿಸಿ ಹತ್ಯೆ ಮಾಡಿದ ದುಷ್ಕರ್ಮಿಗಳ ಕಾಲಿಗೆ ಗುಂಡೇಟು, ಇಬ್ಬರ ಬಂಧನ
Image
ಬಾಲಕನ ಕಿಡ್ನಾಪ್: ಪೊಲೀಸರಿಗೆ ಹೇಳಿದ್ದಕ್ಕೆ ಕೊಂದ ದುಷ್ಕರ್ಮಿಗಳು!

ಇನ್ನು ಈತ 13 ವರ್ಷದ ಬಾಲಕಿಯನ್ನು ಬಿಟ್ಟಿರಲಿಲ್ಲ. ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ  ಅಪ್ಲೋಡ್ ಮಾಡಿದ್ದ. 2020 ರಲ್ಲಿಯೂ ಆರೋಪಿ ಮೇಲೆ ಪೋಕ್ಸೊ ಕೇಸ್ ದಾಖಲಾಗಿತ್ತು. ಕೋಣನಕುಂಟೆ ಪೊಲೀಸರಿಂದ ಬಂಧನಕ್ಕೆ ಒಳಗಾಗಿ, ಬಳಿಕ ಬೇಲ್ ಮೇಲೆ ಹೊರಬಂದಿದ್ದ.

ಈಗ ನಿಶ್ಚಿತ್​ ಮೇಲೆ ಕೂಡ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿದ್ದ. ಇತ್ತೀಚೆಗೆ ಹುಳಿಮಾವು ಪೊಲೀಸರು ಆರೋಪಿಗಳಾದ ಗುರುಮೂರ್ತಿ ಮತ್ತು ವೇಣುಗೋಪಾಲ್​ಗೆ ಗುಂಡು ಹಾರಿಸಿ ಬಂಧಿಸಿದ್ದರು. ಸದ್ಯ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ಹಿನ್ನಲೆ

ಬೆಂಗಳೂರಿನ ಅರಕೆರೆ ವೈಶ್ಯ ಬ್ಯಾಂಕ್ ಕಾಲೋನಿ ನಿವಾಸಿಯಾಗಿದ್ದ ಅಚ್ಯುತ್ ರೆಡ್ಡಿ ಮತ್ತು ಸವಿತಾ ಅವರ ಒಬ್ಬನೇ ಮಗ ಈ ನಿಶ್ಚಿತ್. ಅಚ್ಯುತ್ ರೆಡ್ಡಿ ಕಾಲೇಜೊಂದರಲ್ಲಿ ಪ್ರಾಧ್ಯಪಕಾರಾಗಿದರೆ, ತಾಯಿ ಸವಿತಾ ಸಾಫ್ಟವೇರ್ ಎಂಜಿನಿಯರ್. ಮಗನ ಭವಿಷ್ಯದ ಬಗ್ಗೆ ಸಾಕಷ್ಟು ಕನಸು ಕಂಡಿದ್ದ ಪೋಷಕರಿಗೆ ಬರ ಸಿಡಿಲೇ ಬಂದೆರಗಿದಂತಗಾಗಿತ್ತು. ನಿಶ್ಚಿತ್​ನನ್ನ ಬನ್ನೇರುಘಟ್ಟದ ಕಗ್ಗಲೀಪುರ ರಸ್ತೆಯ ನಿರ್ಜನ ಪ್ರದೇಶವೊಂದರಲ್ಲಿ ಬರ್ಬರವಾಗಿ ಹತ್ಯೆಗೈಯಲಾಗಿತ್ತು.

ಇದನ್ನೂ ಓದಿ: ಬೆಂಗಳೂರು: ಬಾಲಕ ನಿಶ್ಚಿತ್ ಅಪಹರಿಸಿ ಹತ್ಯೆ ಮಾಡಿದ ದುಷ್ಕರ್ಮಿಗಳ ಕಾಲಿಗೆ ಗುಂಡೇಟು, ಇಬ್ಬರ ಬಂಧನ

ನಿಶ್ಚಿತ್​ನನ್ನ ಕೊಂದಿದ್ದು ಬೇರಾರೂ ಅಚ್ಯುತ್ ರೆಡ್ಡಿ ಮನೆಯಲ್ಲಿ ಸ್ಪೇರ್​ ಡ್ರೈವರ್​ ಆಗಿ ಕೆಲಸ ಮಾಡಿಕೊಂಡಿದ್ದ ಗುರುಮೂರ್ತಿ ಮತ್ತು ಅವನ ಸ್ನೇಹಿತ ಗೋಪಾಲಕೃಷ್ಣ. ಸ್ಪೇರ್​ ಡ್ರೈವರ್ ಆಗಿದ್ರಿಂದ ಅಚ್ಯುತ್ ರೆಡ್ಡಿ ನಿವಾಸಕ್ಕೆ ಆಗಾಗ ಬಂದು ಹೋಗ್ತಿದ್ದ ಗುರುಮೂರ್ತಿ. ಹೀಗಾಗಿ ಬಾಲಕ ನಿಶ್ಚಿತ್​ಗೆ ಗುರುಮೂರ್ತಿ ಪರಿಚಯ ಇತ್ತು. ಬುಧವಾರ ಸಂಜೆ ಟ್ಯೂಶನ್​ಗೆ ಹೋಗಿದ್ದ ನಿಶ್ಚಿತ್​ನನ್ನ ಪಾನಿಪುರಿ ಕೊಡಿಸೋದಾಗಿ ಹೇಳಿ ಕರೆದೊಯ್ದಿದ್ದಾನೆ. ಕಗ್ಗಲೀಪುರ ರಸ್ತೆಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೊಲೆ ಮಾಡಲಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ