Shocking Video: ಆರ್ಥಿಕ ಸಂಕಷ್ಟದಿಂದ ಫೇಸ್​ಬುಕ್ ಲೈವ್​ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ ದಂಪತಿ; ಹೆಂಡತಿ ಸಾವು

Crime News: ವೈರಲ್ ಆಗಿರುವ ವಿಡಿಯೋದಲ್ಲಿ ಕಣ್ಣೀರು ಹಾಕುತ್ತಾ ರಾಜೀವ್ ತೋಮರ್ ತಮ್ಮ ಸಂಕಟವನ್ನು ಹಂಚಿಕೊಂಡಿದ್ದಾರೆ. ಫೇಸ್​ಬುಕ್ ಲೈವ್​ನಲ್ಲಿ ಮಾತ್ರೆಗಳನ್ನು ಸೇವಿಸಿದ್ದಾರೆ. ಅವರ ಹೆಂಡತಿಯೂ ಈ ವೇಳೆ ಮಾತ್ರೆ ನುಂಗಿದ್ದಾರೆ.

Shocking Video: ಆರ್ಥಿಕ ಸಂಕಷ್ಟದಿಂದ ಫೇಸ್​ಬುಕ್ ಲೈವ್​ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ ದಂಪತಿ; ಹೆಂಡತಿ ಸಾವು
ಸಾಂದರ್ಭಿಕ ಚಿತ್ರ
Updated By: ಸುಷ್ಮಾ ಚಕ್ರೆ

Updated on: Feb 09, 2022 | 6:47 PM

ನವದೆಹಲಿ: ಉತ್ತರ ಪ್ರದೇಶದ (Uttar Pradesh) ವ್ಯಾಪಾರಿಯೊಬ್ಬರು ತಮ್ಮ ಹೆಂಡತಿಯೊಂದಿಗೆ ಫೇಸ್‌ಬುಕ್‌ ಲೈವ್‌ನಲ್ಲೇ (Facebook Live) ವಿಷ ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ಶೂ ವ್ಯಾಪಾರಿಯಾಗಿರುವ ರಾಜೀವ್ ತೋಮರ್ ಆರ್ಥಿಕ ಸಂಕಷ್ಟದಿಂದ ತನ್ನ ಪತ್ನಿ ಪೂನಂ ತೋಮರ್ ಜೊತೆಗೆ ವಿಷ ಕುಡಿದು ಆತ್ಮಹತ್ಯೆ (Suicide) ಮಾಡಿಕೊಳ್ಳಲು ಯತ್ನಿಸಿರುವ ಫೇಸ್‌ಬುಕ್ ಲೈವ್ ವಿಡಿಯೋ ಇದೀಗ ವೈರಲ್ ಆಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಕಣ್ಣೀರು ಹಾಕುತ್ತಾ ರಾಜೀವ್ ತೋಮರ್ ತಮ್ಮ ಸಂಕಟವನ್ನು ಹಂಚಿಕೊಂಡಿದ್ದಾರೆ. ಫೇಸ್​ಬುಕ್ ಲೈವ್​ನಲ್ಲಿ ಮಾತ್ರೆಗಳನ್ನು ಸೇವಿಸಿದ್ದಾರೆ. ಅವರ ಹೆಂಡತಿಯೂ ಈ ವೇಳೆ ಮಾತ್ರೆ ನುಂಗಿದ್ದಾರೆ. ಈ ಫೇಸ್‌ಬುಕ್ ಲೈವ್ ವಿಡಿಯೋ ಬಗ್ಗೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಲಾಯಿತು. ‘ಟೈಮ್ಸ್ ಆಫ್ ಇಂಡಿಯಾ’ದ ವರದಿ ಪ್ರಕಾರ, ರಾಜೀವ್ ತೋಮರ್ ಅವರ ಪತ್ನಿ ಪೂನಂ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಸಾವನ್ನಪ್ಪಿದ್ದಾರೆ.

‘ನಾನು ಮಾಡಿರುವ ಸಾಲವನ್ನು ಹೇಗಾದರೂ ಮಾಡಿ ತೀರಿಸುತ್ತೇನೆ. ನಾನು ಸತ್ತರೂ ನನ್ನ ಸಾಲವನ್ನು ತೀರಿಸುತ್ತೇನೆ. ಆದರೆ, ಈ ವೀಡಿಯೋವನ್ನು ಆದಷ್ಟು ಶೇರ್ ಮಾಡಿ ಎಂದು ಎಲ್ಲರಿಗೂ ಮನವಿ ಮಾಡುತ್ತೇನೆ. ನಾನು ದೇಶವಿರೋಧಿಯಲ್ಲ. ನಿಮಗೆ ಸಣ್ಣ ವ್ಯಾಪಾರಿಗಳು ಮತ್ತು ರೈತರ ಬಗ್ಗೆ ಕಾಳಜಿಯಿಲ್ಲ. ನಿಮ್ಮ ನೀತಿಗಳನ್ನು ಬದಲಿಸಿಕೊಳ್ಳಿ ಎಂದು ನಾನು ಪ್ರಧಾನಮಂತ್ರಿ ನರೇಂದ್ರ ಮೋದಿಜಿಗೆ ಹೇಳಲು ಬಯಸುತ್ತೇನೆ’ ಎಂದು ತೋಮರ್ ಆರೋಪಿಸಿದ್ದಾರೆ.

ರಾಜೀವ್ ತೋಮರ್ ಅವರು ವ್ಯಾಪಾರ ವ್ಯವಹಾರದಲ್ಲಿ ಅನುಭವಿಸಿದ ಭಾರೀ ನಷ್ಟಕ್ಕೆ ಜಿಎಸ್ಟಿ (ಸರಕು ಮತ್ತು ಸೇವಾ ತೆರಿಗೆ)ಯೇ ಕಾರಣ ಎಂದು ದೂಷಿಸಿದ್ದಾರೆ. ರಾಜೀವ್ ತೋಮರ್ ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಬಾಗ್‌ಪತ್‌ನ ಸುಭಾಷ್ ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Crime News: ಬೆಂಕಿ ಹೊತ್ತಿಕೊಂಡು ಅರೆ ಸುಟ್ಟ ಸ್ಥಿತಿಯಲ್ಲೇ ರಸ್ತೆಯಲ್ಲಿ ಓಡಿದ ದಂಪತಿ

Shocking News: ಮೊದಲ ರಾತ್ರಿಯಲ್ಲೇ ಹೆಂಡತಿ ಗರ್ಭಿಣಿ ಎಂದು ಗೊತ್ತಾಗಿ ಗಂಡ ಶಾಕ್!