Crime News: ಬೆಂಕಿ ಹೊತ್ತಿಕೊಂಡು ಅರೆ ಸುಟ್ಟ ಸ್ಥಿತಿಯಲ್ಲೇ ರಸ್ತೆಯಲ್ಲಿ ಓಡಿದ ದಂಪತಿ

Shocking News: ದಂಪತಿಗೆ ಬೆಂಕಿ ಹೇಗೆ ಹೊತ್ತಿಕೊಂಡಿತು? ಇದು ಆಕಸ್ಮಿಕವೇ ಅಥವಾ ಆತ್ಮಹತ್ಯೆಯ ಪ್ರಯತ್ನವೇ? ಎಂಬಿತ್ಯಾದಿ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಈ ಕುರಿತು ತನಿಖೆ ನಡೆಸಲಾಗುತ್ತಿದೆ.

Crime News: ಬೆಂಕಿ ಹೊತ್ತಿಕೊಂಡು ಅರೆ ಸುಟ್ಟ ಸ್ಥಿತಿಯಲ್ಲೇ ರಸ್ತೆಯಲ್ಲಿ ಓಡಿದ ದಂಪತಿ
ಸಾಂಕೇತಿಕ ಚಿತ್ರ
Follow us
| Updated By: ಸುಷ್ಮಾ ಚಕ್ರೆ

Updated on: Jan 14, 2022 | 3:51 PM

ಕೊಲ್ಕತ್ತಾ: ಮೈಗೆ ಬೆಂಕಿ ಹೊತ್ತಿಕೊಂಡಿದ್ದರೂ ಗಂಡ-ಹೆಂಡತಿ ರಸ್ತೆಯ ತುಂಬ ಓಡಾಡಿ, ಚೀರಾಡುತ್ತಾ ಆತಂಕ ಸೃಷ್ಟಿಸಿರುವ ಆಘಾತಕಾರಿ ಘಟನೆ ಕೊಲ್ಕತ್ತಾದಲ್ಲಿ (Kolkata) ನಡೆದಿದೆ. ನ್ಯೂಟೌನ್‌ನ ಘುನಿ ಪ್ರದೇಶದ ಸ್ಥಳೀಯರ ಪ್ರಕಾರ, ಅರೆ ಸುಟ್ಟ ಸ್ಥಿತಿಯಲ್ಲಿದ್ದ ದಂಪತಿಗಳು ತಮ್ಮ ಅಪಾರ್ಟ್‌ಮೆಂಟ್‌ನಿಂದ ಬೀದಿಗೆ ಓಡಿ ಬಂದಿದ್ದಾರೆ. ಗಾಳಿಗೆ ಬೆಂಕಿ (Fire Attack) ಇನ್ನೂ ಹೆಚ್ಚಾಗಿ ಉರಿಯುತ್ತಿದ್ದಂತೆ ಜೋರಾಗಿ ಕಿರುಚಲು ಪ್ರಾರಂಭಿಸಿದ್ದಾರೆ. ಬೆಂಕಿ ಹೊತ್ತಿಕೊಂಡಿದ್ದರಿಂದ ರಸ್ತೆಯಲ್ಲಿ ಕಿರುಚಾಡುತ್ತಿದ್ದ ಆ ಇಬ್ಬರು ವ್ಯಕ್ತಿಗಳನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಈ ಭೀಕರ ಘಟನೆ (Shocking Incident) ನಡೆದಿದೆ ಎಂದು ವರದಿಯಾಗಿದೆ.

ಬೆಂಕಿ ಹೊತ್ತಿಕೊಂಡಿದ್ದ ಆ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಆರ್‌ಜಿ ಕರ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ಗಂಡ-ಹೆಂಡತಿ ಕಳೆದ ನಾಲ್ಕು ವರ್ಷಗಳಿಂದ ಅಪಾರ್ಟ್​ಮೆಂಟ್​ನ ಕಟ್ಟಡದಲ್ಲಿ ವಾಸಿಸುತ್ತಿದ್ದರು. ಅಗ್ನಿ ದುರಂತದಲ್ಲಿ ಪತಿ ಗೋಲಂ ಮೊರ್ತಾಜಾ ಮತ್ತು ಪತ್ನಿ ಶಕೀಲಾ ಸುಲ್ತಾನಾ ಇಬ್ಬರಿಗೂ ಬೆಂಕಿ ಸಂಪೂರ್ಣವಾಗಿ ಆವರಿಸಿಕೊಂಡಿದೆ. ಆದರೆ, ಇಬ್ಬರಿಗೂ ಬೆಂಕಿ ಹೇಗೆ ಹೊತ್ತಿಕೊಂಡಿತು? ಇದು ಆಕಸ್ಮಿಕವೇ ಅಥವಾ ಆತ್ಮಹತ್ಯೆಯ ಪ್ರಯತ್ನವೇ? ಎಂಬಿತ್ಯಾದಿ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ.

ಮೂಲಗಳ ಪ್ರಕಾರ, ಶಕೀಲಾ ಸುಲ್ತಾನಾ ಅಡುಗೆ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಆಕಸ್ಮಿಕವಾಗಿ ಆಕೆಗೆ ಬೆಂಕಿ ಹೊತ್ತಿಕೊಂಡಿದ್ದು, ಬೆಂಕಿ ಹೊತ್ತಿಕೊಂಡಿದೆ. ಆಕೆಯ ಗಂಡ ಆಕೆಯನ್ನು ರಕ್ಷಿಸಲು ಹೋದಾಗ, ಆತನಿಗೆ ಕೂಡ ಬೆಂಕಿ ಆವರಿಸಿದೆ ಎನ್ನಲಾಗಿದೆ. ಹೀಗಾಗಿ, ತಮ್ಮ ಪ್ರಾಣ ಉಳಿಸಿಕೊಳ್ಳಲು ಅವರಿಬ್ಬರೂ ಕಟ್ಟಡದಿಂದ ಹೊರ ಬಂದಿದ್ದು, ಯಾರಾದರೂ ಬೆಂಕಿ ನಂದಿಸಲಿ ಎಂದು ಕಿರುಚಾಡಿದ್ದಾರೆ.

ಆದರೆ, ಆ ದಿನ ನಡೆದಿದ್ದು ಏನೆಂಬ ಬಗ್ಗೆ ಶಕೀಲಾ ಮತ್ತು ಆಕೆಯ ಗಂಡನಿಗೆ ಪ್ರಜ್ಞೆ ಬಂದ ನಂತರ ಗೊತ್ತಾಗಲಿದೆ. ಅವರಿಬ್ಬರೂ ಬೆಂಕಿ ಹೊತ್ತಿಕೊಂಡು ಹೊರಬಂದಾಗ ಸ್ಥಳೀಯರು ಅವರನ್ನು ಕಂಡು ಬೆಚ್ಚಿಬಿದ್ದರು. ಸ್ಥಳೀಯರು ಮತ್ತು ನೆರೆಹೊರೆಯವರು ತಕ್ಷಣ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು ಮತ್ತು ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು.

ಈ ಘಟನೆಯ ನಂತರ, ದುರಂತದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಇಕೋ ಪಾರ್ಕ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದು ಅಪಘಾತವೋ, ಕೊಲೆಯೋ, ಆತ್ಮಹತ್ಯೆ ಯತ್ನವೋ ಎಂಬುದನ್ನು ಪರಿಶೀಲಿಸಲು ಇಕೋಪಾರ್ಕ್ ಪೊಲೀಸರು ಘಟನೆಯ ತನಿಖೆ ನಡೆಸುತ್ತಿದ್ದಾರೆ.

ಆಸ್ಪತ್ರೆಯ ಮೂಲಗಳ ಪ್ರಕಾರ ದಂಪತಿಗಳ ಪರಿಸ್ಥಿತಿ ಗಂಭೀರವಾಗಿದೆ, ಅವರ ದೇಹದ ಬಹುತೇಕ ಭಾಗಗಳು ಸುಟ್ಟುಹೋಗಿವೆ.

ಇದನ್ನೂ ಓದಿ: ಚಳಿಗೆ ಮೈ ಬಿಸಿ ಮಾಡಿಕೊಳ್ಳಲು ಹೋದ ಮೂವರು ಕಾರ್ಮಿಕರು ಬೆಂಕಿಗಾಹುತಿ; ಓರ್ವ ಸಾವು, ಇಬ್ಬರಿಗೆ ಸುಟ್ಟ ಗಾಯ

ಹಾವೇರಿ: ಸಾಲ ನೀಡಲು ನಿರಾಕರಿಸಿದ ಬ್ಯಾಂಕ್​ಗೆ ಬೆಂಕಿ ಹಚ್ಚಿದ ಭೂಪ; ಆರೋಪಿ ಪೊಲೀಸ್ ವಶಕ್ಕೆ