ಹಾಸನ: ಗೆಳತಿ ಜೊತೆ ಸುತ್ತಾಡಲು OLXನಲ್ಲಿ ಮಾರಾಟಕ್ಕಿಟ್ಟಿದ್ದ ಬೈಕ್ ಕಳ್ಳತನ ಮಾಡಿ ಖದೀಮ ಸಿಕ್ಕಿಬಿದ್ದಿರುವ ಘಟನೆ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದಲ್ಲಿ ನಡೆದಿದೆ. ಹಾಸನದ ರೈಲ್ವೆ ನಿಲ್ದಾಣ ಬಳಿ ಆರೋಪಿ ಪ್ರಮೋದ್ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಶ್ರವಣಬೆಳಗೊಳದ ಪುನೀತ್ ಎಂಬುವರು ತಮ್ಮ ಯಮಹ ಬೈಕ್ ಮಾರಾಟದ ಬಗ್ಗೆ OLXನಲ್ಲಿ ಜಾಹೀರಾತು ನೀಡಿದ್ರು. ಮಾರಾಟಕ್ಕಿಟ್ಟಿದ್ದ ಬೈಕ್ ಅನ್ನು ಖರೀದಿ ಮಾಡೋದಾಗಿ ಮಾಲೀಕರನ್ನು ಪ್ರಮೋದ್ ಸಂಪರ್ಕಿಸಿದ್ದಾನೆ. ಫೆಬ್ರವರಿ 9 ರಂದು ಟೆಸ್ಟ್ ಡ್ರೈವ್ಗೆಂದು ಹೋಗಿ ಆರೋಪಿ ಪ್ರಮೋದ್(19) ಬೈಕ್ ಸಮೇತ ಎಸ್ಕೇಪ್ ಆಗಿದ್ದಾನೆ.
ಬೈಕ್ ಕಳುವಾದ ಬಗ್ಗೆ ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಮಾಲೀಕರು ದೂರು ದಾಖಲಿಸಿದ್ದರು. ನಿನ್ನೆ ಹಾಸನದ ರೈಲ್ವೆ ನಿಲ್ದಾಣದ ಬಳಿ ಬೈಕ್ ಸಮೇತ ಆಲೂರು ಮೂಲದ ಆರೋಪಿ ಪ್ರಮೋದ್ನನ್ನು ಪೊಲೀಸರು ಬಂಧಿಸಿದ್ದಾರೆ.