ಒಂದು ಕಪ್ ಚಹಾ ಕೊಡಲಿಲ್ಲ ಅಂತಾ ಸಹೋದರನನ್ನೇ ಕೊಚ್ಚಿ ಕೊಂದ ಕ್ರೂರಿ!

ಯಾದಗಿರಿ: ಆಸ್ತಿಗಾಗಿ ಅದೆಷ್ಟೋ ದಾಯಾದಿಗಳ ಮಧ್ಯೆ ಕಲಹ ನಡೆದಿದೆ. ಇದೂ ಅಷ್ಟೇ.. ದಾಯಾದಿಗಳ ಕಲಹವೇ. ಆದ್ರೆ ಕೊಲೆ ನಡೆದಿದ್ದು ಕೇವಲ ಒಂದು ಕಪ್ ಟೀಗಾಗಿ. ಇಷ್ಟಕ್ಕೂ ಇಲ್ಲಿ ಕೊಲೆಯಾಗಿದ್ದು ನಾಗರಾಜ್. ಯಾದಗಿರಿ ಜಿಲ್ಲೆ ವಡಗೇರ ತಾಲೂಕಿನ ಕಾಡಮಗೇರ ಗ್ರಾಮದ ನಿವಾಸಿ. ಬಾಲ್ಯದಲ್ಲೇ ತಂದೆ ಕಳೆದುಕೊಂಡಿದ್ದ ನಾಗರಾಜ್, ಸಣ್ಣದೊಂದು ಟೀ ಅಂಗಡಿ ಇಟ್ಕೊಂಡು ತಾಯಿಯೊಂದಿಗೆ ಜೀವನ ಸಾಗಿಸುತ್ತಿದ್ದ. ಒಂದು ಕಪ್ ಟೀಗಾಗಿ ಮರ್ಡರ್​: ನಿನ್ನೆ ಮಧ್ಯಾಹ್ನ ಮನೆ ಮುಂದಿನ ಮಂಚದ ಮೇಲೆ ಮಲಗಿದ್ದ. ಇದೇ ಹೊತ್ತಿಗೆ ಎಂಟ್ರಿ ಕೊಟ್ಟಿದ್ದೇ […]

ಒಂದು ಕಪ್ ಚಹಾ ಕೊಡಲಿಲ್ಲ ಅಂತಾ ಸಹೋದರನನ್ನೇ ಕೊಚ್ಚಿ ಕೊಂದ ಕ್ರೂರಿ!
Follow us
ಸಾಧು ಶ್ರೀನಾಥ್​
|

Updated on:Feb 18, 2020 | 2:05 PM

ಯಾದಗಿರಿ: ಆಸ್ತಿಗಾಗಿ ಅದೆಷ್ಟೋ ದಾಯಾದಿಗಳ ಮಧ್ಯೆ ಕಲಹ ನಡೆದಿದೆ. ಇದೂ ಅಷ್ಟೇ.. ದಾಯಾದಿಗಳ ಕಲಹವೇ. ಆದ್ರೆ ಕೊಲೆ ನಡೆದಿದ್ದು ಕೇವಲ ಒಂದು ಕಪ್ ಟೀಗಾಗಿ. ಇಷ್ಟಕ್ಕೂ ಇಲ್ಲಿ ಕೊಲೆಯಾಗಿದ್ದು ನಾಗರಾಜ್. ಯಾದಗಿರಿ ಜಿಲ್ಲೆ ವಡಗೇರ ತಾಲೂಕಿನ ಕಾಡಮಗೇರ ಗ್ರಾಮದ ನಿವಾಸಿ. ಬಾಲ್ಯದಲ್ಲೇ ತಂದೆ ಕಳೆದುಕೊಂಡಿದ್ದ ನಾಗರಾಜ್, ಸಣ್ಣದೊಂದು ಟೀ ಅಂಗಡಿ ಇಟ್ಕೊಂಡು ತಾಯಿಯೊಂದಿಗೆ ಜೀವನ ಸಾಗಿಸುತ್ತಿದ್ದ.

ಒಂದು ಕಪ್ ಟೀಗಾಗಿ ಮರ್ಡರ್​: ನಿನ್ನೆ ಮಧ್ಯಾಹ್ನ ಮನೆ ಮುಂದಿನ ಮಂಚದ ಮೇಲೆ ಮಲಗಿದ್ದ. ಇದೇ ಹೊತ್ತಿಗೆ ಎಂಟ್ರಿ ಕೊಟ್ಟಿದ್ದೇ ಈ ಭೂಪ ಸಾಯಿಬಣ್ಣ. ಸಂಬಂಧದಲ್ಲಿ ದೊಡ್ಡಪ್ಪನ ಮಗ. ಅಂದ್ರೆ ಸಹೋದರನಾಗಬೇಕು. ಒಂದು ಕಪ್ ಟೀ ಕೊಡು ಅಂತಾ ನಾಗರಾಜ್​ಗೆ ಕೇಳಿದ್ದಾನೆ. ಆದ್ರೆ, ನಾಗರಾಜ್​ ಕೊಡಲ್ಲ ಅಂದಿದ್ದಾನೆ. ಇಷ್ಟಕ್ಕೆ ರೊಚ್ಚಿಗೆದ್ದ ಸಾಯಿಬಣ್ಣ, ಮಲಗಿದ್ದ ನಾಗರಾಜ್ ಮೇಲೆರಗಿದ್ದಾನೆ. ನೋಡ ನೋಡ್ತಿದ್ದಂತೆ ಕೊಡಲಿಯಿಂದ ಕೊಚ್ಚಿ ಕೊಲೆಗಿದ್ದಾನೆ.

ಇನ್ನು, ಸಾಯಿಬಣ್ಣ ಆಗಾಗ ಬಂದು ಟೀ ಕುಡಿದು ದುಡ್ಡು ಕೊಡದೇ ಹೋಗ್ತಿದ್ದನಂತೆ. ಕೇಳಿದ್ರೆ ಅಕೌಂಟ್​ಗೆ ಹಚ್ಚು ಅಂತಾ ಹೇಳ್ತಿದ್ದನಂತೆ. ನಿನ್ನೆಯೂ ಪುಕ್ಸಟ್ಟೆ ಟೀ ಕೇಳಿದ್ದಕ್ಕೆ ನಾಗರಾಜ್ ಕೊಡಲ್ಲ ಅಂದಿದ್ದಾನೆ. ಅಷ್ಟಕ್ಕೆ ಈ ಸಾಬಣ್ಣ ಅಟ್ಯಾಕ್ ಮಾಡಿದ್ದಾನೆ. ಡೆಡ್ಲಿ ಹಲ್ಲೆ ಬಳಿಕ ನಾಗರಾಜ್ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡ್ತಿದ್ದ. ಜೀವ ಇದೆ ಅಂತಾ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ರು. ಆದ್ರೆ, ಆದಾಗಲೇ ನಾಗರಾಜ್ ಪ್ರಾಣಬಿಟ್ಟಿದ್ದ.

ಸುದ್ದಿ ತಿಳಿದ ವಡಗೇರ ಪೊಲೀಸರು ಸ್ಥಳಕ್ಕೆ ಬಂದು ಆರೋಪಿ ಸಾಯಿಬಣ್ಣನನ್ನು ಬಂಧಿಸಿದ್ರು. ಇನ್ನು, ಆರೋಪಿ ಸಾಯಿಬಣ್ಣ ಮಾನಸಿಕ ಅಸ್ವಸ್ಥ ಅಂತಾ ಗ್ರಾಮಸ್ಥರು ಹಾಗೂ ಸಂಬಂಧಿಕರು ಹೇಳ್ತಿದ್ದಾರೆ. ಅದೇನೆ ಇರಲಿ, ಒಂದು ಕಪ್ ಟೀ ಕೊಡದಿದ್ದಕ್ಕೆ ಈ ಕ್ರೂರಿ ತನ್ನ ಸಹೋದರನ ಹೆಣ ಕೆಡವಿದ್ದು ನಿಜಕ್ಕೂ ಘೋರ ದುರಂತ.

Published On - 12:54 pm, Tue, 18 February 20

ಬಿಪಿಎಲ್ ಕಾರ್ಡ್ ರದ್ದು: ಸರ್ಕಾರ ನಡೆ ಸ್ವಾಗತಿಸಿದ ಬಿಜೆಪಿ ಎಂಪಿ ರಾಘವೇಂದ್ರ
ಬಿಪಿಎಲ್ ಕಾರ್ಡ್ ರದ್ದು: ಸರ್ಕಾರ ನಡೆ ಸ್ವಾಗತಿಸಿದ ಬಿಜೆಪಿ ಎಂಪಿ ರಾಘವೇಂದ್ರ
ಬಾಲನಟ ರೋಹಿತ್​ಗೆ ಅಪಘಾತ ಆಗಿದ್ದು ಹೇಗೆ? ಈಗ ಆರೋಗ್ಯ ಹೇಗಿದೆ?
ಬಾಲನಟ ರೋಹಿತ್​ಗೆ ಅಪಘಾತ ಆಗಿದ್ದು ಹೇಗೆ? ಈಗ ಆರೋಗ್ಯ ಹೇಗಿದೆ?
PDO ಪರೀಕ್ಷೆಯಲ್ಲೂ ಎಡವಟ್ಟು, ಅರ್ಧಂಬರ್ಧ ಪ್ರಶ್ನೆ ಪತ್ರಿಕೆ ಕಳುಹಿಸಿದ KPSC
PDO ಪರೀಕ್ಷೆಯಲ್ಲೂ ಎಡವಟ್ಟು, ಅರ್ಧಂಬರ್ಧ ಪ್ರಶ್ನೆ ಪತ್ರಿಕೆ ಕಳುಹಿಸಿದ KPSC
ಎಸ್​ಎಸ್​ಎಲ್​ಸಿಯಲ್ಲಿ ಫೇಲ್ ಆಗಿದ್ದಕ್ಕೆ ವಿಗ್ರಹ ವಿರೂಪಗೊಳಿಸಿದ ಬಾಲಕ
ಎಸ್​ಎಸ್​ಎಲ್​ಸಿಯಲ್ಲಿ ಫೇಲ್ ಆಗಿದ್ದಕ್ಕೆ ವಿಗ್ರಹ ವಿರೂಪಗೊಳಿಸಿದ ಬಾಲಕ
ಪ್ರಧಾನಿ ಮೋದಿಯನ್ನು ಆತ್ಮೀಯತೆಯಿಂದ ಬರಮಾಡಿಕೊಂಡ ನೈಜೀರಿಯಾದ ಜನ
ಪ್ರಧಾನಿ ಮೋದಿಯನ್ನು ಆತ್ಮೀಯತೆಯಿಂದ ಬರಮಾಡಿಕೊಂಡ ನೈಜೀರಿಯಾದ ಜನ
ಮಣಿಪುರ ಹಿಂಸಾಚಾರ, ಮುಖ್ಯಮಂತ್ರಿ, ಶಾಸಕರ ಮನೆಗೆ ನುಗ್ಗಲು ಯತ್ನ
ಮಣಿಪುರ ಹಿಂಸಾಚಾರ, ಮುಖ್ಯಮಂತ್ರಿ, ಶಾಸಕರ ಮನೆಗೆ ನುಗ್ಗಲು ಯತ್ನ
ಪತಿ-ಪತ್ನಿ ಒಂದೇ ರಾಶಿಯವರಾಗಿದ್ದರೆ ಏನರ್ಥ? ವಿಡಿಯೋ ನೋಡಿ
ಪತಿ-ಪತ್ನಿ ಒಂದೇ ರಾಶಿಯವರಾಗಿದ್ದರೆ ಏನರ್ಥ? ವಿಡಿಯೋ ನೋಡಿ
ವಾರ ಭವಿಷ್ಯ: ನವೆಂಬರ್​ 18 ರಿಂದ 24ರವರೆಗೆ ವಾರ ಭವಿಷ್
ವಾರ ಭವಿಷ್ಯ: ನವೆಂಬರ್​ 18 ರಿಂದ 24ರವರೆಗೆ ವಾರ ಭವಿಷ್
Nithya Bhavishya: ಈ ರಾಶಿಯವರಿಗೆ ಇಂದು ನಿವೇಶನ ಖರೀದಿಸುವ ಯೋಗವಿದೆ
Nithya Bhavishya: ಈ ರಾಶಿಯವರಿಗೆ ಇಂದು ನಿವೇಶನ ಖರೀದಿಸುವ ಯೋಗವಿದೆ
ರೇಷನ್‌ ಕಾರ್ಡ್ ರದ್ದಾಗಿರುವುದಕ್ಕೆ ಸರ್ಕಾರದ ವಿರುದ್ಧ ಮಹಿಳೆಯರು ಕಿಡಿ
ರೇಷನ್‌ ಕಾರ್ಡ್ ರದ್ದಾಗಿರುವುದಕ್ಕೆ ಸರ್ಕಾರದ ವಿರುದ್ಧ ಮಹಿಳೆಯರು ಕಿಡಿ