ಲೈಂಗಿಕ ಕ್ರಿಯೆಗೆ ಸಹಕರಿಸದ ಚಿಕ್ಕಮ್ಮನನ್ನೇ ಕೊಲೆ ಮಾಡಿದ ಕುಡುಕ!

|

Updated on: Feb 05, 2020 | 1:03 PM

ಆನೇಕಲ್: ಲೈಂಗಿಕ ಕ್ರಿಯೆಗೆ ಸಹಕರಿಸದ ಕಾರಣ ಚಿಕ್ಕಮ್ಮನನ್ನೇ ಕೊಲೆ ಮಾಡಿರುವ ಘಟನೆ ಆನೇಕಲ್ ತಾಲೂಕಿನ ಬನ್ಮೇರುಘಟ್ಟ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 43 ವರ್ಷದ ಯಶೋಧಾ ಅವರನ್ನು ಆರೋಪಿ ವಿಜಯ್ ಹತ್ಯೆ ಮಾಡಿದ್ದಾನೆ. ಫೆ.3ರಂದು ರಾತ್ರಿ ಚಿಕ್ಕಮ್ಮನ ಮನೆಗೆ ಆರೋಪಿ ವಿಜಯ್ ಕುಡಿದು ಬಂದಿದ್ದ. ಊಟ ಮಾಡಿದ ಬಳಿಕ ಯಶೋಧಾ ನಿದ್ರೆಗೆ ಜಾರಿದ್ದರು. ಈ ವೇಳೆ, ತನ್ನೊಟ್ಟಿಗೆ ಲೈಂಗಿಕ ಕ್ರಿಯೆಗೆ ಸಹಕರಿಸಲು ಚಿಕ್ಕಮ್ಮನನ್ನು ಆರೋಪಿ ವಿಜಯ್ ಬಲವಂತ ಮಾಡಿದ್ದಾನೆ. ಲೈಂಗಿಕ ಕ್ರಿಯೆಗೆ ಒಪ್ಪದಿದ್ದ ಹಿನ್ನೆಲೆಯಲ್ಲಿ ಕುತ್ತಿಗೆ ಮೇಲೆ […]

ಲೈಂಗಿಕ ಕ್ರಿಯೆಗೆ ಸಹಕರಿಸದ ಚಿಕ್ಕಮ್ಮನನ್ನೇ ಕೊಲೆ ಮಾಡಿದ ಕುಡುಕ!
Follow us on

ಆನೇಕಲ್: ಲೈಂಗಿಕ ಕ್ರಿಯೆಗೆ ಸಹಕರಿಸದ ಕಾರಣ ಚಿಕ್ಕಮ್ಮನನ್ನೇ ಕೊಲೆ ಮಾಡಿರುವ ಘಟನೆ ಆನೇಕಲ್ ತಾಲೂಕಿನ ಬನ್ಮೇರುಘಟ್ಟ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 43 ವರ್ಷದ ಯಶೋಧಾ ಅವರನ್ನು ಆರೋಪಿ ವಿಜಯ್ ಹತ್ಯೆ ಮಾಡಿದ್ದಾನೆ.

ಫೆ.3ರಂದು ರಾತ್ರಿ ಚಿಕ್ಕಮ್ಮನ ಮನೆಗೆ ಆರೋಪಿ ವಿಜಯ್ ಕುಡಿದು ಬಂದಿದ್ದ. ಊಟ ಮಾಡಿದ ಬಳಿಕ ಯಶೋಧಾ ನಿದ್ರೆಗೆ ಜಾರಿದ್ದರು. ಈ ವೇಳೆ, ತನ್ನೊಟ್ಟಿಗೆ ಲೈಂಗಿಕ ಕ್ರಿಯೆಗೆ ಸಹಕರಿಸಲು ಚಿಕ್ಕಮ್ಮನನ್ನು ಆರೋಪಿ ವಿಜಯ್ ಬಲವಂತ ಮಾಡಿದ್ದಾನೆ. ಲೈಂಗಿಕ ಕ್ರಿಯೆಗೆ ಒಪ್ಪದಿದ್ದ ಹಿನ್ನೆಲೆಯಲ್ಲಿ ಕುತ್ತಿಗೆ ಮೇಲೆ ಕಾಲಿಟ್ಟು ಉಸಿರುಗಟ್ಟಿಸಿ ಚಿಕ್ಕಮ್ಮನನ್ನು ಹತ್ಯೆ ಮಾಡಿದ್ದಾನೆ.

ಯಶೋಧಾ ಹತ್ಯೆ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ವಿಜಯ್​ನನ್ನು ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

Published On - 12:54 pm, Wed, 5 February 20