ಮನೆ ಮಾಲೀಕ ಆಸ್ಪತ್ರೆಗೆ, ನಡುರಾತ್ರಿ ಮನೆಯಲ್ಲಿ ಪೆಟ್ಟಿಗೆ ಕಳ್ಳತನ, ಕಬ್ಬಿಣದ ಪೆಟ್ಟಿಗೆಯಲ್ಲೇನಿತ್ತು?
ಆನೇಕಲ್: ಮನೆಯ ಬೀಗ ಒಡೆದು ಮನೆಯಲ್ಲಿದ್ದ ಕಬ್ಬಿಣದ ಪೆಟ್ಟಿಗೆ, ಅದರಲ್ಲಿದ್ದ ಹಣ ಹಾಗೂ ದಾಖಲೆ ಪತ್ರಗಳನ್ನ ಕದ್ದಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ಲಿನ ಶೆಟ್ಟಿಹಳ್ಳಿಯಲ್ಲಿ ನಡೆದಿದೆ. ಮನೆ ಮಾಲೀಕ ಮುನಿರೆಡ್ಡಿ ಎಂಬುವವರು ಬೆಂಗಳೂರಿಗೆ ಆಸ್ಪತ್ರೆ ಎಂದು ಹೋಗಿದ್ದಾರೆ. ಬೆಳಗ್ಗೆ ಮನೆಗೆ ವಾಪಸಾದಾಗ ದೊಡ್ಡ ಶಾಕ್ ಕಾದಿತ್ತು. ಅವರ ಮನೆಯಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ. ಕಳೆದ ರಾತ್ರಿ 12 ಗಂಟೆಯಿಂದ 3ಗಂಟೆಯ ಸಮಯದಲ್ಲಿ ಮನೆಗೆ ಬಂದ ಖದೀಮರು ಬಾಗಿಲು ಮುರಿದು ದಾಖಲೆಗಳು ಹಾಗೂ ಹಣ ಇಟ್ಟಿದ್ದ ಕಬ್ಬಿಣದ ಪೆಟ್ಟಿಗೆಯನ್ನು […]
ಆನೇಕಲ್: ಮನೆಯ ಬೀಗ ಒಡೆದು ಮನೆಯಲ್ಲಿದ್ದ ಕಬ್ಬಿಣದ ಪೆಟ್ಟಿಗೆ, ಅದರಲ್ಲಿದ್ದ ಹಣ ಹಾಗೂ ದಾಖಲೆ ಪತ್ರಗಳನ್ನ ಕದ್ದಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ಲಿನ ಶೆಟ್ಟಿಹಳ್ಳಿಯಲ್ಲಿ ನಡೆದಿದೆ. ಮನೆ ಮಾಲೀಕ ಮುನಿರೆಡ್ಡಿ ಎಂಬುವವರು ಬೆಂಗಳೂರಿಗೆ ಆಸ್ಪತ್ರೆ ಎಂದು ಹೋಗಿದ್ದಾರೆ. ಬೆಳಗ್ಗೆ ಮನೆಗೆ ವಾಪಸಾದಾಗ ದೊಡ್ಡ ಶಾಕ್ ಕಾದಿತ್ತು.
ಅವರ ಮನೆಯಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ. ಕಳೆದ ರಾತ್ರಿ 12 ಗಂಟೆಯಿಂದ 3ಗಂಟೆಯ ಸಮಯದಲ್ಲಿ ಮನೆಗೆ ಬಂದ ಖದೀಮರು ಬಾಗಿಲು ಮುರಿದು ದಾಖಲೆಗಳು ಹಾಗೂ ಹಣ ಇಟ್ಟಿದ್ದ ಕಬ್ಬಿಣದ ಪೆಟ್ಟಿಗೆಯನ್ನು ಕದ್ದಿದ್ದಾರೆ. ಪೆಟ್ಟಿಗೆಯಲ್ಲಿ ಅಪಾರ ಪ್ರಮಾಣದ ಜಮೀನು ದಾಖಲೆ ಹಾಗೂ ಎರಡು ಲಕ್ಷ ಹಣ ದೋಚಿದ್ದಾರೆ. ಸ್ಥಳಕ್ಕೆ ಅತ್ತಿಬೆಲೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Published On - 12:14 pm, Thu, 6 February 20