Crime News: ಬಾಯ್​ಫ್ರೆಂಡ್​ಗೆ ಥಳಿಸಿ, ಸಾಫ್ಟ್​ವೇರ್ ಇಂಜಿನಿಯರ್ ಮೇಲೆ 10 ಕಾಮುಕರಿಂದ ಸಾಮೂಹಿಕ ಅತ್ಯಾಚಾರ

Jharkhand News: ಸಾಫ್ಟ್​ವೇರ್ ಇಂಜಿನಿಯರ್ ಮೇಲೆ ಅತ್ಯಾಚಾರವೆಸಗಿದ ಬಳಿಕ ಆರೋಪಿಗಳು ಆಕೆಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಹೋಗುವಾಗ ಆಕೆಯ ಬ್ಯಾಗ್ ಮತ್ತು ಮೊಬೈಲ್ ಫೋನ್ ಕೂಡ ತೆಗೆದುಕೊಂಡು ಹೋಗಿದ್ದಾರೆ.

Crime News: ಬಾಯ್​ಫ್ರೆಂಡ್​ಗೆ ಥಳಿಸಿ, ಸಾಫ್ಟ್​ವೇರ್ ಇಂಜಿನಿಯರ್ ಮೇಲೆ 10 ಕಾಮುಕರಿಂದ ಸಾಮೂಹಿಕ ಅತ್ಯಾಚಾರ
ಅತ್ಯಾಚಾರ
Updated By: ಸುಷ್ಮಾ ಚಕ್ರೆ

Updated on: Oct 22, 2022 | 1:52 PM

ಜಾರ್ಖಂಡ್: ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯಲ್ಲಿ 26 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ (Software Engineer) ಮೇಲೆ ಸುಮಾರು 10 ಮಂದಿ ಸಾಮೂಹಿಕ ಅತ್ಯಾಚಾರವೆಸಗಿರುವ (Gang Rape) ಘಟನೆ ಬೆಳಕಿಗೆ ಬಂದಿದೆ. ಜಾರ್ಖಂಡ್‌ನಲ್ಲಿ ವಾಸವಾಗಿರುವ ಮಹಿಳೆ ವರ್ಕ್ ಫ್ರಂ ಹೋಂ (Work From Home) ಮಾಡುತ್ತಿದ್ದು, ಗುರುವಾರ ಸಂಜೆ ತನ್ನ ಪ್ರಿಯಕರನೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಅಡ್ಡ ಹಾಕಿದ ಅಪರಿಚಿತರು ಆಕೆಯನ್ನು ಕಿಡ್ನಾಪ್ ಮಾಡಿ, ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಆಕೆಯ ಜೊತೆಗಿದ್ದ ಯುವಕನನ್ನು ಥಳಿಸಿ, ಹಿಂಸೆ ನೀಡಿದ್ದಾರೆ.

8-10 ಪುರುಷರು ಆ ಯುವತಿ ಮತ್ತು ಆಕೆಯ ಪ್ರಿಯಕರನನ್ನು ತಡೆದು, ಆಕೆಗೆ ಬೈಕ್​ನಿಂದ ಕೆಳಗಿಳಿಯಲು ಹೇಳಿದ್ದಾರೆ. ನಂತರ ಆಕೆಯ ಗೆಳೆಯನನ್ನು ಥಳಿಸಿದ್ದಾರೆ. ಬಳಿಕ ಆ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Crime News: ಹೈದರಾಬಾದ್ ಶಾಲೆಯಲ್ಲಿ 4 ವರ್ಷದ ಬಾಲಕಿ ಮೇಲೆ ಪ್ರಿನ್ಸಿಪಾಲ್ ಚಾಲಕನಿಂದ ಅತ್ಯಾಚಾರ!

ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅತ್ಯಾಚಾರ ನಡೆಸಿದವರನ್ನು ಗುರುತಿಸಲು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಶುತೋಷ್ ಶೇಖರ್ ತಿಳಿಸಿದ್ದಾರೆ. ಅತ್ಯಾಚಾರಕ್ಕೊಳಗಾದ ಯುವತಿ ಪ್ರಸಿದ್ಧ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಕೆಯ ಮೇಲೆ ಅತ್ಯಾಚಾರವೆಸಗಿದ ಬಳಿಕ ಆರೋಪಿಗಳು ಆಕೆಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಹೋಗುವಾಗ ಆಕೆಯ ಬ್ಯಾಗ್ ಮತ್ತು ಮೊಬೈಲ್ ಫೋನ್ ಕೂಡ ತೆಗೆದುಕೊಂಡು ಹೋಗಿದ್ದಾರೆ. ನಂತರ ಆ ಯುವತಿ ಹೇಗೋ ಮನೆಗೆ ತಲುಪಿದ್ದಾಳೆ. ಬಳಿಕ ಈ ಘಟನೆಯ ಬಗ್ಗೆ ತನ್ನ ಮನೆಯವರಿಗೆ ತಿಳಿಸಿದ್ದಾಳೆ. ಆಗ ಆಕೆಯ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳೀಯ ಆಸ್ಪತ್ರೆಯಲ್ಲಿ ಆಕೆಯ ವೈದ್ಯಕೀಯ ತಪಾಸಣೆ ನಡೆಸಲಾಗಿದೆ.

ಇದನ್ನೂ ಓದಿ: Hyderabad: 4 ವರ್ಷದ ಬಾಲಕಿಯ ಅತ್ಯಾಚಾರ ಪ್ರಕರಣ, ಶಾಲೆಯನ್ನು ಮುಚ್ಚಲು ಆದೇಶ ನೀಡಿದ ಸರ್ಕಾರ

ತನ್ನ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಆ ಯುವತಿ ಹೇಳಿಕೆ ನೀಡಿದ್ದು, ನಾನು ಮನೆಯಿಂದಲೇ ಕೆಲಸ ಮಾಡುತ್ತಿದ್ದೆ. ಆಫೀಸ್ ಕೆಲಸ ಮುಗಿಸಿದ ನಂತರ ಗುರುವಾರ ಸಂಜೆ ನನ್ನ ಫ್ರೆಂಡ್ ಜೊತೆ ಬೈಕ್​ನಲ್ಲಿ ಹೋಗುತ್ತಿದ್ದಾಗ ನಮ್ಮನ್ನು ಅಡ್ಡಗಟ್ಟಿದ ಗುಂಪೊಂದು ನನ್ನ ಮೇಲೆ ಅತ್ಯಾಚಾರ ನಡೆಸಿದೆ ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ