ಜಗಳದ ವೇಳೆ ಮರ್ಮಾಂಗ ಹಿಸುಕಿದ ಕೃತ್ಯ ಕೊಲೆ ಯತ್ನವಲ್ಲ: ಆರೋಪಿಯ ಶಿಕ್ಷೆ ಕಡಿತಗೊಳಿಸಿದ ಹೈಕೋರ್ಟ್

ಜಗಳ ತೆಗೆದು ಮರ್ಮಾಂಗ ಹಿಸುಕಿದ್ದ ಪ್ರಕರಣವನ್ನು ಚಿಕ್ಕಮಗಳೂರಿನ ಸೆಷನ್ಸ್ ಕೋರ್ಟ್ ಕೊಲೆಯತ್ನವೆಂದು ತೀರ್ಪು ನೀಡಿತ್ತು. ಆದೇಶ ಪ್ರಶ್ನಿಸಿ ಆರೋಪಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್, ಪ್ರಕರಣವನ್ನು ಗಾಯದ ಕೇಸ್​ ಎಂದು ಪರಿಗಣಿಸಿದೆ.

ಜಗಳದ ವೇಳೆ ಮರ್ಮಾಂಗ ಹಿಸುಕಿದ ಕೃತ್ಯ ಕೊಲೆ ಯತ್ನವಲ್ಲ: ಆರೋಪಿಯ ಶಿಕ್ಷೆ ಕಡಿತಗೊಳಿಸಿದ ಹೈಕೋರ್ಟ್
ಕರ್ನಾಟಕ ಹೈಕೋರ್ಟ್
Rakesh Nayak Manchi

Updated on: Jun 26, 2023 | 9:36 PM

ಬೆಂಗಳೂರು: ಜಗಳದ ವೇಳೆ ಮರ್ಮಾಂಗ ಹಿಸುಕಿದ ಕೃತ್ಯ ಕೊಲೆ ಯತ್ನವಲ್ಲ ಎಂದು ಪರಿಗಣಿಸಿದ ಕರ್ನಾಟಕ ಹೈಕೋರ್ಟ್ (Karnataka High Court), ಚಿಕ್ಕಮಗಳೂರಿನ (Chikkamagaluru) ಸೆಷನ್ಸ್ ಕೋರ್ಟ್ ಆರೋಪಿಗೆ ವಿಧಿಸಿದ್ದ 7 ವರ್ಷಗಳ ಶಿಕ್ಷೆಯ ಪ್ರಮಾಣವನ್ನು 3 ವರ್ಷಕ್ಕೆ ಕಡಿತಗೊಳಿಸಿ ಆದೇಶಿಸಿದೆ. ಹೈಕೋರ್ಟ್ ಪ್ರಕರಣವನ್ನು ತೀವ್ರ ಗಾಯದ ಕೇಸ್ ಎಂದು ಪರಿಗಣಿಸಿ ಈ ತೀರ್ಪು ನೀಡಿದೆ.

ನರಸಿಂಹಸ್ವಾಮಿ ಉತ್ಸವದ ವೇಳೆ ಓಂಕಾರಪ್ಪ ಎಂಬವರು ನೃತ್ಯ ಮಾಡುತ್ತಿದ್ದ. ಈ ವೇಳೆ ಪರಮೇಶ್ವರಪ್ಪ ಸ್ಥಳಕ್ಕೆ ಆಗಮಿಸಿ ಜಗಳ ತೆಗೆದು ಮರ್ಮಾಂಗ ಹಿಸುಕಿದ್ದ. ಪ್ರಕರಣ ಸಂಬಂಧ ಓಂಕಾರಪ್ಪ ಅವರು ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ್ದ ಚಿಕ್ಕಮಗಳೂರಿನ ಸೆಷನ್ಸ್ ಕೋರ್ಟ್, ಕೊಲೆಯತ್ನವೆಂದು ತೀರ್ಪು ನೀಡಿ 7 ವರ್ಷ ಜೈಲು ಶಿಕ್ಷೆ ವಿಧಿಸಿತ್ತು.

ಇದನ್ನೂ ಓದಿ: ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದಾನೆಂದು ವಿವಾಹಿತೆ ಆರೋಪಿಸುವಂತಿಲ್ಲ; ಕರ್ನಾಟಕ ಹೈಕೋರ್ಟ್ ತೀರ್ಪು

ಚಿಕ್ಕಮಗಳೂರಿನ ಸೆಷನ್ಸ್ ಕೋರ್ಟ್ ಆದೇಶ ಪ್ರಶ್ನಿಸಿ ಪರಮೇಶ್ವರಪ್ಪ ಮೇಲ್ಮನವಿ ಸಲ್ಲಿಸಿದ್ದ. ಅದರಂತೆ ವಿಚಾರಣೆ ನಡೆಸಿದ ನ್ಯಾ. ಜೆ.ನಟರಾಜನ್ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ, ಪ್ರಕರಣವನ್ನು ಕೊಲೆ ಯತ್ನವಲ್ಲ, ಗಾಯಗೊಳಿಸಿದ ಕೃತ್ಯ ಎಂದು ಪರಿಗಣಿಸಿ 7 ವರ್ಷಗಳ ಶಿಕ್ಷೆಯನ್ನು 3 ವರ್ಷಕ್ಕೆ ಕಡಿತ ಮಾಡಿ ಆದೇಶಿಸಿದೆ.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Rakesh Nayak Manchi

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್​ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ.

Follow Us