Karnataka police: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ವಜಾ, ಅಮಾನತು ಪ್ರಕರಣಗಳು ಹೆಚ್ಚಾಗ್ತಿವೆ, ಕಾರಣವೇನು?

| Updated By: Digi Tech Desk

Updated on: Nov 04, 2022 | 12:35 PM

2019-22ರ ಸಾಲಿನಲ್ಲಿ ನಾಲ್ವರು ವಜಾ ಆಗಿದ್ದು, 236 ಪೊಲೀಸರು ಅಮಾನತುಗೊಂಡಿದ್ದಾರೆ. ಇದುವರೆಗೆ ಒಟ್ಟು 468 ಪೊಲೀಸ್ ಸಿಬ್ಬಂದಿ ವಿರುದ್ಧ ಇಲಾಖಾ ತನಿಖೆ ನಡೆದಿದೆ.

Karnataka police: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ವಜಾ, ಅಮಾನತು ಪ್ರಕರಣಗಳು ಹೆಚ್ಚಾಗ್ತಿವೆ, ಕಾರಣವೇನು?
ರಾಜ್ಯ ಪೊಲೀಸ್ ಇಲಾಖೆಯಲ್ಲಿ ವಜಾ, ಅಮಾನತು ಪ್ರಕರಣಗಳು ಹೆಚ್ಚಾಗ್ತಿವೆ, ಕಾರಣವೇನು?
Follow us on

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ (Karnataka police) ವಜಾ, ಅಮಾನತು ಪ್ರಕರಣಗಳು (suspend and dismiss) ಹೆಚ್ಚಾಗ್ತಿವೆ. 2019-2022ರ ಸಾಲಿನಲ್ಲೇ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಅಮಾನತುಗೊಂಡಿದ್ದಾರೆ. 2019-22ರ ಸಾಲಿನಲ್ಲಿ ನಾಲ್ವರು ವಜಾ ಆಗಿದ್ದು, 236 ಪೊಲೀಸರು ಅಮಾನತುಗೊಂಡಿದ್ದಾರೆ. ಇದುವರೆಗೆ ಒಟ್ಟು 468 ಪೊಲೀಸ್ ಸಿಬ್ಬಂದಿ ವಿರುದ್ಧ ಇಲಾಖಾ ತನಿಖೆ ನಡೆದಿದೆ. ಪಿಎಸ್ಐ ಹಗರಣ ಪ್ರಕರಣದಲ್ಲೇ (psi recruitment scam) ಅತಿ ಹೆಚ್ಚು ಅಮಾನತು, ವಜಾ ಪ್ರಕರಣಗಳು ಕಂಡುಬಂದಿವೆ.

ಸಾರಾಸಗಟಾಗಿ ಎಡಿಜಿಪಿ ಅಮೃತ್​ ಪಾಲ್​ ಸೇರಿದಂತೆ 28 ಪೊಲೀಸರು ಅಮಾನತು:

ಪಿಎಸ್​ಐ ನೇಮಕಾತಿ ಹಗರಣದಲ್ಲಿ ಸಾರಾಸಗಟಾಗಿ ಎಡಿಜಿಪಿ ಅಮೃತ್​ ಪಾಲ್​ ಸೇರಿದಂತೆ, ಒಟ್ಟು 28 ಪೊಲೀಸರು ಅಮಾನತುಗೊಂಡಿದ್ದಾರೆ. ಈ ಮಧ್ಯೆ, 108 ಪೊಲೀಸರು ಅಕ್ರಮವಾಗಿ ಆಯ್ಕೆಯಾಗಿರುವ ಅನುಮಾನ ವ್ಯಕ್ತವಾಗಿದೆ. 2021ರ ಸಾಲಿನಲ್ಲಿ 21 ಪೊಲೀಸರು ಸೇವೆಯಿಂದಲೇ ವಜಾಗೊಂಡಿದ್ದಾರೆ. ಇದು ಇಷ್ಟಕ್ಕೆ ನಿಲ್ಲದು! ಪೊಲೀಸ್​ ಸಬ್​ಇನ್ಸ್​ಪೆಕ್ಟರ್​​​ ನೇಮಕಾತಿ ಹಗರಣದ ತನಿಖೆ ಇನ್ನೂ ಮುಂದುವರಿದಿದೆ. ಮೊನ್ನೆಯಷ್ಟೇ ನಾಲ್ಕಾರು ಚಾರ್ಜ್​ಶೀಟ್​ಗಳನ್ನು ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ, ಇಲಾಖಾ ತನಿಖೆ ನಡೆದಿರುವುದರಿಂದ ಪಿಎಸೈ ಪ್ರಕರಣದಲ್ಲಿಯೇ ಮತ್ತಷ್ಟು ಪೊಲೀಸರ ಸಸ್ಪೆನ್ಷನ್ ಹಾಗು ಡಿಸ್ಮಿಸ್ ಗಳಾಗುವ ಸಾಧ್ಯತೆ ಹೆಚ್ಚಾಗಿದೆ.

Published On - 12:14 pm, Fri, 4 November 22